ದಿನ ಭವಿಷ್ಯ | 18 ಸೆಪ್ಟೆಂಬರ್ 2024: ಈ ರಾಶಿಯವರ ಭಾಗ್ಯದ ಬಾಗಿಲು ತೆರೆಯುವುದು
Published 18 ಸೆಪ್ಟೆಂಬರ್ 2024, 1:03 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಫೀಸಿನ ಕೆಲಸಗಳನ್ನು ಮಾಡಿ ಮುಗಿಸುವಲ್ಲಿ ಆತುರ ತೋರುವುದು ಸರಿಯಲ್ಲ. ಮಹಿಳೆಯರಿಗೆ ನಕಾರಾತ್ಮಕ ಆಲೋಚನೆಗಳಿಂದ ಆರೋಗ್ಯ ಹಾಳಾಗಬಹುದು. ಭಾಗ್ಯದ ಬಾಗಿಲು ತೆರೆಯುವುದು.
18 ಸೆಪ್ಟೆಂಬರ್ 2024, 01:03 IST
ವೃಷಭ
ಸ್ವಯಂ ಔಷಧಿಗಳ ಅಧಿಕ ಬಳಕೆ ಅಥವಾ ಅದರ ಅಡ್ಡಪರಿಣಾಮದಿಂದ ಅನಾರೋಗ್ಯಕ್ಕೆ ಗುರಿಯಾಗಬಹುದು. ವಿದೇಶ ಪ್ರವಾಸದ ಯೋಜನೆಗಳು ಲಾಭವನ್ನೇ ನೀಡಲಿರುವುದು.
18 ಸೆಪ್ಟೆಂಬರ್ 2024, 01:03 IST
ಮಿಥುನ
ಲೋಹ ಮಾರಾಟಗಾರರು ಹಳೆಯ ಲೋಹಗಳನ್ನು ಖರೀದಿಸುವಲ್ಲಿ ಅನಿರೀಕ್ಷಿತವಾಗಿ ಲಾಭ ಪಡೆಯುವರು. ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ಗಮನ ವಹಿಸಿ.
18 ಸೆಪ್ಟೆಂಬರ್ 2024, 01:03 IST
ಕರ್ಕಾಟಕ
ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಗಳನ್ನು ಶೀಘ್ರ ಪೂರೈಸಲು ಸಿಬ್ಬಂದಿಗೆ ತಾಕೀತು ಮಾಡಬೇಕಾಗುವುದು. ಲೇವಾದೇವಿ ವ್ಯವಹಾರದಲ್ಲಿ ವಿಚಾರ ಮಾಡಿ ತೀರ್ಮಾನ ಕೈಗೊಳ್ಳುವುದು ಉತ್ತಮ.
18 ಸೆಪ್ಟೆಂಬರ್ 2024, 01:03 IST
ಸಿಂಹ
ಸಹಚರರಿಂದ ಅಥವಾ ಅಧಿಕಾರಿಗಳಿಂದ ನಿಮಗೆ ಅಸಹಕಾರದ ಪರಿಸ್ಥಿತಿ ಎದುರಾಗಬಹುದು. ನಿಂತುಹೋದ ಕೆಲಸಗಳನ್ನು ಪುನಃ ಆರಂಭ ಮಾಡುವ ಬಗ್ಗೆ ಗಮನಹರಿಸಿ. ವಿಮಾ ಸಲಹೆಗಾರರು ಬಲವಂತ ಪಡಿಸಬೇಡಿ.
18 ಸೆಪ್ಟೆಂಬರ್ 2024, 01:03 IST
ಕನ್ಯಾ
ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂತೋಷದಿಂದ ಕೆಲಸ ಮಾಡುವ ಮತ್ತು ಹೊಸದಾದ ಜಾಗ ಪ್ರಾಪ್ತಿ . ಕದಡಿದ ಮನಸ್ಸಿಗೆ ಸಂಜೆಯ ವೇಳೆಗೆ ತಣ್ಣನೆಯ ವಾತಾವರಣ ಸಂತೋಷ ತರಲಿದೆ.
18 ಸೆಪ್ಟೆಂಬರ್ 2024, 01:03 IST
ತುಲಾ
ದುಬಾರಿ ವಸ್ತುಗಳನ್ನು ಖರೀದಿಸುವ ಕುರಿತು ಹಾಗೂ ಅದರ ಅವಶ್ಯಕತೆಯ ಕುರಿತು ಚರ್ಚಿಸಿ ನಂತರ ಖರೀದಿಸಿ. ದೇವರ ಕೃಪೆಯಿಂದ ಭಾಗ್ಯದ ಬಾಗಿಲು ತೆರೆಯುವುದು.
18 ಸೆಪ್ಟೆಂಬರ್ 2024, 01:03 IST
ವೃಶ್ಚಿಕ
ಅಭಿರುಚಿಗೆ ಹೊಂದುವಂಥ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳುವುದರಿಂದ ನೆಮ್ಮದಿ ಸಿಗುತ್ತದೆ. ನಿಮ್ಮ ಮಾತು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರಲಿ.
18 ಸೆಪ್ಟೆಂಬರ್ 2024, 01:03 IST
ಧನು
ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವುದು ಸರಿಯಾದ ಮಾರ್ಗ. ಆಕಸ್ಮಿಕ ರೀತಿಯಲ್ಲಿ ಮದುವೆ ನಿಶ್ಚಯ ಕಾರ್ಯ ನಡೆಯಲಿದೆ. ವಿದ್ಯುತ್ ಉಪಕರಣ ಬಳಸುವಾಗ ಜಾಗ್ರತೆ ವಹಿಸಿ.
18 ಸೆಪ್ಟೆಂಬರ್ 2024, 01:03 IST
ಮಕರ
ತಂಗಿಗಾಗಿ ಹಣವನ್ನು ಮತ್ತು ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು. ಐ.ಟಿ. ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ. ಅದರ ಪರಿಣಾಮವಾಗಿ ವರಮಾನ ಹೆಚ್ಚಲಿದೆ.
18 ಸೆಪ್ಟೆಂಬರ್ 2024, 01:03 IST
ಕುಂಭ
ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ.
18 ಸೆಪ್ಟೆಂಬರ್ 2024, 01:03 IST
ಮೀನ
ಸಿಹಿ ವಿಚಾರವನ್ನು, ಅವಕಾಶಗಳನ್ನು ಮತ್ತು ಕಹಿಯ ಸಂಗತಿಯನ್ನು ಮುಕ್ತ ಮನಸ್ಸಿನಿಂದ ಸಮಾನವಾಗಿ ಸ್ವೀಕರಿಸಿ. ಸಂಸಾರದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಿ.
18 ಸೆಪ್ಟೆಂಬರ್ 2024, 01:03 IST