ದಿನ ಭವಿಷ್ಯ: ಈ ರಾಶಿಯವರಿಗೆ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು
Published 13 ಜನವರಿ 2026, 0:15 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬದಲ್ಲಿ ಊಹೆಗೂ ನಿಲುಕದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಹಿರಿಯರಿಂದ ಹಿತವಾಕ್ಯಗಳು, ಮಾರ್ಗದರ್ಶನ ಸಿಗಲಿವೆ. ಆಯ್ಕೆ ಸರಿಯಾಗಿದ್ದು ಕೆಲಸಗಳನ್ನು ಮಾಡಿ ಮುಗಿಸುವಿರಿ.
ವೃಷಭ
ಆರ್ಥಿಕ ನಿರ್ವಹಣೆಗಾಗಿ ಕೆಲವು ಖರ್ಚುಗಳನ್ನು ನಿಲ್ಲಿಸುವಿರಿ. ಆದರೆ ಆರೋಗ್ಯದ ವಿಚಾರದಲ್ಲಿ ಖರ್ಚುವೆಚ್ಚದ ಲೆಕ್ಕಾಚಾರವನ್ನು ಮಾಡುವುದು ಸಮಂಜಸವಲ್ಲ. ಧೈರ್ಯ ಜತೆಗಿರಲಿದೆ.
ಮಿಥುನ
ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಂಡು ಜೀವನ ನಡೆಸುವುದು ಸರಿಯಲ್ಲ. ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಉಲ್ಲಾಸವಿರುವುದು.
ಕರ್ಕಾಟಕ
ಬಹಳ ದಿನಗಳಿಂದ ಕಾಡುತ್ತಿದ್ದ ಭೂಮಿಗೆ ಸಂಬಂಧಿಸಿದ ಸಮಸ್ಯೆಯೊಂದು ನಿರಾತಂಕವಾಗಿ ಬಗೆಹರಿಯುವುದು. ಕುಟುಂಬದವರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಕಾಣುವಿರಿ.
ಸಿಂಹ
ಪಾಲಿಗೆ ಬಂದದ್ದನ್ನು ಸಂತೋಷದಿಂದ ಸ್ವೀಕರಿಸಿದಲ್ಲಿ ಅಸ್ತಿತ್ವ ಮತ್ತು ನೆಮ್ಮದಿ ಉಳಿದುಕೊಳ್ಳುವುದು. ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆಯ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ.
ಕನ್ಯಾ
ಕೋರ್ಟು ಕಚೇರಿ ದೂರುಗಳಂಥ ಗೊಡವೆಗಳಿಗೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಕಾಡುವ ಸಮಸ್ಯಾಸರಪಳಿ ಹೆಚ್ಚಿನ ಶ್ರಮವಿಲ್ಲದೆ ಪರಿಹಾರವಾಗುವುದು.
ತುಲಾ
ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ನವಚೈತನ್ಯ ಇರಲಿದೆ.
ವೃಶ್ಚಿಕ
ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರ ಸುಗಮವಾಗುತ್ತದೆ. ಕೆಲಸಗಳನ್ನು ಮುಂದೂಡುವುದು ಒಳ್ಳೆಯದಲ್ಲ.
ಧನು
ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಲಕ್ಷಣಗಳು ಗಮನಕ್ಕೆ ಬಂದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಸುತ್ತಮುತ್ತಲಲ್ಲಿ ನಡೆದ ಘಟನೆಗಳಿಂದ ಮನಸ್ಸು ಪರಿವರ್ತನೆಯಾಗಲಿದೆ.
ಮಕರ
ಸಾಕಷ್ಟು ಸಮಯ ದೊರಕುವಂತೆ ಯೋಜನೆಗಳನ್ನು ಹಾಕಿಕೊಳ್ಳುವುದು ಉತ್ತಮ. ಸಾಕುಪ್ರಾಣಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಪುಸ್ತಕ ಓದುವ ಹವ್ಯಾಸ ಹುಟ್ಟಲಿದೆ.
ಕುಂಭ
ಉತ್ಪಾದಿಸಿದ ವಸ್ತುಗಳಿಗೆ ಪ್ರಾಂತ್ಯದಲ್ಲಿ ಬೇಡಿಕೆ ದೊರೆತು ಸಂತೋಷಕರ ವಾತಾವರಣ ನಿಮ್ಮದಾಗಲಿದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸಲು ಮುಂದಾಗುವಿರಿ.
ಮೀನ
ಹಲವು ಕಾರ್ಯದಲ್ಲಿ ದೇಹಾಯಾಸ ಮಾತ್ರ ಸಿಗುವುದು. ಕೆಲವು ದಿನಗಳ ಕಿರು ಪ್ರಯಾಣದ ನಂತರ ಮನೆಗೆ ಹಿಂತಿರುಗಿ ಬರುವಿರಿ. ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು.