ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೀವನ ಶೈಲಿಯಲ್ಲಿ ಸಮತೋಲಿತ ದಿನಚರಿಯನ್ನು ಅನುಸರಿಸುವುದು ಒಳ್ಳೆಯದು
Published 14 ಅಕ್ಟೋಬರ್ 2023, 23:00 IST
ಪ್ರಜಾವಾಣಿ ವಿಶೇಷ
author
ಮೇಷ
ಮಿತ್ರರೊಡಗೂಡಿ ಸಣ್ಣಮಟ್ಟದ ಉತ್ಪಾದನಾ ಘಟಕ ಪ್ರಾರಂಭಿಸುವ ಯೋಚನೆ ಬರಲಿದೆ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ. ಕುಟುಂಬದಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ.
ವೃಷಭ
ನಿಮ್ಮ ನಿಲುವನ್ನು ಬದಲಿಸಿಕೊಳ್ಳುವುದರಿಂದ ಎಲ್ಲರ ಪ್ರೀತಿಗೆ ಪಾತ್ರರಾಗುತ್ತೀರಿ. ಮದುವೆಗೆ ಇರುವ ಅಡಚಣೆ, ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಗಮನಹರಿಸಿ. ನಿಮ್ಮ ತಂಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ.
ಮಿಥುನ
ಬೇರೆಯವರ ಸಹಾಯ ಪಡೆಯದೇ ನಿಮ್ಮ ಶ್ರಮದಿಂದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಲಾಭದಾಯಕ. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಇರಲಿದೆ.
ಕರ್ಕಾಟಕ
ಜೀವನ ಶೈಲಿಯಲ್ಲಿ ಸಮತೋಲಿತ ದಿನಚರಿಯನ್ನು ಅನುಸರಿಸುವುದು ಒಳ್ಳೆಯದು. ಜಟಿಲವಾದ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಕ್ತ ಸಲಹೆಯನ್ನು ಮಾರ್ಗದರ್ಶಕರಲ್ಲಿ ಕೇಳಿ ತಿಳಿಯುವುದು ಉತ್ತಮ.
ಸಿಂಹ
ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಸಿಹಿ ಪದಾರ್ಥಗಳ ತಯಾರಿಕರಿಗೆ ಹೆಸರಾಂತ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾಲ ಒದಗಿಬರಲಿದೆ.
ಕನ್ಯಾ
ನಿಮ್ಮ ಪ್ರಿಯಕರನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳುವುದರ ಬಗ್ಗೆ ಶನೈಶ್ಚರನಲ್ಲಿ ಪೂಜೆ ಪ್ರಾರ್ಥನೆ ನೆಡೆಸಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು.
ತುಲಾ
ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ರಾಜಕೀಯ ವ್ಯಕ್ತಿಗಳಿಂದ ವೈಯಕ್ತಿಕ ಅನುಕೂಲ ಆಗುವ ಲಕ್ಷಣಗಳಿದೆ. ನಿಮ್ಮಲ್ಲಿ ಸಾಮಾಜಿಕವಾದ ಕಳಕಳಿ ಹೆಚ್ಚಲಿದೆ.
ವೃಶ್ಚಿಕ
ಮನೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಆದರಿಂದಾಗಿ ಮನೆಯ ವಾತಾವರಣ ಸರಿಯಾಗಿರುವುದು. ನಿಮ್ಮ ಶ್ರಮದ ದುಡಿಮೆಗೆ ಉತ್ತಮ ಫಲ ದೊರೆಕುವುದು.
ಧನು
ಕೆಲವೊಂದು ಸಮಸ್ಯೆಗಳಿಗೆ ಪೊಲೀಸರಿಂದ ಪರಿಹಾರ ತೆಗೆದುಕೊಳ್ಳುವುದು ಉತ್ತಮ ಮತ್ತು ಅನಿವಾರ್ಯ ಎಂದು ಅನಿಸಲಿದೆ. ಸಹಕಾರಿ ರಂಗದಲ್ಲಿನ ವ್ಯಕ್ತಿಗಳಿಗೆ ಶುಭ ದಿನ. ಸಂತಾನದ ಸುದ್ದಿ ಆನಂದ ತರಲಿದೆ.
ಮಕರ
ಹಲವು ದಿನದ ಬಿಡುವಿಲ್ಲದ ಕೆಲಸದಿಂದ ಬಳಲಿರುವ ನೀವು ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ. ಸ್ಥಗಿತಗೊಂಡ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ ಆಗುವುದು.
ಕುಂಭ
ಅಚ್ಚರಿಯ ಸುದ್ದಿ ಅನ್ಯರ ಮೂಲಕ ತಿಳಿಯಲಿದೆ. ಅದನ್ನು ಯಾರಲ್ಲೂ ಹೇಳಿಕೊಳ್ಳದೇ ಇರುವುದು ಉತ್ತಮ. ಕೆಲಸದ ನಿಮಿತ್ತ ದೂರದ ಊರಿಗೆ ತೆರಳಬೇಕಾಗಬಹುದು. ಆಸೆ ನಿರಾಸೆಯಾಗುವ ಲಕ್ಷಣಗಳಿವೆ.
ಮೀನ
ಗೆಲುವು ಸಾಧಿಸಲು ವಿವೇಚನೆ ಅಗತ್ಯವೆನ್ನುವುದನ್ನು ಮರೆಯದಿರಿ. ಇಷ್ಟದ ಕೆಲಸ ಈಡೇರಿಸಿಕೊಳ್ಳಲು ಹಿರಿಯರ ಮನ ಒಲಿಸಬೇಕಾಗುವುದು. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಹೆಚ್ಚಿನ ವ್ಯಾಪಾರ ಇರಲಿದೆ.