ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಬಯಸಿದ್ದನ್ನು ಪಡೆಯುತ್ತೀರಿ
Published 19 ಮೇ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕ್ರೀಡಾಪಟುಗಳು ಛಲ ಬಿಡದೆ ಪರಿಶ್ರಮ ವಹಿಸಿದ್ದಕ್ಕಾಗಿ ಉತ್ತಮ ಅವಕಾಶಗಳೊಂದಿಗೆ ಉತ್ತಮ ಮಾರ್ಗದರ್ಶಕರು ದೊರೆತು ಜಯದ ಪಥದಲ್ಲಿ ನಡೆಯುವಿರಿ. ನ್ಯಾಯಾಲಯದ ವಿಚಾರಣೆಗಳಲ್ಲಿ ಜಯ ನಿಮ್ಮದಾಗಿರುತ್ತದೆ.
ವೃಷಭ
ಹಗಲು ರಾತ್ರಿ ಎಂದೆನ್ನದೆ  ಪಟ್ಟ ಶ್ರಮವು ಉತ್ತಮ ಫಲವನ್ನು ಶೀಘ್ರ  ನೀಡಲಿದೆ.  ಆಪ್ತರು  ಸಕಾಲಿಕ ನೆರವಿಗಾಗಿ  ಧನ್ಯವಾದ ತಿಳಿಸುವರು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ.
ಮಿಥುನ
ಹಿರಿಯ ವ್ಯಕ್ತಿಗಳ ಜೊತೆಗಿನ ಮಾತುಕತೆಯಿಂದಾಗಿ ಪಡೆದ ಮಾರ್ಗದರ್ಶನವು ಭೂಗೋಳ ಶಾಸ್ತ್ರಜ್ಞರಿಗೆ ಬಹಳ ಪ್ರಯೋಜನಕ್ಕೆ ಬರಲಿದೆ. ನವ ದಂಪತಿ ಪ್ರಯಾಣ ಮಾಡುವುದಿದ್ದರೆ ಬಹಳ ಮುಂಜಾಗ್ರತೆ ವಹಿಸಬೇಕು.
ಕರ್ಕಾಟಕ
ಹೂವಿನ ಗಿಡಗಳನ್ನು ಮಾರಾಟ ಮಾಡುವವರಿಗೆ ಹಣ ಸಂಪಾದನೆಯಾಗುತ್ತದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ಕೃತಕ ಜಾಹೀರಾತುಗಳಿಗೆ ಮಾರುಹೋಗದಿರಿ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಶಕ್ತಿಯುತವಾದ ಅಧಿಕಾರ ಸ್ಥಾಪಿಸಲು ಅನುಕೂಲಕರವಾದ ಸಮಯ ನಿರ್ಮಾಣವಾಗಲಿದೆ. ಕೆಲಸದಲ್ಲಿನ ಅಡೆತಡೆಗಳ ನಿವಾರಣೆಯಾಗಿ ಸಮಯ ಉಳಿತಾಯವಾಗಲಿದೆ.
ಕನ್ಯಾ
ಮನೆಯಲ್ಲಿ ನಡೆಯುವ ಶುಭಸಮಾರಂಭಕ್ಕೆ ಬಂಧುಗಳ ಸಹಕಾರ ದೊರೆಯಲಿದೆ. ಆಗು-ಹೋಗು ಅರಿತು ವ್ಯವಹಾರ ದಲ್ಲಿ ಮುಂದುವರಿಯಿರಿ. ಅನವಶ್ಯಕ ಖರ್ಚುಗಳು ಸಂಭವಿಸಬಹುದು.
ತುಲಾ
ಯಾರ ಪರವನ್ನು ವಹಿಸುವುದಿದ್ದರೂ ಸರಿಯಾದ ವಿಚಾರವನ್ನು ತಿಳಿ ಯದೆ ಮುಂದುವರಿಯಬೇಡಿ. ಜನತಾ ನಿರ್ಧಾರವನ್ನು ಅರಿಯದೆ ರಾಜಕೀಯ ನಾಯಕರು ಇಟ್ಟ ತಪ್ಪು ಹೆಜ್ಜೆಯು ನಿಂದನೆಗೊಳಗಾಗುವ ಸಾಧ್ಯತೆಗಳಿವೆ.
ವೃಶ್ಚಿಕ
ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಅಥವಾ ಮಾರ್ಗದರ್ಶಕರ ಸಲಹೆ ಪಡೆದು ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿರಿ. ಶಸ್ತ್ರವೈದ್ಯರಿಗೆ ಸಂಬಂಧಿಸಿದಂತೆ ಸೌಲಭ್ಯಗಳು ಹೆಚ್ಚಲಿವೆ.
ಧನು
ಪಿತ್ತದೋಷದಿಂದ ನಾನಾರೀತಿಯ ಕಾಯಿಲೆಗೆ ಒಳಗಾದವರು ಆಯು ರ್ವೇದದ ಮೊರೆಹೋಗುವುದು ಸೂಕ್ತಕರ. ರಾಜಕೀಯ ವರ್ಗದವರು ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.
ಮಕರ
ಹಿಂದಿನ ಸೂತ್ರಧಾರನು ನಡೆಸುತ್ತಿರುವ ಕೈವಾಡವು ಕಷ್ಟವಾಗುತ್ತಿದ್ದರೂ ಏನೂ ಮಾಡದ ಪರಿಸ್ಥಿತಿ ಎದುರಾಗುತ್ತದೆ. ಹಿಂದಿನ ಕುಟುಂಬದಲ್ಲಿನ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿದೆ.
ಕುಂಭ
ಪಿತ್ರಾರ್ಜಿತ ಆಸ್ತಿಗಾಗಿ ನಡೆಯುತ್ತಿದ್ದ ವಾದವಿವಾದಗಳು ಎಲ್ಲರಿಗೂ ಸರಿಯಾಗುವ ರೀತಿಯಲ್ಲಿ ಕೊನೆಗೊಂಡು  ಬಯಸಿದ್ದನ್ನು ಪಡೆಯುತ್ತೀರಿ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯ.
ಮೀನ
ಸ್ನೇಹಿತರೊಂದಿಗಿನ ಮಾತುಕತೆ ಉಪಯುಕ್ತವೆನಿಸಲಿದೆ. ಮಗನಿಗೆ ಓದಿನಲ್ಲಿ ಸಹಾಯ ಮಾಡುವಿರಿ. ಕೆಲಸಗಾರರಲ್ಲಿ ಒಮ್ಮತಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುವಿರಿ.