ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿ.5 – ಈ ರಾಶಿಯವರ ಶತ್ರುಗಳ ಬಣ್ಣ ಬಯಲಾಗಲಿದೆ
Published 4 ಡಿಸೆಂಬರ್ 2023, 22:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯವಹಾರಕ್ಕೆ ಸಂಬಂಧಿಸಿದಂತೆ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ. ಬಂಧುಗಳೊಂದಿಗೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ನಿಮ್ಮ ಜೀವನ ಶೈಲಿಯ ವೆಚ್ಚ ಅಧಿಕವಾಗುತ್ತದೆ.
ವೃಷಭ
ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿಕೊಳ್ಳುವ ಪ್ರಯತ್ನಿಸಬಹುದು. ಕೇಟರಿಂಗ್ ಮತ್ತು ಹೋಟೆಲ್ ಉದ್ಯಮದವರಿಗೆ ಶುಭ ದಿನ. ಅಮೂಲ್ಯ ವಸ್ತು, ವಿಚಾರದ ನಷ್ಟವು ಮನಸ್ಸಿಗೆ ನೋವು ಉಂಟುಮಾಡಲಿದೆ.
ಮಿಥುನ
ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣದಿಂದ ವಿವಾಹಕ್ಕೆ ಸಂಬಂಧಪಟ್ಟ ಭಿನ್ನಾಭಿಪ್ರಾಯ ದೂರ ಮಾಡಿಕೊಳ್ಳುವಿರಿ. ನವ ದಂಪತಿಗಳಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ.
ಕರ್ಕಾಟಕ
ತಾಯಿಯ ಆರೋಗ್ಯ ಸುಧಾರಿಸಲು ಔಷಧದ ಜತೆ ಧಾರ್ಮಿಕ ಮಾರ್ಗ ಅನುಸರಿಸುವುದು ಉತ್ತಮ. ಪದವೀಧರರಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಸ್ಥಳ ಲಭಿಸಲಿದೆ, ಅಧ್ಯಯನಕ್ಕೆ ಗಣ್ಯರ ಪ್ರೋತ್ಸಾಹ ಸಿಗಲಿದೆ.
ಸಿಂಹ
ನಿಮ್ಮ ಸಾಮರ್ಥ್ಯ, ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆಯಲಿದೆ. ವೃತ್ತಿ ಪರವಾಗಿ ಕಚೇರಿಯಲ್ಲಿ ನಿಮಗೆ ವಿಶೇಷ ಗೌರವ ದೊರೆಯಲಿದೆ. ಕುಟುಂಬದಲ್ಲಿ ಸೌಖ್ಯವಿದ್ದು ಮನೋರಂಜನೆ ಪಡೆಯುವಿರಿ.
ಕನ್ಯಾ
ರಾಜಕೀಯದಲ್ಲಿ ಬೇರೆಯವರಿಂದ ವಂಚನೆ ನೆಡೆದರೂ, ನಿಮಗೆ ಉತ್ತಮ ಭವಿಷ್ಯವಿದೆ. ಸಂಶೋಧಕರಿಗೆ ಹೊಸ ಹೊಸ ಆವಿಷ್ಕಾರಗಳಿಂದ ಜನಪ್ರಿಯತೆ ಉಂಟಾಗುವುದು. ಗೃಹ ಸಾಮಾಗ್ರಿ ಖರೀದಿಯಿಂದ ಖರ್ಚು.
ತುಲಾ
ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು. ಹಿಂದಿನ ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ, ಹೊಸತನದಲ್ಲಿ ಜಯ ಕಾಣುವಿರಿ. ಅನಿರೀಕ್ಷಿತವಾಗಿ ಶತ್ರುಗಳ ಬಣ್ಣ ಬಯಲಾಗಿ ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ.
ವೃಶ್ಚಿಕ
ಕಾರ್ಯಕ್ಷೇತ್ರದಲ್ಲಿ ಹಿಡಿತಕ್ಕೆ ಸಿಕ್ಕದಿರುವ ಕೆಲಸಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಮತ್ತು ಅನುಭವ ಪಡೆದುಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭ.
ಧನು
ಬೇಕರಿ ಮಾರಾಟಗಾರರಿಗೆ ಸಿಹಿ ಪದಾರ್ಥಗಳ ಮಾರಾಟದಿಂದ ಅಧಿಕ ಲಾಭವಿರುವುದು. ಸಾಧ್ಯವಾದರೆ ಆಪ್ತರ ಕಷ್ಟಗಳ ಕಡೆಗೆ ಗಮನಹರಿಸುವುದು ಒಳ್ಳೆಯದು. ಸಾಕು ಪ್ರಾಣಿಯ ಅಗಲಿಕೆಯಿಂದ ಸ್ವಲ್ಪ ಬೇಸರ ಕಾಡುವುದು.
ಮಕರ
ಏರುಪೇರಾಗಿದ್ದ ವ್ಯಾಪಾರ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಳ್ಳಬಹುದು. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ. ಹೊಸದನ್ನು ಕಲಿಯುವ ಉತ್ಸಾಹ ಮೂಡಲಿದೆ.
ಕುಂಭ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದಿರುವ ನಿಮಗೆ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ಅಧಿಕಾರಿಗಳ ಖಾಸಗಿ ಸಂಪರ್ಕದಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಪುಷ್ಟಿ ದೊರೆಯಲಿದೆ.
ಮೀನ
ರಾಜಕೀಯ ವ್ಯಕ್ತಿಗಳು ನಿಮ್ಮ ಪರವಾದ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಮನೆಯಲ್ಲಿನ ವ್ಯವಹಾರಗಳಲ್ಲಿ ಈ ದಿನ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಕಾಣುವಿರಿ. ಜಯ ನಿಮ್ಮದಾಗಲಿದೆ.