ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ವೃತ್ತಿ ರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯುವುದು
Published 2 ಏಪ್ರಿಲ್ 2024, 23:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಜಾಗ್ರತರಾಗಿರಿ. ಕಾರ್ಯನಿರ್ವಹಣೆಯಲ್ಲಿ ನಿಮ್ಮಿಂದ ದೋಷಗಳು ಸಂಭವಿಸಬಹುದು. ಮೆಕಾನಿಕಲ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಪಡುವುದು ಅಗತ್ಯ .
ವೃಷಭ
ವ್ಯವಹಾರದಲ್ಲಿ ಸಂಬಂಧಿಗಳನ್ನು ಸೇರಿಸಿಕೊಂಡು ನೂತನ ಘಟಕಗಳನ್ನು ಆರಂಭಿಸಬಹುದು. ಕಾರ್ಯರಂಗದಲ್ಲಿ ಅನುಭವಸ್ಥರ ಸಹಯೋಗದಿಂದಾಗಿ ಪ್ರಗತಿ ನೋಡಬಹುದು.
ಮಿಥುನ
ಭಾವನಾತ್ಮಕ ಆಲೋಚನೆಗಳನ್ನು ಬದಿಗೆ ಸರಿಸಿ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯ. ಬಂಗಾರವನ್ನು ಜಾಗ್ರತೆ ಮಾಡುವುದು ಉತ್ತಮ. ಕೆಲಸಗಳಿಗೆ ಹಣದ ಅಡಚಣೆ ಇರುವುದಿಲ್ಲ.
ಕರ್ಕಾಟಕ
ಜವಾಬ್ದಾರಿಯನ್ನೂ ಯೋಚಿಸದೇ, ಅವಸರದಲ್ಲಿ ಒಪ್ಪಿಕೊಳ್ಳಬೇಡಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಕ್ರಮದಿಂದ ಮತ್ತು ಮಾಧ್ಯಮದಿಂದ ದೂರ ಉಳಿಯುವ ಬಗ್ಗೆ ತೀರ್ಮಾನಿಸುವುದು ಒಳ್ಳೆಯದು.
ಸಿಂಹ
ಸಾಂಸಾರಿಕ ವಿಷಯದಲ್ಲಿ ಆರಿಸಿಕೊಳ್ಳುವ ನಿರ್ಧಾರಗಳು ಹಿರಿಯರ ಕೋಪಕ್ಕೆ ಕಾರಣವಾಗುತ್ತದೆ. ಕಿರು ಸಂಚಾರವು ಇರುವುದರಿಂದ ಕಾಲಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲು ಅಡ್ಡಿ ಉಂಟಾಗಬಹುದು.
ಕನ್ಯಾ
ಪಠ್ಯೇತರ ಕಲಿಕೆ ಅದರಲ್ಲೂ ಚಿತ್ರಕಲೆಯಲ್ಲಿನ ಆಸಕ್ತಿಯಿಂದಾಗಿ ಹೆಚ್ಚಿನ ಕಲಿಕೆಗಾಗಿ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಪ್ರಗತಿ ಪ್ರಾಪ್ತಿ .
ತುಲಾ
ಆಗಾಗ ಹಲವಾರು ವಿಚಾರಗಳಲ್ಲಿ ತೊಂದರೆ ಕಂಡುಬಂದರೂ ಆಂಜನೇಯನ ಆರಾಧನೆ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದು. ಹೊರದೇಶದಲ್ಲಿ ಉದ್ಯೋಗದ ಅನ್ವೇಷಣೆ ಮಾಡುವುದಕ್ಕೆ ಸುದಿನ.
ವೃಶ್ಚಿಕ
ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡದ ಜತೆಯಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ಆತ್ಮ ವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ.
ಧನು
ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭವು ಒದಗಿ ಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಸಿಂಹಾವಲೋಕನದ ಅಗತ್ಯವಿದೆ. ಗೃಹ ನಿರ್ಮಾಣದ ಯೋಚನೆಯು ಕಾರ್ಯರೂಪಕ್ಕೆ ಬರಲಿದೆ.
ಮಕರ
ನಿಮ್ಮ ವಿರುದ್ಧವಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು. ಎದುರಾಗುವ ಸ್ಪರ್ಧೆಯಲ್ಲಿ ಪ್ರಮುಖ ಸ್ಥಾನ ಪಡೆಯಲು ತಯಾರಿ ನಡೆಸುವಿರಿ. ಮಕ್ಕಳ ಕೆಲಸಗಳ ಬಗ್ಗೆ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ.
ಕುಂಭ
ಕುಟುಂಬದ ಮಾರ್ಗಸೂಚಕರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಪತ್ತೆಯಾಗುವುವು. ನಿಮ್ಮ ನಿಷ್ಠೂರ ಮಾತುಗಾರಿಕೆಯಿಂದಾಗಿ ಸಹೋದರರ ನಡುವೆ ಕಲಹ ಉಂಟಾಗಬಹುದು.
ಮೀನ
ದೀರ್ಘಕಾಲದಿಂದಿರುವ ಆರೋಗ್ಯ ಸಮಸ್ಯೆಗೆ ಸೂಕ್ತ ವೈದ್ಯರಿಂದ ಸಲಹೆ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣುವಿರಿ. ವೃತ್ತಿ ರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು.