ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹಲವು ದಿನಗಳ ಮನಸ್ತಾಪದ ಬಳಿಕ ಕುಟುಂಬದಲ್ಲಿ ಸಡಗರ, ಸಂತೋಷ
Published 18 ಆಗಸ್ಟ್ 2024, 0:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿಂಜರಿಕೆಯ ಸ್ವಭಾವದಿಂದ ಕೆಲಸ ಗಿಟ್ಟಿಸಿಕೊಳ್ಳಲು ಕಷ್ಟವಾಗುತ್ತದೆ. ಲಾಟರಿಯಂತಹ ಯೋಜನೆಗಳು ಕಣ್ಣಾ-ಮುಚ್ಚಾಲೆಯಾಟ ನಡೆಸಲಿದೆ. ವ್ಯವಹಾರ ನಿಮಿತ್ತ ದೂರದ ಪ್ರಯಾಣ ಮಾಡಬೇಕಾಗುವುದು.
ವೃಷಭ
ಜೀವನದಲ್ಲಿ ಮಹತ್ವದ ಬದಲಾವಣೆಯಾಗುವ ಸಮಯ. ನೆರೆ-ಹೊರೆಯವರೊಂದಿಗಿನ ಸಂಬಂಧ ಉತ್ತಮಗೊಳ್ಳುವುದು. ಕುಟುಂಬದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಬಹುದು.
ಮಿಥುನ
ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ, ಅವಕಾಶಗಳು ಲಭಿಸಲಿವೆ. ಮಕ್ಕಳಿಗೆ ಆಟಿಕೆ ವಸ್ತುಗಳ ಖರೀದಿಸಬೇಕಾಗುವುದು. ಸಕಾರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿ.
ಕರ್ಕಾಟಕ
ಕಾರ್ಯ ಕ್ಷೇತ್ರದಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಬಂಧುಗಳು ಸಂಬಂಧ ಅರಸಿ ನಿಮ್ಮ ಮನೆಗೆ ಬರಲಿದ್ದಾರೆ. ಇಲಾಖೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆಯುವಿರಿ.
ಸಿಂಹ
ನಿಮ್ಮ ಬಗ್ಗೆಯಷ್ಟೆ ಯೋಚಿಸುವುದನ್ನು ಬಿಟ್ಟು ಇತರರ ಬಗ್ಗೆಯೂ ಕಾಳಜಿ ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಟಿಕೆ ಸಾಮಾನು ಮಾರಾಟಗಾರರಿಗೆ ಲಾಭವಾಗಲಿದೆ. ಅಪೇಕ್ಷಿಗಳಿಗೆ ಸಂತಾನ ಭಾಗ್ಯ ದೊರೆಯುವುದು.
ಕನ್ಯಾ
ನಿದ್ರಾ ಅಭಾವದಿಂದ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರಗಳಲ್ಲಿ ಹಾಗೂ ಪ್ರಯಾಣದ ವೇಳೆ ನಯವಂಚಕರ ಬಗ್ಗೆ ಎಚ್ಚರವಹಿಸಿ. ಎಲ್ಲರ ಒಪ್ಪಿಗೆ ಪಡೆದು ವಿವಾಹ ಆಯೋಜಿಸಿ.
ತುಲಾ
ದೇಹಕ್ಕೆ ಆಯಾಸವಾದರೆ ಸ್ವ–ಆರೈಕೆ ಮಾಡಿಕೊಳ್ಳುವುದು ಉತ್ತಮ. ಹಾಲು, ಮೊಸರು, ತುಪ್ಪದಂತಹ ಗೋ ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಹಾಗೂ ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದು.
ವೃಶ್ಚಿಕ
ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸ್ವ–ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಬೆಂಕಿಯಿಂದ ಅಥವಾ ಸುಡುವ ಪದಾರ್ಥದಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.
ಧನು
ಹಲವು ದಿನಗಳ ಮನಸ್ತಾಪದ ಬಳಿಕ ಕುಟುಂಬದಲ್ಲಿ ಸಡಗರ ಕಂಡು ಸಂತೋಷವಾಗುವುದು. ರಕ್ಷಣಾ ವೃತ್ತಿಗೆ ಸಂಬಂಧಿಸಿದವರು ಎಚ್ಚರದಿಂದ ಕಾರ್ಯನಿರ್ವಹಿಸಿ. ಗಣೇಶನ ಪ್ರಾರ್ಥನೆಯೊಂದಿಗೆ ದಿನ ಆರಂಭಿಸಿ.
ಮಕರ
ಮಹತ್ವದ ವ್ಯಕ್ತಿಯೊಬ್ಬರು ನೀಡಿದ ಉಡುಗೊರೆಯನ್ನು ಕಳೆದುಕೊಂಡು ವ್ಯಥೆಪಡುವ ಸಾಧ್ಯತೆ ಇದೆ. ವ್ಯಾಪಾರದ ಬಗ್ಗೆ ಹಾಗೂ ಬರವಣಿಗೆಯ ಕುರಿತು ಉತ್ಸಾಹ, ಆಸಕ್ತಿ ಹೆಚ್ಚಲಿದೆ.
ಕುಂಭ
ವಿದ್ಯಾರ್ಥಿಗಳು ಧೃತಿಗೆಡದೆ ಹೆಚ್ಚಿನ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಜಯ ನಿಮ್ಮದಾಗುತ್ತದೆ. ಆರೋಗ್ಯ ಸುಧಾರಣೆಗೆ ಧಾರ್ಮಿಕ ಕಾರ್ಯಗಳನ್ನು ಮಾಡಿ.
ಮೀನ
ಈವರೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ನಿಮಗೆ ಈ ದಿನವು ಆಶಾದಾಯಕ ಹಾಗೂ ಆರಾಮದಾಯಕವಾಗಿರುತ್ತದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ.