ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಸಾಂಸಾರಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ
Published 24 ಏಪ್ರಿಲ್ 2024, 18:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಷ್ಟು ಜಾಗರೂಕತೆಯಿಂದ ಕೆಲಸ ಮಾಡಿದರೂ ಮೇಲಿನ ಅಧಿಕಾರಿಗಳ ಹದ್ದಿನ ಕಣ್ಣಿಗೆ ನಿಮ್ಮ ಕೆಲವು ದೋಷಗಳು ಕಾಣುತ್ತವೆ. ನಿಮ್ಮ ಸ್ನೇಹಿತನಿಗಾದ ವಾಹನ ಅಪಘಾತವು ನಿಮ್ಮನ್ನು ಖೇದವಾಗಿಸುವುದು.
ವೃಷಭ
ಯಾವುದೋ ಕಾರಣದಿಂದ ದೂರವಾದ ಸ್ನೇಹಿತ ಮತ್ತೆ ನಿಮ್ಮ ಪ್ರಾಣ ಸ್ನೇಹಿತನಾಗಿ ಮರಳಲಿದ್ದಾನೆ. ಉನ್ನತ ವಾಣಿಜ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಯಶಸ್ಸಿನ ಸಾಧ್ಯತೆ ಇದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಮಿಥುನ
ನಿಮ್ಮ ತಪ್ಪುಗಳಿಗೆ ಕಾರಣವನ್ನು ಹುಡುಕುವುದು ಹಾಗೂ ಇತರರಿಗೆ ಕಾರಣವನ್ನು ಕೊಡುವುದರಲ್ಲಿ ಹುರುಳಿಲ್ಲ. ಅಧಿಕಾರಿಗಳ ಮುಖಸ್ತುತಿಯಿಂದ ನಿಮ್ಮ ಕೆಲಸ ಆಗುತ್ತದೆ ಎಂದು ಭಾವಿಸಿದ್ದರೆ ಆ ಯೋಚನೆಯನ್ನು ಕೈಬಿಡಿ.
ಕರ್ಕಾಟಕ
ಪ್ರತಿದಿನವೂ ಭಕ್ತಿಯಿಂದ ದೇವರನ್ನು ನೀವು ಸ್ತುತಿಸುವುದರಿಂದ ಇಂದು ನಿಮಗೆ ಎದುರಾಗಲಿರುವ ಸಣ್ಣ ಪುಟ್ಟ ಸಮಸ್ಯೆಗಳು ಸರಾಗವಾಗಿ ನಿವಾರಣೆಯಾಗಲಿದೆ. ನಿಮಗೆ ಸಂತಸ ತರುವ ಸಂಗತಿಗಳಿಗೆ ಇಂದು ಕೊರತೆ ಇಲ್ಲ.
ಸಿಂಹ
ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸಹವರ್ತಿಗಳ ಅಭಿಪ್ರಾಯ ಗಳನ್ನು ಪಡೆದುಕೊಳ್ಳಿ. ಎಲ್ಲದರಿಂದಲೂ ಧನಲಾಭವನ್ನು ಮಾತ್ರ ಯೋಚಿಸಬೇಡಿ. ಸಹಾಯ ಮಾಡುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳಿ.
ಕನ್ಯಾ
ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ದೀರ್ಘವಾದ ಶ್ವಾಸವನ್ನು ಬಿಡುವಂತಹ ಸಂದರ್ಭ ಎದುರಾಗಲಿದೆ. ಇಂದು ನೀವು ಭೇಟಿ ಮಾಡುವಂಥ ವ್ಯಕ್ತಿಯ ಸಾಂಗತ್ಯವು ಸಾರ್ಥಕವೆಂದು ಎನಿಸುವುದು.
ತುಲಾ
ಮನಃಶಾಸ್ತ್ರಜ್ಞರು ರೋಗಿಗಳೊಂದಿಗೆ ವ್ಯವಹರಿಸುವುದು ಕಷ್ಟಕರ ವಾಗಿರುತ್ತದೆ. ತಿಳಿದವರ ಮಾರ್ಗದರ್ಶನದಿಂದ ಮುನ್ನಡೆದರೆ ಎಲ್ಲವೂ ಪರಿಹಾರವಾಗುವುದು. ಅನಿರೀಕ್ಷಿತ ಪ್ರಯಾಣ ಬೆಳಸಬೇಕಾಗುವುದು.
ವೃಶ್ಚಿಕ
ಉನ್ನತ ವ್ಯಾಸಂಗಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಮಂದಗತಿ ನಡೆ ಇದ್ದರೂ ಅಭಿವೃದ್ಧಿಯಂತೂ ಖಚಿತವಾಗಿ ಅನುಭವಕ್ಕೆ ಬರುವುದು. ಸಾಂಸಾರಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ.
ಧನು
ನಿಮ್ಮ ಉಡುಗೆ ತೊಡುಗೆ ಮೇಲೆ ಅತಿಯಾದ ಗಮನ ಕೊಡುವುದರಿಂದ ಸಮಯದ ಅಭಾವ ಉಂಟಾಗಬಹುದು. ನಿಮ್ಮ ದೇಹದಲ್ಲಾಗುವ ಅನಿರೀಕ್ಷಿತ ಬದಲಾವಣೆಗಳು ನಿಮ್ಮ ಆತಂಕಗಳಿಗೆ ಕಾರಣವಾಗುವಂತಹ ಸಾಧ್ಯತೆ ಇದೆ.
ಮಕರ
ಹಣ್ಣಿನ ತೋಪನ್ನು ಮಾಡಲು ಇಚ್ಚಿಸುತ್ತಿರುವ ಕೃಷಿಕರಿಗೆ ನಿಮ್ಮ ಹಣದ ಜೊತೆಗೆ ದಾನಿಗಳ ಹಣವೂ ಕೈಸೇರುವ ಸಾಧ್ಯತೆ ಇದೆ. ದೇವತಾ ಅನುಗ್ರಹ ಉತ್ತಮವಿದ್ದು ಬಂದ ಕಷ್ಟ-ನಷ್ಟಗಳು ಉಪಶಮನಗೊಳ್ಳುತ್ತವೆ.‌
ಕುಂಭ
ನಿಮ್ಮ ಸಂಭಾಷಣೆಯಲ್ಲಿನ ಉತ್ತಮ ಪದಗಳ ಬಳಕೆಯು ನಿಮ್ಮ ಮುಂದಿರುವವರನ್ನು ಆಕರ್ಷಿಸಿ ಲಾಭವನ್ನುಂಟುಮಾಡುತ್ತದೆ. ಅಪರಿಚಿತ ವ್ಯಕ್ತಿಯ ಕರೆಯೊಂದು ಇಂದು ನಿಮ್ಮ ಮನಸ್ಸನ್ನು ತಳಮಳಗೊಳಿಸುತ್ತದೆ.
ಮೀನ
ನಿಮ್ಮ ಜೀವನ ಸಂಪೂರ್ಣವಾಗಿ ಪೋಷಕರ ಮೇಲೆ ಅವಲಂಬಿತ ವಾಗಿರುವುದರಿಂದ ಯಾವುದೇ ಸಸಾರದ ಮಾತುಗಳಿಗೂ ಆಸ್ಪದ ಬೇಡ. ಬೆನ್ನು ನೋವು ಹೋಗಲಾಡಿಸಿಕೊಳ್ಳುವ ಸಲುವಾಗಿ ಯೋಗಾಭ್ಯಾಸ ಮಾಡಿರಿ.