ದಿನ ಭವಿಷ್ಯ: ಆಗಸ್ಟ್ 22 ಮಂಗಳವಾರ 2023– ಈ ರಾಶಿಯವರಿಗೆ ಕೆಲಸ ಮಾಡುವಾಗ ಅಪಾಯ
Published 21 ಆಗಸ್ಟ್ 2023, 18:38 IST
ಪ್ರಜಾವಾಣಿ ವಿಶೇಷ
ಮೇಷ
ಸಂಶೋಧಕರು ನಿಮ್ಮ ಸಾಧನೆಯ ಕುರಿತು ಹೆಮ್ಮೆ ಪಡಲು ಇಂದು ಸುಸಮಯ. ಜೀವನದಲ್ಲಿ ಮಹತ್ತರ ಬದಲಾವಣೆಯಾಗುವ ಸೂಚನೆಗಳು ಈ ದಿನ ಗಮನಕ್ಕೆ ಬರಲಿದೆ.
ವೃಷಭ
ಸಂಸ್ಥೆಯ ವತಿಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದು ರಾದಲ್ಲಿ ಸದುಪಯೋಗಪಡಿಸಿಕೊಳ್ಳಿ. ಆಡಳಿತಾತ್ಮಕ ಕ್ಷೇತ್ರದಲ್ಲಿ ಇರುವವರು ಉತ್ತಮ ಫಲವನ್ನು ಹೊಂದುವಿರಿ. ಹಣದ ವಿಚಾರದಲ್ಲಿ ಬಿಗಿ ನಿಲುವು ಉತ್ತಮ.
ಮಿಥುನ
ಹಣಕಾಸು ಸಂಸ್ಥೆಗಳ ನೆರವಿನಿಂದ ಬಹು ದಿನದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು.
ಕರ್ಕಾಟಕ
ರಾಜಕಾರಣಿಗಳು ಜನರ ಸಹಾಯವನ್ನು ಪಡೆಯುವಲ್ಲಿ ಸೋಲನ್ನು ಕಾಣುವ ಸ್ಥಿತಿ ಬರಲಿದೆ. ಸಂಪೂರ್ಣವಾಗಿ ನಿಮ್ಮದೇ ಜವಾಬ್ದಾರಿಯಲ್ಲಿ ಇರುವ ತಮ್ಮಂದಿರ ಓದಿನಲ್ಲಿ ಉತ್ತಮ ಪ್ರಗತಿ ಇರಲಿದೆ.
ಸಿಂಹ
ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ. ಸ್ನೇಹಿತರ ಅನಿವಾರ್ಯ ಸ್ಥಿತಿ ಮನಗಂಡ ನೀವು ಅವರ ಜಮೀನಿನ ಕೆಲಸ ನೋಡಿಕೊಳ್ಳ ಬೇಕಾಗುವುದು.
ಕನ್ಯಾ
ಆದಾಯಕ್ಕೇನೂ ಕೊರತೆಯಿರದು ಆದರೂ ಖರ್ಚು- ವೆಚ್ಚದಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ನೌಕರಿಯಲ್ಲಿ ಇದ್ದಂತಹ ತೊಂದರೆ ನಿವಾರಣೆ ಆಗಲಿದೆ. ಆಲೋಚನೆಗಳನ್ನು ಕಾರ್ಯ ರೂಪಕ್ಕೆ ಇಳಿಸಲು ಸೂಕ್ತ ಸಮಯವಲ್ಲ.
ತುಲಾ
ಸರ್ಕಾರಿ ಸಂಬಂಧ ವ್ಯವಹಾರಗಳಿಂದ ನೀವು ನಿರೀಕ್ಷೆಗೂ ಮೀರಿದ ಲಾಭ ಅನುಭವಿಸುತ್ತೀರಿ. ಋಣಾತ್ಮಕ ಚಿಂತನೆ ಕಾರ್ಯ ಸಾಧನೆಗೆ ಅಡ್ಡಿ ಮಾಡುತ್ತದೆ. ಜಮೀನಿನ ಕೆಲಸಗಳು ಸರಾಗವಾಗುವವು.
ವೃಶ್ಚಿಕ
ಹೆಚ್ಚು ಸ್ವತಂತ್ರವಾಗಿರಲು ಇಚ್ಛಿಸಿದವರಿಗೆ ಉತ್ತಮ ಅವಕಾಶಗಳು ಎದುರಾಗಲಿವೆ. ಖಾಸಗಿ ಕಂಪೆನಿಯೊಂದರಲ್ಲಿ ನೌಕರಿ ಪ್ರಾಪ್ತಿಯಾಗಿ ಮನೆಯಲ್ಲಿ ಸಂತಸ ಮೂಡಲಿದೆ. ಚರ್ಮದ ವಸ್ತುಗಳ ಮಾರಾಟದಿಂದ ಲಾಭ.
ಧನು
ಚಾಲಕ ವೃತ್ತಿಯವರು ನಿಯಮ ಬದ್ಧವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದು. ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯುವ ಸಮಯ ಬರುವುದು. ಸಂಬಂಧಿಗಳು ಮತ್ತೆ ಹತ್ತಿರದವರಾಗುವರು.
ಮಕರ
ಈ ದಿನದ ನಿಯೋಜಿತ ಕಾರ್ಯ ಕಲಾಪಕ್ಕೆ ಚಿಕ್ಕ-ಪುಟ್ಟ ಅಡ್ಡಿ ಆತಂಕಗಳು ಎದುರಾಗಬಹುದು. ಚಿನ್ನ ಬೆಳ್ಳಿ ವ್ಯಾಪಾರಿಗಳಿಗಿಂದು ವ್ಯಾಪಾರದ ಜತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗಬಹುದು.
ಕುಂಭ
ಮಕ್ಕಳಿಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಕಂಡುಕೊಳ್ಳುವಿರಿ.ವ್ಯಾವಹಾರಿಕ ಸಂಬಂಧಗಳು ವಿಸ್ತಾರಗೊಳ್ಳುವ ಸಮಯ ಇದಾಗಿದೆ.
ಮೀನ
ಮನೆಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಿ, ಕೆಲಸಗಳನ್ನು ಸಂಪೂರ್ಣಗೊಳಿಸಿಕೊಳ್ಳುವಿರಿ. ಬದಲಾಗುವ ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.