ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಪ್ರಯತ್ನಗಳು ಲಾಭ ತಂದುಕೊಡಲಿದೆ
Published 17 ಡಿಸೆಂಬರ್ 2023, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದ್ರಿಯಗಳ ಚಾಂಚಲ್ಯತೆಯು ನಿಮ್ಮ ಏಕಾಗ್ರತೆಯನ್ನು ಭಂಗಗೊಳಿಸುವ ಜೊತೆಗೆ ನಿಮ್ಮ ಹಾದಿಯನ್ನು ತಪ್ಪಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ತಪ್ಪು ನಿರ್ಧಾರ ತೆಗೆದುಕೊಳ್ಳುವಂತಾಗಬಹುದು.
ವೃಷಭ
ಸುತ್ತಮುತ್ತಲ ವಿದ್ಯಮಾನಗಳನ್ನು ಗಮನಿಸಿ ವೃತ್ತಿಪರ ಸಮಾಲೋಚನೆ ನಡೆಸಿ. ಇತರರೊಂದಿಗೆ ಇದ್ದ ವಿವಾದಗಳನ್ನು ರಾಜಿಯೊಂದಿಗೆ ಬಗೆಹರಿಸಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಪ್ರಯತ್ನಗಳು ಲಾಭವನ್ನು ತಂದು ಕೊಡುವವು.
ಮಿಥುನ
ನಿಮಗೆ ಒಳಿತಾಗುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ರೀತಿಯ ಯೋಚನೆ ಬೇಡ. ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸಿ. ಮಕ್ಕಳ ಆರೋಗ್ಯ ಉತ್ತಮ ಸ್ಥಿತಿಗೆ ಬರುತ್ತದೆ.
ಕರ್ಕಾಟಕ
ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ಸಮಾಧಾನ ಇರಲಿ. ದುಶ್ಚಟಗಳಿಂದ ಮುಕ್ತರಾಗುವ ಮನಸ್ಸಿನ ಮಾತು ಕೇಳಿ. ಕಾರ್ಮಿಕರ ಬೇಡಿಕೆ ಪೂರೈಸುವ ತೀರ್ಮಾನ ಮಾಡಿರಿ.
ಸಿಂಹ
ನಿಮ್ಮ ಅಧಿಕ ಶ್ರಮದಿಂದ ನಿಮ್ಮ ಕನಸಿನ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗುವುದು. ಅಧಿಕವಾಗಿದ್ದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವುದು.
ಕನ್ಯಾ
ಕೋರ್ಟು, ಕಚೇರಿ ವ್ಯವಹಾರದಲ್ಲಿ ಜಯ ಪಡೆಯುವ ಬಗ್ಗೆ ಅಧಿಕವಾದ ಪ್ರಯತ್ನವಿರಲಿ. ಹಳೆಯ ವಾಹನದ ಕೊಡು ಕೊಳ್ಳುವಿಕೆಯಲ್ಲಿ ಲೆಕ್ಕ ಪತ್ರಗಳಲ್ಲಿ ಹೆಚ್ಚಿನ ಗಮನವಿರಲಿ. ಬಟ್ಟೆ ಉದ್ಯಮದವರಿಗೆ ಇಂದು ಲಾಭ ಬರುವುದು.
ತುಲಾ
ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ.
ವೃಶ್ಚಿಕ
ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ. ಸಿನೆಮಾ ನಟ ನಟಿಯರಿಗೆ ಹೆಚ್ಚಿನ ಅವಕಾಶ ದೊರೆಯಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಸ್ನೇಹಿತನಿಂದ ಪ್ರಗತಿ ಉಂಟಾಗುವುದು.
ಧನು
ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ವಿಶೇಷ ಗಮನವಹಿಸಿ. ಲೇವಾದೇವಿ ವ್ಯವಹಾರ ನಡೆಸುವವರು ವ್ಯವಹಾರದಲ್ಲಿ ಸ್ವಲ್ಪ ಪ್ರಮಾಣದ ನಷ್ಟ ಸಂಭವಿಸಿ ಹಿನ್ನಡೆಯನ್ನು ಕಾಣಲಿದೆ.
ಮಕರ
ಆಡಳಿತಾರೂಢ ಜನರ ಸಂಪರ್ಕದಿಂದ ಕೆಲಸಗಳನ್ನು ಸಾಧಿಸಿಕೊಳ್ಳಲು ಬಹಳವಾಗಿ ಕಷ್ಟವೆನಿಸುವುದು. ಬಲು ಅಪರೂಪದ ಹಾಗು ನಿಮ್ಮ ಕೈಗತವಾದ ವಿದ್ಯೆಯು ನಿಮಗೆ ಅಧಿಕ ಲಾಭವನ್ನು ತಂದುಕೊಡುವುದು.
ಕುಂಭ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ಧನ್ಯತೆಯ ಮನೋಭಾವ ನಿಮ್ಮದಾಗುವುದು. ಆಪ್ತರು ಎಂದು ನೀವು ತಿಳಿದ ವ್ಯಕ್ತಿಗಳು ನಿಮ್ಮ ಆಪತ್ತಿನ ಕಾಲಕ್ಕೆ ಸಹಾಯವನ್ನು ಮಾಡದೇ ಇರಬಹುದು.
ಮೀನ
ತಾಂತ್ರಿಕ ವಿದ್ಯೆಯನ್ನು ವ್ಯಾಸಂಗ ಮಾಡುವವರಿಗೆ ಉತ್ತಮ ಫಲಿತಾಂಶ ಲಭಿಸುವುದು. ಮಗನ ಉದ್ಯೋಗದಲ್ಲಿನ ಪ್ರಗತಿಯಿಂದ ಸಂತೋಷವಾಗುತ್ತದೆ. ನಿಮ್ಮ ಸ್ವಂತ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣುವಿರಿ.