ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಸ್ವಂತ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಲಾಭ
Published 13 ಜೂನ್ 2024, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿದ್ದರೂ ಮನದಲ್ಲಿ ಮಕ್ಕಳ ವಿಚಾರವಾಗಿ ಭಯದ ಭೀತಿ ತೋರಿಬಂದೀತು. ಸ್ವಂತ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಲಾಭ. ಫಲವನ್ನು ನಿರೀಕ್ಷಿಸಬೇಡಿ.
ವೃಷಭ
ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಅಗತ್ಯ ಚರ್ಚೆ ನಡೆಸಿ. ನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ. ಬಹುಜನರ ಒಡನಾಟದಿಂದ ವಿಶ್ವಾಸ, ಪ್ರೀತಿ ಪಡೆಯುವಂತಾಗುವುದು.
ಮಿಥುನ
ಬಂಧುಗಳ ಮೂಲಕ ಹೆಚ್ಚಿನ ಸಹಕಾರ ದೊರೆತು ವ್ಯಾಪಾರದಲ್ಲಿ ಅಧಿಕ ಧನಲಾಭ. ವಿದ್ಯಾರ್ಥಿಗಳಿಗೆ ಸ್ವಪ್ರಯತ್ನದ ಪರಿಶ್ರಮಕ್ಕೆ ತಕ್ಕಂಥ ಪ್ರತಿಫಲ ದೊರೆಯುತ್ತದೆ.
ಕರ್ಕಾಟಕ
ನಿಮ್ಮೊಳಗಿನ ಹಲವಾರು ವರ್ಷಗಳ ದುಃಖ ಹೊರಬರಲಿದೆ. ಅದು ಅಚ್ಚರಿಯನ್ನು ಉಂಟು ಮಾಡಬಹುದು. ಮಕ್ಕಳ ಮೇಲಿನ ಅತಿ ಮೋಹವು ಅವರ ಶ್ರೇಯೋಭಿವೃದ್ದಿಗೆ ತೊಡಕನ್ನು ಉಂಟುಮಾಡುವ ಸಾಧ್ಯತೆ ಇದೆ.
ಸಿಂಹ
ಸದಾಕಾಲ ಹಿತವನ್ನು ಬಯಸುವ ಕುಟುಂಬ ಸದಸ್ಯರನ್ನು ಹೊಂದಿರುವುದರಿಂದ ಮಾನಸಿಕ ಸ್ಥೈರ್ಯ ಸದೃಢವಾಗುವುದು. ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ.
ಕನ್ಯಾ
ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ. ಸಹಿಯನ್ನು ನಕಲು ಪಡಿಸುವವರಿದ್ದಾರೆ. ಎಚ್ಚರವಾಗಿರಿ.
ತುಲಾ
ಜೀವನದ ನಡೆ-ನುಡಿಗಳು ಕಿರಿಯರ ಜೀವನಕ್ಕೆ ಮಾರ್ಗದರ್ಶನದಂತಾಗಿ ಸಹಕಾರಿಯಾಗುವುದು. ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ.
ವೃಶ್ಚಿಕ
ಧರ್ಮಕಾರ್ಯಗಳನ್ನು ಮಾಡುವಲ್ಲಿ ವಿಳಂಬವನ್ನು ಮಾಡದಿರಿ. ಪ್ರಯಾಣಕ್ಕೆ ಹೆಚ್ಚು ಧನ ವ್ಯಯ ಆಗುವುದು. ಗೃಹ ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆಗಳಿವೆ.
ಧನು
ಗ್ರಾಮ ಪಂಚಾಯ್ತಿಯಂಥ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚಿನ ಕಾರ್ಯಭಾರ ಹೊರಬೇಕಾಗುವುದು. ಉತ್ತಮ ಗುರುವಿನ ಪ್ರಾಪ್ತಿಯಿಂದಾಗಿ ನಿಮ್ಮ ಮನಸ್ಸಿನ ಆಧ್ಯಾತ್ಮಿಕವಾದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.
ಮಕರ
ಗುಪ್ತ ವಿಷಯಗಳನ್ನು ಕಂಡುಕೊಳ್ಳಲಿಕ್ಕಾಗಿ ಕಪಟವಾದ ಸ್ನೇಹವನ್ನು ಮಾಡುವವರು ಇರುತ್ತಾರೆ. ಮೊದಲು ಕೊಟ್ಟ ಮಾತಿನಂತೆಯೆ ನಡೆದುಕೊಳ್ಳಲು ಹರಸಹಾಸವನ್ನು ಪಡುವಂತಾಗಬಹುದು.
ಕುಂಭ
ಕಳೆದು ಹೋದಂಥ ವಸ್ತುವನ್ನು ಸಮಾಧಾನದ ಶೋಧನದಿಂದಾಗಿ ಪಡೆದುಕೊಳ್ಳುವಿರಿ. ಮಾತುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುವುದು. ವೃತ್ತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದುಡುಕಬೇಡಿ.
ಮೀನ
ಮೌಖಿಕವಾಗಿ ಬೆಳೆದ ಮಾತಿನಲ್ಲಿ ನಿಮ್ಮ ತರ್ಕಬದ್ಧವಾದ ಉತ್ತರಗಳಿಗೆ ಎಲ್ಲರೂ ಮಾರುಹೋಗುವರು. ಮಕ್ಕಳ ಆಟೋಪಚಾರವನ್ನು ಕಂಡು ಹರ್ಷಗೊಳ್ಳುವಿರಿ. ವ್ಯಾವಹಾರಿಕವಾದ ಕಲ್ಪನೆಗಳು ಗರಿಗೆದರುವುವು.