ಶನಿವಾರ, 21 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹೆಂಡತಿಯ ಮಾತಿಗೆ ಕಿವಿಗೊಡಿ
Published 21 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆಯಂತಹ ಸಮಾರಂಭಗಳ ಆಲಿಕೆಯು ಕಾರಣವಾಗುವುದು. ಕಣ್ಣಿನ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಅನಾಹುತಕ್ಕೆ ಕಾರಣವಾಗುವುದು.
ವೃಷಭ
ಉದ್ಯಮಿಗಳು, ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು. ಕಲಾವಿದರಿಗೆ ಹಾಗೂ ನಟ ನಟಿಯರಿಗೆ ಉತ್ತಮ ಅವಕಾಶಗಳು ಒದಗಿಬರುವುವು. ಮಕ್ಕಳ ತುಂಟತನದ ಬಗ್ಗೆ ಗಮನವಿರಲಿ.
ಮಿಥುನ
ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದ ಅಸ್ಥಿರತೆ ಅನುಭವಕ್ಕೆ ಬರಲಿದೆ. ಮಹಿಳೆಯರಿಗೆ ಕಚೇರಿಯ ಒತ್ತಡದಲ್ಲಿ ಮನೆಯ ಮುಖ್ಯ ಕೆಲಸಗಳತ್ತ ಗಮನ ಕಡಿಮೆಯಾಗುವುದು.
ಕರ್ಕಾಟಕ
ವೃತ್ತಿರಂಗದಲ್ಲಿ ಸಂದರ್ಭಕ್ಕೆ ಸರಿಯಾಗಿ ವರ್ತಿಸುವುದರಿಂದ ಲಾಭವಾಗುವುದು. ಆದರೆ, ಈ ದಿನದ ನಿಮ್ಮ ವರ್ತನೆಯನ್ನು ನಾಳೆಗೆ ಕಾಪಾಡಿ ಕೊಳ್ಳುವುದು ಕಷ್ಟವಾಗುತ್ತದೆ. ನೇರ ನುಡಿ ಗೆಳೆತನಕ್ಕೆ ಸಂಕಷ್ಟವಾಗಬಹುದು.
ಸಿಂಹ
ವ್ಯವಹಾರದಲ್ಲಿ ನಿಮ್ಮಿಂದ ಮೋಸ ನಡೆದು ಹಣ ಸಂಗ್ರಹವಾಗುವುದು ಮತ್ತು ಅದರ ದುಷ್ಫಲವನ್ನು ಅನುಭವಿಸುವಂತಾಗುವುದು. ಮಡದಿಯ ಸಲಹೆಗಳಿಗೆ ಗಮನ ನೀಡಿ ಸ್ವಪ್ರಯತ್ನದಿಂದ ಕೆಲಸದಲ್ಲಿ ಮುನ್ನುಗ್ಗಿ.
ಕನ್ಯಾ
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಎಂದಿಗೂ ಮರೆಯಲಾಗದ ಒಂದು ಕಹಿ ಘಟನೆ ನಡೆಯಬಹುದು. ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ.
ತುಲಾ
ನೆರೆಹೊರೆಯವರೊಂದಿಗೆ ಮತ್ತು ಸಹೋದರಿಯವರೊಂದಿಗೆ ಸೌಹಾರ್ದದಿಂದ ವರ್ತಿಸಿ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ಖರ್ಚು ವೆಚ್ಚಗಳು ಈ ದಿನ ತಗ್ಗುವುವು
ವೃಶ್ಚಿಕ
ಮಿತ್ರರ ಚಾಣಾಕ್ಷತನ, ಮಾತುಗಾರಿಕೆ ಯನ್ನು ನೋಡಿ ಕಲಿಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಗೃಹ ಕೃತ್ಯದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ವ್ಯಾಸಂಗಕ್ಕಾಗಿ ಹಣದ ವ್ಯವಸ್ಥೆ ಆಗುವುದು.
ಧನು
ನಿಮ್ಮ ಮಾತು, ಸಕಾಲದ ಆರ್ಥಿಕ ನೆರವು ಸೋದರಿಯ ಸಂಸಾರ ನೆಲೆ ನಿಲ್ಲುವುದಕ್ಕೆ ಕಾರಣವಾಗಲಿದ್ದು, ಅದರಿಂದ ನಿಮ್ಮ ಜವಾಬ್ದಾರಿ ಪೂರೈಸಿದ ತೃಪ್ತಿ ಈ ದಿನ ದೊರೆಯಲಿದೆ. ಸಾಲದ ಹಣ ಹಿಂತಿರುಗಿಸುವಲ್ಲಿ ಗಮನವಿರಲಿ.
ಮಕರ
ವೃತ್ತಿಗಿಂತ ಪ್ರವೃತ್ತಿಗೆ ಸಮಯ ಕೊಡುವುದು ಹೆಚ್ಚಲಿದೆ. ಉದ್ಯಮಿಗಳಿಗೆ ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭ ಪ್ರಾಪ್ತಿಯಾಗುವುದು. ನಿಮ್ಮ ಸುತ್ತಲಿನ ವಾತಾವರಣ ಸಂತಸದಾಯಕವಾಗಿ ಇರುತ್ತದೆ.
ಕುಂಭ
ನೂತನ ಅಧಿಕಾರಿಗಳ ಆಗಮನದಿಂದಾಗಿ ಕಚೇರಿಯಲ್ಲಿ ಹೆಚ್ಚಿನ ಕೆಲಸಗಳು ಬರಲಿವೆ. ಕಾರ್ಖಾನೆಯ ವಿದ್ಯುತ್ ಲೋಪಗಳನ್ನು ಸರಿಪಡಿಸಲು ಅಧಿಕ ವೆಚ್ಚವಾಗುವುದು. ಹಿರಿಯರ ಆಸ್ತಿ ನಿಮ್ಮ ಪಾಲಿಗೆ ಬರಲಿದೆ.
ಮೀನ
ಕೆಲವು ಮಾನಸಿಕ ತೊಂದರೆಗಳು ಎದುರಾಗಬಹುದು. ಆದರೆ, ದೊಡ್ಡ ಸಮಸ್ಯೆ ಉಂಟಾಗುವ ಪರಿಸ್ಥಿತಿ ಕಂಡುಬರುವುದಿಲ್ಲ. ಹಾಲಿನ ಡೇರಿ ಪದಾರ್ಥಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆ ಹಾಗೂ ಲಾಭ ತರುವುದು.
ADVERTISEMENT
ADVERTISEMENT