ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ| ಸೆ. 21: ಈ ರಾಶಿಯವರಿಗೆ ಒಂಟಿತನದ ಚಿಂತೆಯು ಆಗಾಗ ಕಾಡಲಿದೆ.
Published 20 ಸೆಪ್ಟೆಂಬರ್ 2024, 20:01 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗುವುದು. ನಿಮ್ಮ ದುರಾಲೋಚನೆಗಳನ್ನು ಬದಲಿಸಿಕೊಳ್ಳುವ ದಿನವಾಗಿದೆ.
ವೃಷಭ
ಕೋರ್ಟ್ ವ್ಯವಹಾರಗಳು ಬಗೆಹರಿಯಬಹುದೆಂಬ ಆಲೋಚನೆಯು ಇತರರ ದುರ್ಬುದ್ಧಿಯಿಂದ ವ್ಯತ್ಯಾಸಗಳಾಗುತ್ತವೆ. ನೌಕರಿಯಲ್ಲಿ ಬಡ್ತಿ ಹೊಂದುವ ಬಗ್ಗೆ ಪ್ರಯತ್ನ ಇರಲಿ. ಹೆಂಡತಿಯ ಆರೋಗ್ಯ ಸುಧಾರಿಸುತ್ತದೆ.
ಮಿಥುನ
ನವ ದಂಪತಿಗಳಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ದೈವಾನುಗ್ರಹದಿಂದ ಕೆಲಸದಲ್ಲಿ ಒಳ್ಳೆಯ ಲಾಭ ಪಡೆಯುವಿರಿ. ಪಿತೃ ವರ್ಗದವರ ಸಹಾಯಾಸ್ತ ಸಿಗುವುದು.
ಕರ್ಕಾಟಕ
ನಿಮ್ಮ ಗಡಿಬಿಡಿಯ ಸ್ವಭಾವದಿಂದಾಗಿ ಕಂಪನಿಯಲ್ಲಿ ಉಂಟಾದ ತಪ್ಪುಗಳಿಗೆ ನೇರ ಹೊಣೆಗಾರಿಕೆ ನಿಮ್ಮದ್ದಾಗಿರುತ್ತದೆ. ಮನೆಯಲ್ಲಿ ದೇವತಾಕಾರ್ಯಗಳನ್ನು ನಡೆಸುವ ಬಗ್ಗೆ ತಂದೆಯವರಲ್ಲಿ ಮಾತನಾಡಿ.
ಸಿಂಹ
ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬನ್ನಿರಿ. ದೇವತಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಿ ಸಂತೃಪ್ತಿಯಾಗುವುದು. ಕುಟುಂಬದಲ್ಲಿ ಸುಖ ನೆಮ್ಮದಿ ವೃದ್ಧಿ.
ಕನ್ಯಾ
ಕಾರ್ಖಾನೆಯಲ್ಲಿ ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸುವಲ್ಲಿ ಅಧಿಕ ಬಂಡವಾಳವನ್ನು ಹೂಡುವಿರಿ. ಸಾಧು ಸಂತರ ದರ್ಶನದಿಂದ ಮನಸ್ಸಿಗೆ ಹೆಚ್ಚಿನ ಸಮಾಧಾನ ಸಿಗಲಿದೆ. ಒಂಟಿತನದ ಚಿಂತೆಯು ಆಗಾಗ ಕಾಡಲಿದೆ.
ತುಲಾ
ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತ ಮಿತ್ರರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.
ವೃಶ್ಚಿಕ
ಫ್ಯಾಷನ್ ಡಿಸೈನರ್‌ಗಳು ಹೆಚ್ಚಿನ ಅವಕಾಶ ಮತ್ತು ಉತ್ತಮ ಧನಲಾಭ ಪಡೆಯುವರು. ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗುವುದು. ಅಧಿಕ ಹೊತ್ತು ವಿಶ್ರಾಂತಿ ಬೇಕೆನಿಸಲಿದೆ.
ಧನು
ಬಂಧು ಮಿತ್ರರ ಸಹಾಯಗಳನ್ನು ಬಯಸದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಅಭ್ಯಾಸ ಮಾಡಿ. ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವಂತಹ ಪ್ರಯತ್ನ ನಡೆಯಲಿ.
ಮಕರ
ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದಲ್ಲಿ ಉತ್ಸಾಹ ವೃದ್ಧಿಯಾಗುವುದು. ಇಂದಿನ ರಾಜಕೀಯ ಸನ್ನಿವೇಶಗಳು ನಿಮಗೆ ಅನುಕೂಲವಾಗಿರುವುದು. ಈ ದಿನ ನಿಮ್ಮ ಆರೋಗ್ಯವು ಸುಧಾರಿಸುವುದು.
ಕುಂಭ
ಅಪರಿಚಿತ ವ್ಯಕ್ತಿಯೊಬ್ಬರು ಉತ್ತಮ ಉಪಾಯಗಳನ್ನು ಮತ್ತು ಅನುಭವಗಳನ್ನು ನೀಡುವುದಾಗಿ ಹೇಳಿ ತಪ್ಪು ಮಾರ್ಗಕ್ಕೆ ಎಳೆಯಲಿದ್ದಾರೆ. ಶ್ರೀಕ್ಷೇತ್ರಕ್ಕೆ ಹೋಗುವ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿರಿ.
ಮೀನ
ಕೆಲಸದ ಒತ್ತಡವನ್ನು ಅಥವಾ ಸಂಘ ಸಂಸ್ಥೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಂತಾಗುವುದು. ಒಪ್ಪಿಸಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ.
ADVERTISEMENT
ADVERTISEMENT