ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 22 ಗುರುವಾರ 2024– ಇಂದು ಮದುವೆ ಪ್ರಸ್ತಾಪ ಬರಲಿದೆ
Published 21 ಫೆಬ್ರುವರಿ 2024, 18:41 IST
ಪ್ರಜಾವಾಣಿ ವಿಶೇಷ
author
ಮೇಷ
ವ್ಯಾಪಾರದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶ ನೋವನ್ನು ತರಲಿದೆ. ಕುಟುಂಬ ವರ್ಗದಲ್ಲಿ ಸಣ್ಣ ಪುಟ್ಟ ವಿವಾದಗಳು ಉಂಟಾಗಬಹುದು. ಎಲ್ಲಾ ಭಾವನೆಗಳಿಗೆ ಸಕರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ.
ವೃಷಭ
ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದರಲ್ಲಿ ವ್ಯತ್ಯಾಸವಾಗಬಹುದು. ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಮಿಥುನ
ಏರುಪೇರಾಗಿದ್ದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತಂದ ನೆಮ್ಮದಿ ಕಾಣಲಿದೆ. ವೃತ್ತಿಯನ್ನು ಸವಾಲೆಂಬಂತೆ ಸ್ವೀಕರಿಸುವ ಸನ್ನಿವೇಶಗಳು ಎದುರಾಗುತ್ತದೆ. ಗೊಂದಲ ಈ ದಿನ ತಿಳಿಯಾಗುತ್ತದೆ
ಕರ್ಕಾಟಕ
ಈ ದಿನ ಸಾಲ ತೆಗೆದುಕೊಳ್ಳುವುದು ಮತ್ತು ಸಾಲ ಕೊಡುವುದು ಉಚಿತವಲ್ಲ. ಸತ್ಯದ ಹಾದಿಗೆ ಯಾವಾಗಲೂ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಮಹಾಗಣಪತಿಯನ್ನು ಆರಾಧಿಸಿ. ಶುಭವಾಗುವುದು.
ಸಿಂಹ
ಪ್ರೀತಿ ಪಾತ್ರರಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸೂಕ್ತವಾದ ದಿನ. ಕುಟುಂಬದಲ್ಲಿ ಎಲ್ಲರ ಆರೋಗ್ಯವೂ ಉತ್ತಮವಾಗಿರುವುದು. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು.
ಕನ್ಯಾ
ಮಂದಗತಿಯಲ್ಲಿರುವ ಕೆಲವು ಕೆಲಸಗಳನ್ನು ಶೀಘ್ರ ಪೂರೈಸಲು ಸಿಬ್ಬಂದಿಗೆ ಒತ್ತಡ ಹೇರುವಿರಿ. ಹಿರಿಯರ ಆಶೀರ್ವಾದ ಲಭಿಸುವುದು. ಮುಕ್ತಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊಳ್ಳಿರಿ.
ತುಲಾ
ಮನೆಯವರ ಸಹಾಯದಿಂದ ಹಿಂದಿನ ಹಣಕಾಸಿನ ತೊಂದರೆಗಳು ದೂರಾಗಿ ಯೋಜನೆಗೆ ಚಾಲನೆಯು ದೊರೆಯಲಿದೆ. ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತದೆ.
ವೃಶ್ಚಿಕ
ಮತ್ಸರ ಗುಣವನ್ನು ಹೊಂದಿದ ಬಂಧುಗಳ ಅಥವಾ ಗೆಳೆಯರ ಯಾವ ಮಾತಿಗೂ ಕಿವಿಗೊಡದಿರಿ. ದುರ್ಗಾಪರಮೇಶ್ವರಿಯ ಆರಾಧನೆಯಿಂದ ವೈಯಕ್ತಿಕ ವ್ಯವಹಾರಗಳಲ್ಲಿ ಇದ್ದ ಇರುಸುಮುರುಸುಗಳು ದೂರಾಗಲಿದೆ.
ಧನು
ಈವರೆಗೆ ಬಾಕಿಯಿದ್ದ ವ್ಯಾಜ್ಯಗಳು ಒಡಹುಟ್ಟಿದವರ ಸಹಾಯದಿಂದ ಬಗೆಹರಿಯುವವು. ದೇವರ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುವುದು. ಹಣಕಾಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.
ಮಕರ
ಖರ್ಚು ವೆಚ್ಚಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವಿರಿ. ದಿನೇ ದಿನೇ ಸಂಸಾರದಲ್ಲಿ ನೆಮ್ಮದಿ ವೃದ್ಧಿಯಾಗಲಿದೆ. ಬೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವವರಿಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ.
ಕುಂಭ
ಸಿಬ್ಬಂದಿಯಲ್ಲಿ ಉತ್ಸಾಹ ತುಂಬಿ ನಾಯಕತ್ವದ ಸ್ಥಾನದಲ್ಲಿ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಕ್ರಿಯೆ ಸಮರ್ಥಿಸಿಕೊಳ್ಳಲು ಸಾಕಷ್ಟು ಕಾರಣ ಸಿಗಲಿವೆ. ಕಾರ್ಯತಂತ್ರ ಸುಧಾರಣೆ ಬಗ್ಗೆ ಚಿಂತಿಸಿ
ಮೀನ
ಜಾಣ್ಮೆಗೆ ಸಂಬಂಧಪಟ್ಟವರಿಂದ ಸರಿಯಾದ ಪ್ರೋತ್ಸಾಹ ದೊರೆಯಲಿದ್ದು, ಧ್ಯೇಯದಲ್ಲಿ ಗಂಭೀರ ಬದಲಾವಣೆ ಹೊಂದುವಿರಿ. ಸಹೋದ್ಯೋಗಿಯೊಂದಿಗೆ ಮದುವೆ ಪ್ರಸ್ತಾಪ ಬರಲಿದೆ.