ದಿನ ಭವಿಷ್ಯ: ಅವಿವಾಹಿತ ಹೆಣ್ಣು ಮಕ್ಕಳಿಗೆ ಸಂಬಂಧ ಕೂಡಿ ಬರಲಿದೆ
Published 18 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಔಷಧಿಗಳು ಅಡ್ಡ ಪರಿಣಾಮ ಬೀರುವಂತಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬೇಡಿ. ಸಮಸ್ಯೆ, ದುಃಖವು ಎಲ್ಲರ ಜೀವನದಲ್ಲೂ ಇರುತ್ತದೆ. ಅದಕ್ಕಾಗಿ ಚಿಂತಿಸಬೇಡಿ.
18 ಫೆಬ್ರುವರಿ 2026, 22:30 IST
ವೃಷಭ
ಕೌಟುಂಬಿಕ ಸಮಸ್ಯೆಗಳಿಗೆ ಎದುರುತ್ತರ ನೀಡದಿರುವುದು ಅತ್ಯುನ್ನತ ಪರಿಹಾರವೆಂದು ಅನುಭವಕ್ಕೆ ಬರುತ್ತದೆ. ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಅನಿವಾರ್ಯದ ಖರ್ಚಿಗೇನೂ ಯೋಚನೆ ಇರುವುದಿಲ್ಲ.
18 ಫೆಬ್ರುವರಿ 2026, 22:30 IST
ಮಿಥುನ
ದಿನಸಿ ವರ್ತಕರು ಆರ್ಥಿಕತೆಯಲ್ಲಿ ದುರ್ಬಲವಾಗಬಹುದು. ಎಚ್ಚರವಹಿಸಿ. ವಕೀಲೀ ವೃತ್ತಿಯನ್ನು ಅಭ್ಯಾಸಿಸುವವರಿಗೆ ಪಾಪ-ಪ್ರಜ್ಞೆ ಕಾಡಲಿದೆ. ಅವಿವಾಹಿತ ಹೆಣ್ಣು ಮಕ್ಕಳಿಗೆ ಸಂಬಂಧವೊಂದು ಕೂಡಿ ಬರಲಿದೆ.
18 ಫೆಬ್ರುವರಿ 2026, 22:30 IST
ಕರ್ಕಾಟಕ
ಸಮೀಪವರ್ತಿಗಳ ಸಲಹೆ ಸಹಕಾರದಿಂದ ವ್ಯಾಪಾರ ವಹಿವಾಟು ಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಸಣ್ಣ ಪುಟ್ಟ ಅಡಚಣೆಗಳು ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲಾರದು.
18 ಫೆಬ್ರುವರಿ 2026, 22:30 IST
ಸಿಂಹ
ಪುಣ್ಯಸಂಪಾದನೆಗಾಗಿ ತಾಯಿಯೊಂದಿಗೆ ತೀರ್ಥಯಾತ್ರೆ ಕೈಗೊಳ್ಳುವ ಆಸೆ ಈಡೇರುವ ಲಕ್ಷಣಗಳು ಕಂಡುಬರಲಿವೆ. ಕಾರ್ಯ ಸಾಧನೆಗೆ ತೋರಿ ಬರುವ ಅಡ್ಡಿ ಆತಂಕಗಳು ನಿವಾರಣೆಯಾಗಲಿವೆ.
18 ಫೆಬ್ರುವರಿ 2026, 22:30 IST
ಕನ್ಯಾ
ಆತ್ಮೀಯರಂತೆ ಮುಖವಾಡ ಹೊಂದಿರುವ ಅಕ್ಕ-ಪಕ್ಕದ ಹಿತಶತ್ರುಗಳ ಬಣ್ಣ ನಿಮ್ಮೆದುರು ಬಯಲಾಗಲಿದೆ. ನಿಮ್ಮ ಕಾರ್ಯರಂಗದಲ್ಲಿ ಹೊಸತನಕ್ಕೆ ಯೋಜನೆಯನ್ನು ರೂಪಿಸಬಹುದು.
