ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ಜೂನ್ 1ರಿಂದ 30ರವರೆಗೆ
Published 5 ಜೂನ್ 2023, 4:12 IST
ಪ್ರಜಾವಾಣಿ ವಿಶೇಷ
author
ಮೇಷ
ಮಾಸ ಭವಿಷ್ಯತಿಂಗಳ ಆರಂಬದಲ್ಲಿ ಕಾರ್ಯಸಿದ್ದಿ. ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸಂತಸ. ಮನೆ ಬಾಡಿಗೆಯಿಂದ ಧನಲಾಭ. ರಾಜಕಿಯದವರಿಗೆ ಕೈ ತಪ್ಪಿ ಹೋಗುವ ಅಧಿಕಾರ ಪ್ರಾಪ್ತಿ. ಗ್ರಂಥರಚನೆಯಲ್ಲಿ ಆಸಕ್ತಿ. ವಾಹನ ಸೌಖ್ಯ. ಮಕ್ಕಳಿಂದ ಮಾನಸಿಕ ಕಿರಿಕಿರಿ. ಬರತಕ್ಕ ಬಾಕಿ ಬರುವುದು. ಶುಭ: 6, 18, 22 ಅಶುಭ: 10, 14, 27
ವೃಷಭ
ತಿಂಗಳ ಪ್ರಾರಂಭದಲ್ಲಿ ಪ್ರವಾಸದಿಂದ ಗೃಹಾಗಮನ. ಸಹೋದರಿಯರಿಂದ ಶುಭವಾರ್ತೆ. ಗೃಹಾಲಂಕಾರ ವಸ್ತು ಖರಿದಿ. ತಿಂಗಳ ಮಧ್ಯದಲ್ಲಿ ಜ್ವರ ಪೀಡೆ ವೈದ್ಯಕೀಯ ಖರ್ಚು. ಕೋರ್ಟಪ್ರಕಣದಲ್ಲಿ ಗೆಲುವು ಸಾದ್ಯತೆ. ಅವಮಾನಕರ ಪ್ರಸಂಗ. ವಿವಾಹ ಪ್ರಸ್ತಾವದಲ್ಲಿ ಯಶಸ್ಸು. ಪರೋಪಕಾರ. ಶುಭ: 12, 20, 29 ಅಶುಭ: 11, 21, 25.
ಮಿಥುನ
ದೈಹಿಕ ಜಾಡ್ಯ ಅಲರ್ಜಿ. ವಿನಾಕಾರಣ ಹೆದರಿಕೆ. ಆದರೆ ಬಹುದಿನಗಳ ನಂತರ ಕುಟುಂಬದಲ್ಲಿ ಸಂತೋಷದ ಸಮಾರಂಭ. ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು. ಉತ್ತಮ ವಾಗ್ಜರಿ ಪ್ರದರ್ಶನ. ಮಾನ ಸನ್ಮಾನ. ಮೂತ್ರ ಜನಕಾಂಗ ಪೀಡೆ ಸಾದ್ಯತೆ. ಶುಭ: 14, 19, 22 ಅಶುಭ: 12, 17, 21
ಕರ್ಕಾಟಕ
ಮನೆಕಟ್ಟುವ ಸಮಸ್ಯೆ ಬಗೆಹರಿಯುವುದು. ಕ್ರಯ ವಿಕ್ರಯದಲ್ಲಿ ವಂಚನೆ ನಡೆಯುವ ಸಂಭವ ಜಾಗ್ರತೆ. ತಿಂಗಳಿಡಿ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವಿರಿ. ತಂದೆಯಿಂದ ಹಣಕಾಸಿನ ಸಹಾಯ ಸಾದ್ಯತೆ. ಕಾಲಿಗೆ ನೋವು. ಆಸ್ಪತ್ರೆಗೆ ಖರ್ಚು. ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು. ಶುಭ: 08, 16, 24 ಅಶುಭ: 12, 18, 26
ಸಿಂಹ
ಶಾರೀರಿಕ ಮಾನಸಿಕ ಉತ್ಸಾಹ ವೃದ್ದಿಸುವದು. ಸರಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವುದು. ಪರಿಚಿತ ಸ್ತ್ರೀ ವಿರೋದ ಕಾಣಿಸುವುದು. ಪಶುಗಳ ವಿಕ್ರಿಯದಾರರಿಗೆ ಲಾಭ. ಹೊಟ್ಟೆನೋವಿನ ಪ್ರಸಂಗ. ಅಜ್ಞಾತವಾಸದಿಂದ ಬಿಡುಗಡೆ. ಮಹತ್ವದ ಮಾತುಕತೆ. ಶುಭ: 14, 18, 23 ಅಶುಭ: 12, 16, 23
ಕನ್ಯಾ
ಅನಿರೀಕ್ಷಿತ ಖರ್ಚಿನ ಪ್ರಸಂಗ. ಸರಕಾರಿ ಕೆಲಸದಲ್ಲಿ ವ್ಯತ್ಯಯ. ಸೇವಕರಿಂದ ಹಾನಿ, ತೊಂದರೆ. ಬಂಧುಗಳಿಗೆ ಆಪತ್ತು. ಮನೆಕೆಲಸ ಅರ್ದಕ್ಕೆ ನಿಲ್ಲುವುದು. ಪ್ರೇಮ ಪ್ರಸಂಗಗಳಲ್ಲಿ ಭಗ್ನತೆ. ಅಧಿಕಾರಿಗಳಿಗೆ ಹಿನ್ನಡೆ. ಶುಭ: 16, 22, 26 ಅಶುಭ: 11, 21, 27
