ದಿನ ಭವಿಷ್ಯ: ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ
Published 1 ಫೆಬ್ರುವರಿ 2026, 22:03 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿರಂಗದಲ್ಲಿ ಅನ್ಯರ ಮಾತಿಗೆ ಕಿವಿಗೊಡದೆ ನಿಮ್ಮಚ್ಛೆಯಂತೆ ನಡೆಯಿರಿ. ದೂರದ ಪ್ರಯಾಣ, ಹವಾಮಾನ ಬದಲಾವಣೆಯಿಂದ ಅನಾರೋಗ್ಯ ಉಂಟಾಗಬಹುದು. ಜಾಗ್ರತೆ ವಹಿಸಿ.
01 ಫೆಬ್ರುವರಿ 2026, 22:03 IST
ವೃಷಭ
ನೆಂಟರಿಷ್ಟರ ಸಲಹೆ ಸೂಚನೆಗಳನ್ನು ಪಾಲಿಸಿ. ದೈವಬಲ ಒದಗಿ ಬಂದು ಅಭಿವೃದ್ಧಿಗೊಳ್ಳುವಿರಿ. ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ.
01 ಫೆಬ್ರುವರಿ 2026, 22:03 IST
ಮಿಥುನ
ರೇಷ್ಮೆ ಬೆಳೆಗಾರರಿಗೆ ಆದಾಯದಿಂದ ಸಂತಸ. ಸಾಕುಪ್ರಾಣಿಗಳ ಜತೆ ಸಮಯ ಕಳೆಯುವಿರಿ. ಸಮಯಕ್ಕೆ ಸರಿಯಾಗಿ ವರ್ತಿಸಿ, ಬುದ್ಧಿವಂತಿಕೆಯನ್ನು ತೋರುವಿರಿ.
01 ಫೆಬ್ರುವರಿ 2026, 22:03 IST
ಕರ್ಕಾಟಕ
ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವಿರಿ. ಮನೆಯಲ್ಲಿ ಇರುವವರೆಲ್ಲರನ್ನು ಕೇಳದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
01 ಫೆಬ್ರುವರಿ 2026, 22:03 IST
ಸಿಂಹ
ನಿರ್ಧಾರಗಳನ್ನು ಎಲ್ಲರ ಮುಂದೆ ತಿಳಿಸುವ ಮುನ್ನಸಂಪೂರ್ಣವಾಗಿ ಯೋಚನೆ ಮಾಡಿ. ಪತ್ನಿಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಜಿಪುಣತನ ತೋರದಿರಿ. ಕೌಟುಂಬಿಕ ವಿವಾದಗಳು ಇತ್ಯರ್ಥಗೊಳ್ಳಲಿವೆ.
01 ಫೆಬ್ರುವರಿ 2026, 22:03 IST
ಕನ್ಯಾ
ಸಂಸ್ಥೆಯ ಹೊಸ ಆರ್ಥಿಕ ನೀತಿಯಿಂದ ಹಣಕಾಸಿನ ವಿಷಯದಲ್ಲಿ ಲಾಭ ಇರಲಿದೆ. ತರಕಾರಿ ಬೆಳೆಗಾರರಿಗೆ ಮುಂಜಾಗ್ರತಾ ಕ್ರಮಗಳು ಇಲ್ಲದಿದ್ದಲ್ಲಿ ಅಧಿಕ ಹಾನಿ ಸಂಭವಿಸಬಹುದು.
01 ಫೆಬ್ರುವರಿ 2026, 22:03 IST
ತುಲಾ
ಮಗಳ ಮಾತಿನಂತೆ ನಿತ್ಯ ಕೆಲಸದಲ್ಲಿ ಮಾಡಿಕೊಂಡ ಬದಲಾವಣೆಯಿಂದ ಆರೋಗ್ಯ ಸರಿಯಾಗುತ್ತದೆ. ಅಕ್ಕಪಕ್ಕದವರ ಕಷ್ಟ ಸುಖವನ್ನು ವಿಚಾರಿಸುವುದರಿಂದ ಪ್ರಯೋಜನ ದೊರೆಯುವುದು.
01 ಫೆಬ್ರುವರಿ 2026, 22:03 IST
ವೃಶ್ಚಿಕ
ಸಣ್ಣ ವಯಸ್ಸಿನ ಮಕ್ಕಳ ಆಟೋಟಗಳನ್ನು ನೋಡಿ ಕಳೆದು ಹೋದ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮ್ಮ ಯೋಚನೆಯಷ್ಟು ಖರ್ಚು ಸಂಭವಿಸದ ಕಾರಣ ಹಣದ ಕೊರತೆ ಕಂಡು ಬರುವುದಿಲ್ಲ.
01 ಫೆಬ್ರುವರಿ 2026, 22:03 IST
ಧನು
ಅನಗತ್ಯ ವಸ್ತುಗಳ ಮೇಲಿನ ದೊಡ್ಡ ಮೊತ್ತದ ಖರ್ಚಿನಿಂದ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಉದ್ಯೋಗದಲ್ಲಿ ಒತ್ತಡ ಹೆಚ್ಚಿರುವ ಕಾರಣ ಮಾನಸಿಕವಾಗಿ ಈಗಲೇ ತಯಾರಾಗಿರುವುದು ಸೂಕ್ತ.
01 ಫೆಬ್ರುವರಿ 2026, 22:03 IST
ಮಕರ
ಕೋಪವನ್ನು ಹೊಂದಿದ ಸಮಯದಲ್ಲಿ ಇತರರೊಂದಿಗೆ ಮಾತನಾಡು ವುದಾಗಲಿ ಅಥವಾ ಕೆಲಸ ಮಾಡುವುದನ್ನು ಮಾಡಬೇಡಿ. ದುಡುಕಿನ ಮಾತುಗಳು ಇತರರ ಮನಸ್ಸನ್ನು ನೋಯಿಸದಿರಲಿ.
01 ಫೆಬ್ರುವರಿ 2026, 22:03 IST
ಕುಂಭ
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಯುವ ಬರಹಗಾರರಿಗೆ ಹುರುಪು ಹೆಚ್ಚಿಸುವಂಥ ಜನರು ಸುತ್ತಲೂ ಸಿಗುತ್ತಾರೆ.
01 ಫೆಬ್ರುವರಿ 2026, 22:03 IST
ಮೀನ
ಹೊಸಾ ವಿವಾಹ ಪ್ರಸ್ತಾಪಗಳು ಆಕರ್ಷಕವಾಗಿ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳಬೇಡಿ. ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವನ್ನು ಬೆಳೆಸಿಕೊಳ್ಳಿ. ಷೇರು ಖರೀದಿಸುವಾಗ ಎಚ್ಚರವಹಿಸಿ.
01 ಫೆಬ್ರುವರಿ 2026, 22:03 IST