ದಿನ ಭವಿಷ್ಯ: ಈ ರಾಶಿಯವರ ರಾಜಕೀಯ ಭವಿಷ್ಯಕ್ಕೆ ಮೋಡ ಕವಿದಂತಾಗುತ್ತದೆ
Published 3 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನಸ್ಸು ಚಂಚಲವಾಗಿರುವುದು. ದೇವಬಲವಿರುವ ಕಾರಣದಿಂದ ಕೈಹಾಕಿದ ಕೆಲಸಗಳು ಜಯದ ಜೊತೆಯಲ್ಲಿ ಪೂರ್ಣಗೊಳ್ಳಲಿವೆ. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಸಿಗಲಿದೆ.
03 ಮಾರ್ಚ್ 2026, 23:30 IST
ವೃಷಭ
ಕೈಮಗ್ಗದ ವಸ್ತುಗಳ ವ್ಯಾಪಾರಿಗಳಿಗೆ ವಿದೇಶದಿಂದ ಮನ್ನಣೆ ಸಿಗುತ್ತದೆ. ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಕೆಲಸ ಗಳು ತೋರಿಬರಲಿವೆ. ವಿನ್ಯಾಸದ ಉಡುಪುಗಳ ರಫ್ತಿನಿಂದ ಲಾಭ ಗಳಿಸುವಿರಿ.
03 ಮಾರ್ಚ್ 2026, 23:30 IST
ಮಿಥುನ
ವ್ಯವಹಾರದ ವಿಷಯಗಳಲ್ಲಿ ಸಂಬಂಧಗಳಿಗೆ ಆಸ್ಪದವಿರದಂತೆ ನೋಡಿಕೊಳ್ಳಿ. ವಿದೇಶದಿಂದ ಸ್ನೇಹಿತರ ಆಗಮನ ಸಂತೋಷ ತರಲಿದೆ. ರಾಜಕೀಯ ಭವಿಷ್ಯಕ್ಕೆ ಮೋಡ ಕವಿದಂತೆ ಆಗುತ್ತದೆ.
03 ಮಾರ್ಚ್ 2026, 23:30 IST
ಕರ್ಕಾಟಕ
ಆರ್ಥಿಕ ಪರಿಸ್ಥಿತಿಯಿಂದ ಮುಂದುವರಿಯಲು ಮತ್ತು ಕಾರ್ಯಕ್ಷೇತ್ರ ವನ್ನು ವಿಸ್ತರಿಸಲು ಪೂರಕವಾಗುವುದು. ಮಹತ್ವದ ಮಾತುಕತೆ ನಡೆಸುವಾಗ ಧೈರ್ಯವಾಗಿ ಮಾತನಾಡಿ.
03 ಮಾರ್ಚ್ 2026, 23:30 IST
ಸಿಂಹ
ಹಳೆಯ ಕಹಿ ಘಟನೆಗಳಿಂದ ಕಲಿತ ಪಾಠ, ಬಡತನದಿಂದ ಕಲಿತ ಪಾಠವು ಉತ್ತಮ ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ. ಕರಕುಶಲ ವಸ್ತುಗಳ ತಯಾರಿಕಾ ವೃತ್ತಿಗಳಿಂದ ವರಮಾನ ಸಿಗಲಿದೆ.
03 ಮಾರ್ಚ್ 2026, 23:30 IST
ಕನ್ಯಾ
ಹೂವಿನ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಹಾಗೂ ಲಾಭವಿರುವುದರಿಂದ ಜೀವನ ನಡೆಸುವುದು ಕಷ್ಟವೆನಿಸದು. ಸಾಮಾಜಿಕ ಬದುಕಿನಲ್ಲಿ ಉತ್ತಮ ಸಾಧನೆ ಮಾಡಲು ಸೂಕ್ತ ಅವಕಾಶ ಸಿಗಲಿದೆ.
03 ಮಾರ್ಚ್ 2026, 23:30 IST
ತುಲಾ
ಆಫೀಸಿನಲ್ಲಿ ನಡೆಯುವ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರವಾಗಿಯೇ ಇರುತ್ತಾರೆ. ಆರೋಗ್ಯವು ಆಹಾರದಲ್ಲಿ ಪಥ್ಯ ಮಾಡುವುದರ ಪ್ರಭಾವದಿಂದ ಸುಧಾರಣೆಗೆ ಬರುತ್ತದೆ.
03 ಮಾರ್ಚ್ 2026, 23:30 IST
ವೃಶ್ಚಿಕ
ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶು ಸಂಗೋಪನೆ ಯಿಂದ ಲಾಭ ಇರುವುದು. ಮಕ್ಕಳೊಂದಿಗೆ ವ್ಯವಹಾರದ ವಿಚಾರಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸುವಿರಿ. ಕೈಗೂಂಡ ಕಾರ್ಯ ಸಫಲವಾಗಲಿದೆ.
03 ಮಾರ್ಚ್ 2026, 23:30 IST
ಧನು
ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದು ವರಿಯಲು ಸಹಾಯವಾಗುತ್ತದೆ. ನವದಂಪತಿಗೆ ಶುಭಪ್ರದವಾದ ಸಂತಾನ ಭಾಗ್ಯ ದೊರೆತು ಸಂತೋಷವಾಗುವುದು.
03 ಮಾರ್ಚ್ 2026, 23:30 IST
ಮಕರ
ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನ ಫಲಕಾರಿ ಆಗಲಿದೆ. ಆದರೆ ಉದ್ಯೋಗಕ್ಕಾಗಿ ಖಾಸಗಿ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ತಾಳ್ಮೆಯನ್ನು ಪರೀಕ್ಷಿಸುವ ಕೆಲಸಕ್ಕೆ ಕೈ ಹಾಕದಿರಿ.
03 ಮಾರ್ಚ್ 2026, 23:30 IST
ಕುಂಭ
ಅನ್ಯರಿಂದ ಆರ್ಥಿಕ ಸಹಾಯ ನಿರೀಕ್ಷಿಸುವುದು ಸರಿಯಲ್ಲ. ಅದು ಸಾಧ್ಯವಾಗುವುದೂ ಇಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮಾರ್ಗದಲ್ಲಿ ಪ್ರತಿ ಹೆಜ್ಜೆ ಇರಲಿ. ಧ್ಯಾನ ಭಜನೆಗಳತ್ತ ಮನಸ್ಸು ನಿಲ್ಲುವುದು.
03 ಮಾರ್ಚ್ 2026, 23:30 IST
ಮೀನ
ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ಯೋಚಿಸಿ ಉಪಯೋಗಿಸಿಕೊಂಡರೆ ಪೂರ್ಣಪ್ರಮಾಣದ ಲಾಭಾಂಶ ಅನುಭವಕ್ಕೆ ಬರುವುದು. ಯಾರ ಮಾತಿಗೂ ಮರುಳಾಗದೆ ತೀರ್ಮಾನಿಸುವುದು ಉತ್ತಮ.
03 ಮಾರ್ಚ್ 2026, 23:30 IST