ಬುಧವಾರ, 14 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆಫೀಸಿನಲ್ಲಿ ಸ್ಥಾನಮಾನಗಳು ದೊರೆಯಲಿವೆ
Published 13 ಜನವರಿ 2026, 23:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಈ ಹಿಂದೆ ಪ್ರಾರಂಭವಾಗಿರುವ ಕಾರ್ಯಗಳು ಮನುಷ್ಯ ಪ್ರಯತ್ನದ ಕೊರತೆಯಿಂದ ಸ್ತಬ್ಧವಾದಂತಾಗಲಿದೆ. ನಿರೀಕ್ಷಿತ ಧನಾಗಮನವಿದ್ದರೂ ಆರ್ಥಿಕ ವಿಷಯಗಳಲ್ಲಿ ಎಚ್ಚರವಹಿಸಿ.
ವೃಷಭ
ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನ ಅನಿವಾರ್ಯ ಮತ್ತು ಸರಿ ಆಗುವುದು. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲ. ಸ್ವಂತ ಕೆಲಸವನ್ನು ಜರೂರಾಗಿ ಮಾಡಬೇಕಾಗುತ್ತದೆ.
ಮಿಥುನ
ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು.ಮನೆಯಲ್ಲಿ ದೇವತಾ ಕಾರ್ಯಕ್ರಮಗಳನ್ನು ಏರ್ಪಡಿಸುವಿರಿ. ವಾಯುಬಾಧೆ ಉಂಟಾಗುವುದರಿಂದ ಸಣ್ಣ-ಪುಟ್ಟ ಅನಾರೋಗ್ಯ ಎದುರಾಗುವುದು.
ಕರ್ಕಾಟಕ
ಸಂಶೋಧಕರರಿಗೆ ಅನುಕೂಲಕರ ಪುಸ್ತಕ ದೊರೆಯಲಿದೆ. ಸರ್ವರಂಗದಲ್ಲೂ ಜಯಶಾಲಿಯ ಪಟ್ಟ ಹೊಂದುವ ಯೋಗವಿದೆ. ಬೇಕರಿ ಪದಾರ್ಥಗಳ ಮಾರಾಟದಿಂದಲಾಭ ಇರುವುದು.
ಸಿಂಹ
ಸಂಬಂಧಿಕರಲ್ಲಿ ಆರ್ಥಿಕ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಗಳು ಬರಬಹುದು. ಉದ್ಯೋಗದಲ್ಲಿನ ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸ್ಥೈರ್ಯ ಇರಲಿ.
ಕನ್ಯಾ
ದಾರಿಹೋಕರ ಟೀಕೆಗಳಿಗೆ ಹೆದರದೆ ಕೆಲಸದಲ್ಲಿ ಸಕಾರಾತ್ಮಕವಾಗಿ ಮುಂದುವರಿಯಿರಿ. ನಟನಾ ವೃತ್ತಿಯವರಿಗೆ ಸಂಪತ್ತು ಹರಿದು ಬರಲಿದೆ. ಸಂತಸದ ವಾತಾವರಣದಿಂದ ನೆಮ್ಮದಿ ಇರುವುದು.
ತುಲಾ
ಯಾವುದೇ ನಿಯಮ ಉಲ್ಲಂಘನೆಯಾಗದೇ ಇರುವ ರೀತಿಯಲ್ಲಿ ಇರುವುದು ಉತ್ತಮ. ಶನೈಶ್ಚರನ ಆರಾಧನೆಯಿಂದ ಜಟಿಲ ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
ವೃಶ್ಚಿಕ
ವ್ಯವಹಾರವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಅನುಷ್ಠಾನಕ್ಕೆ ತರಲು ಸಕಾಲ. ರಕ್ತದ ಅಶುದ್ಧಿಯಿಂದ ಸಮಸ್ಯೆಗಳು ಕಾಡಬಹುದು. ಜೀವನದ ಬಗ್ಗೆ ನಿರುತ್ಸಾಹ ತಾಳದಿರಿ.
ಧನು
ಟ್ರಾವೆಲ್ಸ್ ಏಜೆನ್ಸಿ ಉದ್ಯೋಗದವರಿಗೆ ಲಾಭದಾಯಕ ಬೆಳವಣಿಗೆ ಇರುತ್ತದೆ. ಆಫೀಸಿನಲ್ಲಿ ಸ್ಥಾನಮಾನಗಳು ದೊರೆಯಲಿವೆ. ಉತ್ತಮ ಕಾರ್ಯಗಳಿಗೆ ಎಂದಿನಂತೆ ಶ್ಲಾಘನೆ ಸಿಗುತ್ತದೆ.
ಮಕರ
ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ. ತಂದೆಯವರ ಮನಸ್ಸನ್ನು ನೋಯಿಸದೇ, ತಂದೆಯವರ ಮಾತಿನಂತೆ ನಡೆಯುವುದು ಶ್ರೇಯಸ್ಕರ.
ಕುಂಭ
ವ್ಯಾಪಾರದಲ್ಲಿ ಸಹಚರರಿಂದ ಮೋಸವಾಗುತ್ತಿರುವ ವಿಚಾರ ಅನುಭವಕ್ಕೆ ಬಂದು ದುಃಖವಾಗಬಹುದು. ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಮಾರ್ಗದರ್ಶನ ದೊರೆಯಲಿದೆ.
ಮೀನ
ಕೆಲಸದಲ್ಲಿ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ದೂರ ಪ್ರಯಾಣದ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಸಮಾಜದಲ್ಲಿ ಮೃದುಭಾಷಿಗಳು ಎನಿಸಿಕೊಳ್ಳುವಿರಿ.
ADVERTISEMENT
ADVERTISEMENT