ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 18 ಗುರುವಾರ 2024– ಇಂದು ಹಿತಶತ್ರುಗಳ ಬಗ್ಗೆ ಗಮನವಿರಲಿ
Published 17 ಏಪ್ರಿಲ್ 2024, 19:38 IST
ಪ್ರಜಾವಾಣಿ ವಿಶೇಷ
author
ಮೇಷ
ಈ ದಿನ ಎಂದಿನಂತಲ್ಲದೆ ಮನಸ್ಸು ಉಲ್ಲಾಸದಿಂದ ಕೂಡಿರುವುದರಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವುದು. ರಾಜಕೀಯ ಪಕ್ಷದ ನಾಯಕರು ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಿರಿ.
ವೃಷಭ
ಸಂಗೀತ, ಸಾಹಿತ್ಯದಂಥ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಹಿರಿಯ ಕಲಾವಿದರನ್ನು ಭೇಟಿ ಮಾಡುವ ಅವಕಾಶವಿದೆ. ವೃತ್ತಿಭೂಮಿಕೆಯಲ್ಲಿ ಕೆಲವರು ನಾಯಕರಾಗುವ ಸಂಭವವಿದೆ. ಹಿತಶತ್ರುಗಳ ಗಮನವಿರಲಿ.
ಮಿಥುನ
ಸಮೀಪವರ್ತಿಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಹತ್ತಿರದ ಸಂಬಂಧಿಗಳಿಂದ ಮನಸ್ಸಿಗೆ ಮುದವಾಗುವ ವಾರ್ತೆ ಕೇಳುವಿರಿ.
ಕರ್ಕಾಟಕ
ನಿಮ್ಮದಲ್ಲದ ಕ್ಷೇತ್ರದವರಿಗೆ ಸಲಹೆ ಸೂಚನೆಗಳನ್ನು ನೀಡಲು ಹೋಗಿ ಮುಖಭಂಗ ಮಾಡಿಕೊಳ್ಳದಿರಿ. ಮಿತ್ರರ ಸಹಾಯದಿಂದ ಬಾಕಿ ಕೆಲಸಗಳೆಲ್ಲವನ್ನು ಮುಗಿಸಿಕೊಳ್ಳುವಿರಿ. ಲಾರಿ ,ಬಸ್‌ ಚಾಲಕರು ಕಾಳಜಿವಹಿಸಿ.
ಸಿಂಹ
ಇದೀಗ ತಾನೇ ಚಿತ್ರರಂಗಕ್ಕೆ ಸೇರಿದ ಕಲಾವಿದರಿಗೆ ಪ್ರಯತ್ನವು ಪ್ರಾಮಾಣಿಕವಾಗಿದ್ದಲ್ಲಿ ದೊಡ್ಡ ಮಟ್ಟದ ಪ್ರಚಾರ ದೊರೆಯುವುದು. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಕಠಿಣ ಸವಾಲುಗಳು ಎದುರಾಗುತ್ತವೆ.
ಕನ್ಯಾ
ದೀರ್ಘಕಾಲಿಕ ಯೋಜನೆಗಳ ಕೆಲಸವನ್ನು ಪ್ರಾರಂಭ ಮಾಡುವ ಮೊದಲು ಸಂಕ್ಷಿಪ್ತ ಸಭೆಯೊಂದಿಗೆ ಪಾಲುದಾರರಿಗೂ ಧ್ಯೇಯೊದ್ದೇಶಗಳನ್ನು ತಿಳಿಸಿ. ಹೆಚ್ಚುವರಿ ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸಿ.
ತುಲಾ
ಕುಟುಂಬದೊಟ್ಟಿಗೆ ನಡೆದ ವೈಮನಸ್ಯವನ್ನು ಕ್ಷಮಾಯಾಚನೆಯೊಂದಿಗೆ ಮುಕ್ತಗೊಳಿಸಿಕೊಳ್ಳಿ. ಸ್ನೇಹಿತರೊಂದಿಗೆ ಮರೆಯಲಾಗದ ಕ್ಷಣಗಳನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಅತ್ಯಗತ್ಯ.
ವೃಶ್ಚಿಕ
ಉದ್ವೇಗವನ್ನು ಶಾಂತಗೊಳಿಸಲು ಮನಸ್ಸಿಗೆ ಸಮಾಧಾನವಾಗುವಂಥ ಸಂಗೀತವನ್ನು ಕೇಳಿ. ಗಣಕಯಂತ್ರದ ಮುಂದೆ ಕೂತು ಕೆಲಸ ನಡೆಸುವವರು ಕಣ್ಣಿನ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ.
ಧನು
ಇಚ್ಛಾಶಕ್ತಿಯೊಂದಿಗೆ ಪ್ರಯತ್ನವೂ ಉತ್ತಮವಾಗಿರುವುದರಿಂದ ನೀವಂದುಕೊಂಡ ಕಾರ್ಯ ಅದ್ಭುತವಾಗಿ ನಡೆಯಲಿದೆ. ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂಥ ಅವಕಾಶ ಲಭಿಸುವುದು.
ಮಕರ
ವೇದ ಶಾಸ್ತ್ರ ಪಾರಂಗತರು ಕೂಪ ಮಂಡೂಕದ ಭಾವನೆಯನ್ನು ಕಳಚಿಕೊಂಡು ಮುನ್ನುಗ್ಗಿದಲ್ಲಿ ಅತ್ಯಂತ ಒಳ್ಳೆಯ ಅವಕಾಶಗಳನ್ನು ಪಡೆಯುವಿರಿ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಕುಂಭ
ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ವ್ಯಕ್ತಿಗಳಿಗೆ ಮನೆಗೆ ಹೋಗಿಬರುವ ಅವಕಾಶ ಶೀಘ್ರ ಲಭಿಸಲಿರುವ ಕಾರಣ ಸಂತೋಷವಾಗಲಿದೆ. ಓದಿನಲ್ಲಿ ಏಕಾಗ್ರತೆ ಸಾಧಿಸದಿದ್ದರೆ ಅಭ್ಯುದಯ ಅಸಾಧ್ಯ.
ಮೀನ
ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವಿಶ್ವಾಸಿಗಳಿಂದ ವೈದ್ಯರ ಸಂಪರ್ಕ ಮತ್ತು ಸಹಾಯಹಸ್ತ ಸಿಗುವುದು. ಹೃದಯದ ಮಾತಿಗೆ ಬೆಲೆ ಕೊಡುವುದು ಈ ದಿನ ಬಹಳ ಮುಖ್ಯವಾಗಿದೆ.