ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳಿಂದ ಪೀಡೆಯು ಹೆಚ್ಚಾಗಲಿದೆ
Published 5 ಏಪ್ರಿಲ್ 2024, 23:50 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವಂತ ಪ್ರಯತ್ನದಿಂದ ನಿಮಗೆ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುವ ಸದವಕಾಶ ಈ ದಿನ ಪ್ರಾಪ್ತಿ . ಸಕಾರಾತ್ಮಕ ನಡವಳಿಕೆಗಳಿಂದಾಗಿ ಲಾಭ ಕಂಡುಕೊಳ್ಳಲಿದ್ದೀರಿ.
ವೃಷಭ
ಕಬ್ಬಿಣದ ಕೆಲಸ ಮಾಡುವವರಿಗೆ ಅಧಿಕ ದೇಹಾಯಾಸವಾಗುವ ಸಂಭವವಿದೆ. ಸರ್ಕಾರಿ ನೌಕರರಿಗೆ ಇತರೆ ಕಾರ್ಯಗಳಿಂದ ಅಧಿಕವಾದ ಒತ್ತಡ ಉಂಟಾಗಬಹುದು. ಗಮನವಿಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸುವಿರಿ.
ಮಿಥುನ
ಗುರು ಹಿರಿಯರ ಸಲಹೆ-ಸೂಚನೆಗಳಿಗೆ ಬೆಲೆ ಕೊಟ್ಟು ಕೆಲಸದಲ್ಲಿ ಮುಂದುವರಿಯುವುದು ಉತ್ತಮ. ಕುಟುಂಬದ ವಿಷಯಗಳನ್ನು ಮನೆಯ ವರೊಂದಿಗೆ ಚರ್ಚಿಸಿ. ವಿವಾದಾಸ್ಪದ ವಿಷಯಗಳ ಕಡೆ ಗಮನ ಕೊಡಬೇಡಿ.
ಕರ್ಕಾಟಕ
ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ಮಾರ್ಗದರ್ಶಿಗಳ ಮಾತಿನಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ತಾಮ್ರದ ವಸ್ತುವಿನಿಂದ ಅಥವಾ ಅದರ ಮಾರಾಟದಿಂದ ಲಾಭವಿದೆ.
ಸಿಂಹ
ತೋಟದ ಬೆಳೆಗಳಿಂದ ಉತ್ತಮ ಆದಾಯದೊಂದಿಗೆ ಮುಂದಿನ ಬೆಳೆಯ ವಿಸ್ತರಣೆಯ ಬಗ್ಗೆ ಯೋಚನೆ ನಡೆಸುವಿರಿ. ಮಕ್ಕಳ ಬೆಳವಣಿಗೆಗೆ ಚಿಕಿತ್ಸೆ ಬೇಕಾಗಬಹುದು. ಜೀರ್ಣಾಂಗ ಸಮಸ್ಯೆ ಕಾಡಬಹುದು.
ಕನ್ಯಾ
ಮೇಲಧಿಕಾರಿಯ ಮೃದು ವರ್ತನೆಯಿಂದ ಸರ್ಕಾರದ ಕೆಲಸ ಕಾರ್ಯಗಳಲ್ಲಿ ತೃಪ್ತಿಯುಂಟಾಗಿ, ಯಶಸ್ವಿಯಾಗಿ ಸಂಪೂರ್ಣಗೊಳ್ಳುವುದು. ಬಂಧು ಮಿತ್ರರ ನೆರವು ಸಿಗಲಿದೆ.
ತುಲಾ
ಅಭಿವೃದ್ಧಿಯನ್ನು ಸಹಿಸಲಾಗದ ಜನರ ಮಧ್ಯದಲ್ಲಿ ಜೀವನ ನಡೆಸಬೇಕಾಗುತ್ತದೆ. ಕೃಷಿಗೆ ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ವೃಶ್ಚಿಕ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಜೀವನದಲ್ಲಿ ನಡೆಯಲಿದೆ. ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ. ಬುದ್ಧಿವಂತಿಕೆಯಿಂದ ಬದುಕಬೇಕಾದ ದಿನ.
ಧನು
ಸಹೋದರರೊಂದಿಗಿನ ಮನಸ್ತಾಪ ಮುಕ್ತವಾದ ಮಾತುಕತೆಯಿಂದಾಗಿ ದೂರಾಗುವುದು. ನಿಲುವು ಸ್ಪಷ್ಟಪಡಿಸಿಕೊಂಡಲ್ಲಿ ಗೆಲುವು ನಿಮ್ಮದಾಗುವುದು. ಮಾಡಿದ ಪಾಪ ತೊಳೆಯುವುದು.
ಮಕರ
ಹಿತಶತ್ರುಗಳಿಂದ ಪೀಡೆಯು ಹೆಚ್ಚಾಗಿ ಗುರಿಯ ಮಾರ್ಗಕ್ಕೆ ಅಡ್ಡಗಲ್ಲಾಗುವರು. ಸ್ನೇಹಿತರೊಬ್ಬರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವ ಸಂಭವ ಬರಬಹುದು. ನಿಯಮ ಪಾಲನೆ ಮಾಡುವುದನ್ನು ಅಭ್ಯಾಸ ಮಾಡಿ.
ಕುಂಭ
ಕೈಗೊಳ್ಳುವ ವಿಶೇಷ ಹಾಗೂ ಮುಖ್ಯವಾದ ಕೆಲಸದ ಮುಕ್ತಾಯದ ಹಂತ ವಿಳಂಬವಾಗುತ್ತದೆ. ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ. ಕಪ್ಪು ಬಣ್ಣ ಶುಭ ತರಲಿದೆ.
ಮೀನ
ಹೊಸ ಕಟ್ಟಡ ನಿರ್ಮಾಣ ಕಾರ್ಯಗಳ ಒಪ್ಪಂದದ ಏರ್ಪಟ್ಟು ಬಹಳ ಸಂತೋಷವಾಗುವುದು. ಈ ದಿನ ನಿಮಗೆ ಮಾರ್ಗದರ್ಶನಕ್ಕೆ ಕೊರತೆ ಇರುವುದಿಲ್ಲ. ಮನೆಯಲ್ಲಿ ಹಣಕಾಸಿನ ವಿಷಯದಲ್ಲಿ ಚರ್ಚೆ ನಡೆಸುವಿರಿ.