18 ಫೆಬ್ರುವರಿ 2026, 22:30 IST
ತುಲಾ
ಮುಂದಿನ ಕೆಲಸ ಹಾಗೂ ವೃತ್ತಿ ಜೀವನದ ಬಗ್ಗೆ ಗಂಭೀರ ಆಲೋಚನೆ ಮಾಡುವುದು ಮುಖ್ಯ. ಸಮಸ್ಯೆ ಬಗೆಹರಿಸಲು ಜಾಣತನ ತೋರುವಿರಿ. ಕೆಲವರಿಗೆ ಹಿರಿಯರ ಮಾರ್ಗದರ್ಶನ ಬೇಕೆನಿಸಲಿದೆ.
18 ಫೆಬ್ರುವರಿ 2026, 22:30 IST
ವೃಶ್ಚಿಕ
ವಿಭಿನ್ನ ರೀತಿಯ ಮತ್ತು ಅತಿ ಕ್ಲಿಷ್ಟಕರ ಕೆಲಸವೊಂದನ್ನು ಸ್ನೇಹಿತರೊಬ್ಬರು ನಿಮಗೊಪ್ಪಿಸಲಿದ್ದಾರೆ. ಈ ಕೆಲಸ ಮಾಡುವುದರಿಂದ ಸಾಕಷ್ಟು ಗೌರವವನ್ನು, ಹೆಸರನ್ನು ತರಲಿದೆ.
18 ಫೆಬ್ರುವರಿ 2026, 22:30 IST
ಧನು
ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡದ ಜೊತೆಯಲ್ಲಿ ಅಧಿಕ ಲಾಭ ದೊರಕಲಿದೆ. ಗುರುವಿನ ಮಾರ್ಗದರ್ಶನದಂತೆ ನಡೆಯುವ ಕೆಲಸದಲ್ಲಿ ಸರ್ವತೋಮುಖವಾದ ಅಭಿವೃದ್ಧಿ ಹೊಂದುವಿರಿ.
18 ಫೆಬ್ರುವರಿ 2026, 22:30 IST
ಮಕರ
ವಸ್ತ್ರ ವಿನ್ಯಾಸಗಾರರಿಗೆ, ಚಿತ್ರಕಲೆ, ಕಥೆ-ಕವನಗಳನ್ನು ಬರೆಯುವವರಿಗೆ ನಿಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಎಲ್ಲರೊಂದಿಗೆ ವಿಷಯ ವಿನಿಮಯದಿಂದ ಗೊಂದಲಗಳಿಗೆ ಉತ್ತರ ಸಿಗಲಿದೆ.
18 ಫೆಬ್ರುವರಿ 2026, 22:30 IST
ಕುಂಭ
ಸೋದರರೊಡನೆ ಆಥವಾ ದಾಯಾದಿಗಳೊಡನೆ ಇದ್ದ ಕಲಹಗಳು ನಿರ್ಮೂಲವಾಗಿ ಶುಭವಾಗಲಿದೆ. ಮುದ್ರಣ ವೃತ್ತಿಯವರು ತಪ್ಪಿಲ್ಲದೇ ಕಾರ್ಯ ನಿರ್ವಹಿಸುವುದರಿಂದ ಉತ್ತಮ ಲಾಭ ಬರುವುದು.
18 ಫೆಬ್ರುವರಿ 2026, 22:30 IST
ಮೀನ
ಉನ್ನತ ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ಹಸ್ತ ಅಥವಾ ವಾಸ್ತವ್ಯದ ವ್ಯವಸ್ಥೆ ಅಪೇಕ್ಷಿಸಬಹುದು. ವ್ಯವಹಾರಿಕವಾದ ಸುಖ ಸಂಪತ್ತು ಅಧಿಕ ಮಟ್ಟದಲ್ಲಿ ಇದ್ದರೂ ಭವಿಷ್ಯದ ಚಿಂತೆಯು ನಿದ್ದೆಗೆಡಿಸುತ್ತದೆ.
18 ಫೆಬ್ರುವರಿ 2026, 22:30 IST