ದಿನ ಭವಿಷ್ಯ: ಈ ರಾಶಿಯವರು ಯಾವುದೇ ರೀತಿಯಲ್ಲೂ ಆರೋಗ್ಯದ ಬಗ್ಗೆ ಉದಾಸೀನ ತೋರದಿರಿ
Published 29 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿ ಶಾಂತ ವಾತಾವರಣವಿರಲಿದ್ದು , ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಸಿಗುವುದು. ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ, ಕೆಲಸಗಳನ್ನು ಮುಂದುವರಿಸುವಿರಿ.
ವೃಷಭ
ಎಣ್ಣೆ , ಬೇಳೆಕಾಳು ವ್ಯಾಪಾರ ಉತ್ತಮವಾಗಿರುವುದು. ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡವರು ವಾತಾವರಣವನ್ನು ಉದ್ದೇಶಿಸಿ ಇನ್ನೊಮ್ಮೆ ಯೋಚಿಸಿ, ತೀರ್ಮಾನಿಸಿ.
ಮಿಥುನ
ಹೊಸ ಯೋಜನೆ ರೂಪಿಸಲು ಒಳ್ಳೆಯ ಸಮಯ, ಸಹೋದರರಿಂದ ಉತ್ತಮ ಸಹಕಾರ ಸಿಗುತ್ತದೆ. ವಿವಾಹ ಅಪೇಕ್ಷಿಗಳಿಗೆ ಶುಭವಿರುತ್ತದೆ. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಕರ್ಕಾಟಕ
ವ್ಯವಸ್ಥಿತವಾಗಿ ನಿಮ್ಮ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿರುವ ಯೋಜನೆಗಳು ಪೂರ್ಣಗೊಳ್ಳಲಿವೆ. ಅವಿವಾಹಿತರಿಗೆ ಅವರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಈ ದಿನ ಪ್ರಾಪ್ತಿಯಾಗುತ್ತವೆ.
ಸಿಂಹ
ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ನಿಮ್ಮ ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ. ಅಧಿಕಾರ, ಅನುಭವದಿಂದ ನಿಮ್ಮ ಆತ್ಮಾಭಿಮಾನ ವೃದ್ಧಿಯಾಗಲಿದೆ.
ಕನ್ಯಾ
ಉದ್ಯೋಗದ ವಿಷಯದಲ್ಲಿನ ಅನಿಶ್ಚಿತತೆಯ ಭಯ ದೂರವಾಗುವುದು. ಹಣಕಾಸಿನ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗಲಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಅಪರಾಹ್ನ ಹೆಚ್ಚಿನ ಕೆಲಸವಿರಲಿದೆ.
ತುಲಾ
ಮಾಹಿತಿ ತಂತ್ರಜ್ಞಾನದ ವಲಯದವರಿಗೆ ಹೆಚ್ಚಿನ ಆದಾಯ ಇದ್ದರೂ ಕೆಲಸದಲ್ಲಿ ಅಸಮಾಧಾನ ಉಂಟಾಗಬಹುದು. ಸಿದ್ಧ ಉಡುಪು ತಯಾರಕರಿಗೆ ಹೆಚ್ಚಿನ ಬೇಡಿಕೆ ದೊರೆತು ಸಂತೋಷಕರ ವಾತಾವರಣ ನಿಮ್ಮದಾಗಲಿದೆ.
ವೃಶ್ಚಿಕ
ಅತ್ಯಂತ ಬುದ್ಧಿವಂತರಾದ, ತಿಳಿವಳಿಕೆ ಹೊಂದಿವರಾದ ನೀವು ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ದಂತವೈದ್ಯರಿಗೆ ಅನುಕೂಲದ ದಿನ.
ಧನು
ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಸಿಗುತ್ತದೆ. ಉದ್ಯೋಗದಲ್ಲಿ ಆಭಿವೃದ್ಧಿ ಹೊಂದುವಿರಿ. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುತ್ತವೆ. ಉದ್ಯೋಗಕ್ಕಾಗಿ ಹೊರ ದೇಶದ ಪ್ರಯಾಣದ ಅವಕಾಶಗಳು ಸಿಗಬಹುದು.
ಮಕರ
ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬೆಂಕಿಯಿಂದ ಅನಾಹುತಗಳು ಸಂಭವಿಸುವ ಲಕ್ಷಣಗಳಿರುವುದರಿಂದ ಜಾಗೃತರಾಗಿರುವುದು ಒಳ್ಳೆಯದು.
ಕುಂಭ
ವರ್ತನೆಯಲ್ಲಿ ಸಮತೋಲನ ಹಾಗೂ ಸ್ಥಿರತೆ ಕಾಯ್ದುಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಕಂಡುಬರಲಿದೆ. ಯಾವುದೇ ರೀತಿಯಲ್ಲೂ ಆರೋಗ್ಯದ ಬಗ್ಗೆ ಉದಾಸೀನ ತೋರದಿರಿ.
ಮೀನ
ಆತ್ಮ ಗೌರವ, ರಕ್ಷಣೆ ದೃಷ್ಟಿಯಿಂದ ಸಂದರ್ಭಗಳೊಡನೆ ರಾಜಿಮಾಡಿಕೊಳ್ಳುವುದು ಸೂಕ್ತ ಎನಿಸಲಿದೆ. ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು. ರಾಜಕಾರಣಿಗಳಿಗೆ ಶುಭ ಸುದ್ದಿ ದೊರೆಯಲಿದೆ.