ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿ
Published 20 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸ-ಕಾರ್ಯವನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವಂಥ ಬುದ್ಧಿವಂತಿಕೆ ತೋರುವಿರಿ. ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲಿದೆ.
20 ಫೆಬ್ರುವರಿ 2026, 22:30 IST
ವೃಷಭ
ಗೃಹದಲ್ಲಿ ಹೊಂದಾಣಿಕೆ ಕೊರತೆಯಿಂದ ಭಿನ್ನಾಭಿಪ್ರಾಯ ಮೂಡಿಬಂದು ದುಗುಡುತನ ಹೆಚ್ಚಾಗಲಿದೆ. ಹೊಸತನ್ನು ಸಾಧಿಸುವ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ಗಮನ ಸೆಳೆಯಲಿವೆ.
20 ಫೆಬ್ರುವರಿ 2026, 22:30 IST
ಮಿಥುನ
ಫಲಕಾರಿ ಯೋಚನಾಲಹರಿಗಳನ್ನು ಕಂಡ ವ್ಯವಹಾರದ ಪಾಲು ದಾರರು ಮಾತಿನಂತೆಯೇ ನಡೆಯುವರು. ಕಾರ್ಯಸಾಧನೆಗೆ ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕಾದ ಸನ್ನಿವೇಶ ಎದುರಾಗುತ್ತದೆ.
20 ಫೆಬ್ರುವರಿ 2026, 22:30 IST
ಕರ್ಕಾಟಕ
ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು. ಅತಿಯಾದ ಆಲಸ್ಯತನ ಸರ್ವತೋಮುಖ ಏಳಿಗೆಗೆ ಹಾನಿ ಉಂಟುಮಾಡಲಿದೆ.
20 ಫೆಬ್ರುವರಿ 2026, 22:30 IST
ಸಿಂಹ
ದುರ್ಬುದ್ಧಿ ಹೊಂದಿರುವ ಜನರ ಸಹವಾಸದಿಂದ ದೂರವಿರುವ ಬಗ್ಗೆ ಪ್ರಯತ್ನವಿರಲಿ. ಸಂಶೋಧಕರಿಗೆ ಕಾರ್ಯ ಪ್ರವೃತ್ತಿಯಲ್ಲಿ ದೊಡ್ಡಮಟ್ಟದಲ್ಲಿ ವಸ್ತು ನಷ್ಟ ಆಗಬಹುದು ಅಥವಾ ಸಂಶೋಧನೆಯಲ್ಲಿ ಹಿನ್ನಡೆಯಾಗುತ್ತದೆ.
20 ಫೆಬ್ರುವರಿ 2026, 22:30 IST
ಕನ್ಯಾ
ಕಾರ್ಯದಲ್ಲಿ ಕ್ರೀಯಾಶೀಲರಾಗಿ. ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿರಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆಯನ್ನು ನಿವಾರಿಸಿಕೊಂಡು, ವರಮಾನವನ್ನೂ ಹೆಚ್ಚಿಸಿಕೊಳ್ಳುವಿರಿ.
20 ಫೆಬ್ರುವರಿ 2026, 22:30 IST
ತುಲಾ
ಕೊಟ್ಟ ಮಾತನ್ನು ಅನಿವಾರ್ಯವಾಗಿ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಅನಾಥ ಹುಡುಗನೊಬ್ಬನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಚನೆಯನ್ನು ಮಾಡುವಿರಿ.
20 ಫೆಬ್ರುವರಿ 2026, 22:30 IST
ವೃಶ್ಚಿಕ
ಕೆಲಸದಲ್ಲಿ ತೊಡಕು ತಾಪತ್ರಯ ಉಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು. ನಿರ್ದಾಕ್ಷಿಣ್ಯ ಕಾರ್ಯ ವೈಖರಿಯಿಂದ ಅಧಿಕಾರಿಗಳಿಗೂ ನಿಮಗೂ ಸಂಪರ್ಕ ದೂರಾಗುವಂತಾಗಲಿದೆ.
20 ಫೆಬ್ರುವರಿ 2026, 22:30 IST
ಧನು
ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಲಿದೆ. ಎಲ್ಲಾ ದಾರಿಗಳು ಸುಗಮ ಎನಿಸಿ ಎಲ್ಲಾ ಕಷ್ಟ ನಷ್ಟಗಳು ನಿವಾರಣೆಯಾಗಲಿವೆ.
20 ಫೆಬ್ರುವರಿ 2026, 22:30 IST
ಮಕರ
ಮಗನಿಗೆ ಸದಸ್ಯತ್ವದ ಸಂಸ್ಥೆಯಿಂದ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ನೆರವು ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ವಹಿಸಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ
20 ಫೆಬ್ರುವರಿ 2026, 22:30 IST
ಕುಂಭ
ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ಇರಲಿದೆ. ಕೆಲಸಗಾರರ ಸಹಕಾರ ಸಿಗುವುದು. ಅಧಿಕ ರೀತಿಯ ಖರ್ಚು-ವೆಚ್ಚಗಳು ಬಂದರೂ ಉಳಿತಾಯಕ್ಕೆ ಕೊರತೆ ಕಾಣುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಾಣುವುದು.
20 ಫೆಬ್ರುವರಿ 2026, 22:30 IST
ಮೀನ
ಅಭಿವೃದ್ಧಿಗೆ ಬೇಕಾದ ಅದ್ಭುತ ಅವಕಾಶ ದೇವರ ಆಶೀರ್ವಾದದಿಂದ ಒದಗಿ ಬರಲಿದೆ. ಪದವಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಬಂಡವಾಳ ಹೂಡಬಹುದು.
20 ಫೆಬ್ರುವರಿ 2026, 22:30 IST