ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಸೆ.5: ಈ ರಾಶಿಯವರು ಸಾಂಸಾರಿಕ ಗೌಪ್ಯತೆಗಳನ್ನು ಕಾಪಾಡಿಕೊಳ್ಳಿ
Published 4 ಸೆಪ್ಟೆಂಬರ್ 2023, 20:02 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಸ್ಥೆಯ ಅಭಿವೃದ್ಧಿಗೆ ನೀವು ತೆಗೆದುಕೊಳ್ಳಬೇಕಾಗಿರುವ ನಿರ್ಧಾರಕ್ಕಾಗಿ ಈ ದಿನ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು ಉತ್ತಮ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನ ಕಂಡುಕೊಳ್ಳಬಹುದು.
ವೃಷಭ
ವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿ ರುವ ಯೋಜನೆ ಪೂರ್ಣಗೊಳ್ಳಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
ಮಿಥುನ
ಮಗನ ಸಂಪಾದನೆಯನ್ನು ನೋಡಿ ಹರ್ಷವಾಗುವುದು. ಪ್ರೀತಿ ಪಾತ್ರರಲ್ಲಿನ ಅಭಿಪ್ರಾಯ ವಿನಿಮಯಗಳಿಂದ ಮನಸ್ಸಿಗೆ ಆನಂದ, ನೆಮ್ಮದಿ ಮೂಡುವುದು. ಸಮಸ್ಯೆ ಪರಿಹರಿಸಿಕೊಳ್ಳುವಿರಿ.
ಕರ್ಕಾಟಕ
ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿಯಾಗುವುದು. ಮೂತ್ರಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಕಂಡು ಬಂದಲ್ಲಿ ನಿರ್ಲಕ್ಷಿಸುವುದು ಅಥವಾ ಮನೆಮದ್ದು ಮಾಡುವುದು ಸರಿಯಲ್ಲ.‌
ಸಿಂಹ
ಒಡಹುಟ್ಟಿದವರ ಸಹಾಯ ಸಹಕಾರದಿಂದ ಮಾನಸಿಕ ನೆಮ್ಮದಿ ಮತ್ತು ಸಂಸಾರದಲ್ಲಿ ಸಮತೋಲನ ಹೊಂದುವಿರಿ. ಅಧಿಕಾರಿಗಳ ಮನಸ್ಸಿನ ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ.
ಕನ್ಯಾ
ಷೇರುಪೇಟೆಯ ವ್ಯವಹಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಲಾಭಾಂಶ ಕಡಿಮೆ ಇರುವುದು. ಸಾಂಸಾರಿಕವಾದ ಕೆಲ ವಿಷಯಗಳ ಗೌಪ್ಯತೆ ಕಾಪಾಡಿಕೊಂಡು ಹೋಗುವುದು ನಿಮ್ಮ ಕುಟುಂಬಕ್ಕೆ ಒಳ್ಳೆಯದು.
ತುಲಾ
ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಯವರಲ್ಲಿ ಮಾತುಕತೆ ನಡೆಯಲಿವೆ, ಉಪಾಯದಿಂದ ಉತ್ತರಿಸಿ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಕನಸಿನ ಉತ್ತಮ ಅವಕಾಶಗಳು ಅರಸಿ ಬರಲಿವೆ.
ವೃಶ್ಚಿಕ
ಬೆಳೆದ ವಸ್ತುಗಳ ಮಾರಾಟದಿಂದ ಆರ್ಥಿಕ ಅನುಕೂಲವಾಗಿ ನಿಮ್ಮ ಮೇಲಿದ್ದ ಸಾಲದ ಹೊರೆ ಕಡಿಮೆಯಾಗಲಿದೆ. ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುವುದು ತಿಳಿದುಬರಲಿದೆ.
ಧನು
ಲೋಪ ದೋಷಗಳನ್ನು ತಿದ್ದಿಕೊಳ್ಳುವಂತೆ ಹಿರಿಯರಿಂದ ಸೂಚನೆ, ಅವರ ಅನುಭವದ ಮಾತು ಒದಗಿಬರುವುದು. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠೂರವಾಗಿ ವರ್ತಿಸಬೇಕಾಗುವುದು.
ಮಕರ
ಬಾಲ್ಯ ಸ್ನೇಹಿತನಿಗಾಗಿ ಮನೆಯಲ್ಲಿ ವಿಶೇಷ ಭೋಜನದ ವ್ಯವಸ್ಥೆ ಸಂತೋಷ ಪೂರ್ವಕವಾಗಿ ನಡೆಯುವುದು. ಬಟ್ಟೆ ವ್ಯಾಪಾರಿಗಳಿಗೆ ಇಂದು ಒಳ್ಳೆಯ ದಿನ. ಸಾಮಾಜಿಕ ಕೆಲಸಗಳಿಗಾಗಿ ನಿಮ್ಮ ಓಡಾಟ ಹೆಚ್ಚುವುದು.
ಕುಂಭ
ಕೆಲವು ಕೆಲಸಗಳನ್ನು ನಿರ್ವಹಿಸಲು ದೀರ್ಘ ಪ್ರಯಾಣ ಕೈಗೊಳ್ಳಬೇಕಾದ ಅನಿವಾರ್ಯತೆ ಮೂಡಲಿದೆ. ನಾಯಕತ್ವದ ಗುಣ ಸಹೋದ್ಯೋಗಿಗಳಸಹಕಾರದಿಂದ ವೃದ್ಧಿ. ಮಕ್ಕಳಿಂದ ಸಂತೋಷ, ಸೌಖ್ಯವಿರುವುದು.
ಮೀನ
ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವಿರಿ. ವಾಹನ ರಿಪೇರಿಗಾಗಿ ಸಣ್ಣ-ಪುಟ್ಟ ಖರ್ಚು ಸಂಭವಿಸಲಿದೆ. ಸಾಂಸಾರಿಕವಾಗಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ.
ADVERTISEMENT
ADVERTISEMENT