ತುಲಾ
ಉತ್ತಮ ಫಲ ಪ್ರಾಪ್ತಿಯ ರಾಶಿ. ಆಕಸ್ಮಿಕ ಧನಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೆಕ್ಷಿಗಳಿಗೆ ಸಂಗಾತಿ ಲಭ್ಯ. ಮನೆಕೆಲಸದ ಹೊಸ ಸೇವಕರು ಸಿಗುವರು. ವ್ಯಾಪಾರದಲ್ಲಿ ಲಾಭ. ಕುಟುಂಬ ಸೌಖ್ಯ. ಶುಭ: 14, 18, 21 ಅಶುಭ: 15, 19, 22
ವೃಶ್ಚಿಕ
ಕಷ್ಟದಲ್ಲೂ ಇಷ್ಟ ಫಲ ಪ್ರಾಪ್ತಿಯಾಗುವುದು. ಪರದೇಶ ಪ್ರವಾಸಕ್ಕೆ ಸಿದ್ದತೆ ನಡೆಯುವದು. ಸರಕಾರಿ ಅಧಿಕಾರ ಪ್ರಾಪ್ತಿಯೋಗ. ಶಿಕ್ಷಕರಿಗೆ ಪದೋನ್ನತಿಯೊಡನೆ ವರ್ಗಾವಣೆ ಸಂಭವ. ಕುಟುಂಬ ವರ್ಗದಲ್ಲಿ ಅನಾರೋಗ್ಯ. ಪ್ರಾಣಾಪಾಯ ಭೀತಿ. ಶುಭ: 16, 18, 20 ಅಶುಭ: 12, 21, 27
ಧನು
ಆರೋಗ್ಯದಲ್ಲಿ ಏರುಪೇರು. ಹೆಂಡತಿಯೊಡನೆ ಜಗಳ. ಕಛೇರಿ ಕಾಗದ ಪತ್ರಗಳು ಹಟಾತ್ ಕಾಣೇಯಾಗುವಿಕೆ. ದೂರದಿಂದ ಶುಭವಾರ್ತೆ ಬರುವುದು. ದೈನಂದಿನ ಕೆಲಸಗಳು ಸರಾಗ. ದಿಢೀರ್ ಹಿರಿಯ ಅಧಿಕಾರಿಗಳ ಆಗಮನ. ಸ್ತ್ರೀ ಮೂಲಕ ದ್ರವ್ಯ ಲಾಭ. ಮನೆಯಲ್ಲಿ ದೇವತಾ ಪೂಜೆ ನಡೆಯುವುದು. ಶುಭ: 12, 16, 18 ಅಶುಭ: 17, 19, 22
ಮಕರ
ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಕಾಲು ನೋವಿನ ಸಮಸ್ಯೆ. ಕೌಟುಂಬಿಕ ಖರ್ಚು ಜಾಸ್ತಿಯಾಗುವುದು. ಶತ್ರುಗಳು ತಲೆ ತಗ್ಗಿಸುವರು. ಹಳೆಯ ಮಿತ್ರರ ಆಗಮನ. ಮಕ್ಕಳಿಂದ ಶುಭವಾರ್ತೆ. ದಾಂಪತ್ಯ ಸೌಖ್ಯ. ಹಣಕಾಸಿನ ಲಭ್ಯತೆ. ಶುಭ: 14, 16, 19 ಅಶುಭ: 15, 19, 24
ಕುಂಭ
ಪ್ರಾರಂಭದಿಂದಲೂ ಶುಭಯೋಗ. ಯಾಂತ್ರಿಕ ವಸ್ತುಗಳ ಖರೀದಿ. ಶೈಕ್ಷಣಿಕ ಖಾತೆಯಲ್ಲಿ ಕೆಲಸದಲ್ಲಿರುವವರಿಗೆ ತಾತ್ಕಾಲಿಕ ಬಡ್ತಿ. ಬ್ಯಾಂಕ್ ನೌಕರರಿಗೆ ವರ್ಗಾವಣೆ ಸಂಭವ. ಕೈಗೊಂಡ ಕೆಲಸಗಳಲ್ಲಿ ನೀರಿಕ್ಷೆಗಿಂತ ಲಾಭ. ಕಂಟ್ರಾಕ್ಟರದಾರರು ಉತ್ತಮ ಧನ ಲಾಭ ಕಾಣುವಿರಿ. ಮಿತ್ರರಿಂದ ವಂಚನೆ ಸಂಭವ. ಮಕ್ಕಳ ಅನಾರೋಗ್ಯ. ಶುಭ: 13, 19, 20 ಅಶುಭ: 14, 16, 25
ಮೀನ
ವಿನಾಕಾರಣ ಮಿತ್ರರು ಶತ್ರುಗಳಾವುರು. ಮೇಲಾಧಿಕಾರಿಗಳಿಂದ ಭಯದ ನೋಟಿಸು ಬರಬಹುದು. ಕಲಾವಿದರಿಗೆ ಸಂಗೀತಗಾರರಿಗೆ ತಿಂಗಳ ಮೊದಲರ್ಧ ಉತ್ತಮ. ಸೊಂಟನೊವು ಕಾಣಿಸುವದು. ಮಕ್ಕಳ ಆರೋಗ್ಯದಲ್ಲಿ ಕೊಂಚ ಪ್ರಗತಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ. ವಾಹನ ಚಾಲಕರಿಗೆ ಎಚ್ಚರ ಅಗತ್ಯ. ಕೆಟ್ಟ ಜನರಿಂದ ಧನಪ್ರಾಪ್ತಿ. ಕುಟುಂಬ ಸೌಖ್ಯ. ಶುಭ: 04, 10, 21 ಅಶುಭ: 12, 22, 27
ADVERTISEMENT
ADVERTISEMENT