ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮೇ 20 ಶನಿವಾರ 2023
Published 19 ಮೇ 2023, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ಕುಟುಂಬದವರ ಜೊತೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಮಾತನಾಡಿ ಬಗೆಹರಿಸಿಕೊಳ್ಳುವಿರಿ. ದೇಹ ಪ್ರಕೃತಿಗೆ ಸರಿ ಹೊಂದದಂತಹ ಆಹಾರವನ್ನು ಸ್ವೀಕರಿಸಿದ ಕಾರಣವಾಗಿ ಅನಾರೋಗ್ಯ ಉಂಟಾಗುವುದು.
ವೃಷಭ
ಮಕ್ಕಳ ವಿಚಾರವಾಗಿ ಇದ್ದ ನಿಮ್ಮ ಸಮಸ್ಯೆಗಳು ಶೀಘ್ರ ಪರಿಹಾರವಾಗುವ ಲಕ್ಷಣಗಳು ತೋರಿಬರುತ್ತವೆ. ವಿದ್ಯುತ್ ಉಪಕರಣಗಳಾನ್ನು ಸರಿಯಾದ ರೀತಿಯಲ್ಲಿ ಬಳಸದೇ ಇರುವುದರಿಂದ ಅಪಾಯ ಉಂಟಾಗಬಹುದು.
ಮಿಥುನ
ಮೇಲಿರುವ ಜವಾಬ್ದಾರಿಗಳನ್ನು ಇತರರ ಮೇಲೆ ದಾಟಿಸುವಂತಹ ಪ್ರಯತ್ನಗಳನ್ನು ಮಾಡಲು ಹೋಗದಿರಿ. ಕೋಪದಿಂದ ಪರಿಹಾರವಾಗದ ಕುಟುಂಬ ಸಮಸ್ಯೆಗಳು ಮೃದುವಾದ ಮಾತಿನಿಂದ ಪರಿಹಾರವಾಗುತ್ತದೆ.
ಕರ್ಕಾಟಕ
ನಿನ್ನೆ ಇದ್ದಂತಹಾ ವಸ್ತುಗಳು ಇಂದು ಕಾಣೆಯಾಗುವುದು ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯ ಮೇಲೆ ಅನುಮಾನವನ್ನು ತರಿಸುತ್ತದೆ. ಅತಿಯಾದ ಆಲಸ್ಯ, ಬೇಜವಾಬ್ದಾರಿತನ ನಿಮ್ಮ ಅಭಿವೃದ್ಧಿಯನ್ನು ಕುಂಠಿತವಾಗಿ ಮಾಡುತ್ತದೆ.
ಸಿಂಹ
ವಂಶದ ಕುಡಿಯು ನೀವು ಬಯಸಿದ ರೀತಿಯಲ್ಲಿಯೇ ಉತ್ತಮವಾದ ಜೀವನವನ್ನು ನಡೆಸುತ್ತಿರುವುದನ್ನು ಜನರು ಹೊಗಳುವುದು ಕೇಳಿ ಅತೀವ ಆನಂದವನ್ನು ಹೊಂದುವಿರಿ. ಕೈಗಳ ಸ್ವಚ್ಚತೆಯ ಮೇಲೆ ಗಮನ ಹರಿಸಿ.
ಕನ್ಯಾ
ಅತ್ಯಂತ ಸೂಕ್ಷ್ಮ ಮನಸ್ಕರಾಗಿರುವ ನಿಮಗೆ ಇತರರು ನಿಮ್ಮ ಬಗ್ಗೆ ಹೇಳಬಹುದಾದ ಮಾತುಗಳನ್ನು ಸ್ವೀಕರಿಸುವಂತಹಾ ಸಾಮರ್ಥ್ಯ ಇಲ್ಲವಾಗುದು. ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ದುಡುಕುವುದು ಬೇಡ.
ತುಲಾ
ದಿನದ ಕೆಲಸಗಳನ್ನೇ ವಿಶೇಷವಾಗಿ ಮಾಡುವ ರೀತಿಯನ್ನು ಕಂಡುಕೊಳ್ಳುವಿರಿ. ಮುಖ್ಯವಾದ ವ್ಯಕ್ತಿಯ ಬಳಿ ಮಾತನಾಡುವಾಗ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗುವುದು. ದೇಹಾಲಸ್ಯ ಉಂಟಾಗಬಹುದು.
ವೃಶ್ಚಿಕ
ಹೊಸದನ್ನು ಸಾಧಿಸುವ ಪ್ರಚೋದನೆ ನಿಮ್ಮನ್ನು ಸೆಳೆಯಲಿದೆ ಅದರಿಂದಾಗಿ ಈಗ ನೆಡೆಯುತ್ತಿರುವ ಕೆಲಸ ಕಾರ್ಯಗಳು ನಿಲ್ಲುವಂತಾಗಬಹುದು. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ತಾಂತ್ರಿಕ ಕ್ಷೇತ್ರದಲ್ಲಿರುವವರು ಸಾಧನೆಯನ್ನು ಮಾಡುವಿರಿ.
ಧನು
ಧಾರ್ಮಿಕ ಕೆಲಸಗಳಿಗಾಗಿ ಖರ್ಚುಗಳಿದ್ದರೂ ದೈವಬಲದಿಂದ ಎಲ್ಲಾ ವ್ಯವಹಾರಗಳಲ್ಲಿ ಉತ್ತಮ ಧನಾದಾಯವನ್ನು ಹೊಂದುವಿರಿ. ರಾಜಕೀಯದವರಿಂದ ಸಾಮಾಜಿಕವಾದ ಕಾರ್ಯ ಸಾಧಿಸಿಕೊಳ್ಳುವಲ್ಲಿ ನಿಮ್ಮ ಪಾತ್ರ ಮುಖ್ಯವಾಗಿರಲಿದೆ.
ಮಕರ
ಮೇಲಧಿಕಾರಿಗಳು ಹಾಗೂ ಹಿರಿಯರಿಂದ ನೀವು ಬಯಸಿದ ಉಪಕಾರವನ್ನು ಪಡೆಯಬಹುದು. ಬಟ್ಟೆ ವ್ಯಾಪಾರಿಗಳಿಗೆ ಲಾಭವಿರುವುದು. ಇಂದಿನ ಪ್ರಾರಂಭಿಕ ವಿಫಲತೆಯ ಬಗ್ಗೆ ನೀವು ನಿರಾಶೆಗೊಳ್ಳಬಾರದು. ಇತರರ ವಿಷಯದಲ್ಲಿ ತಲೆ ಹಾಕದಿರಿ.
ಕುಂಭ
ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಹೊಂದುವಿರಿ. ವೃತ್ತಿ ವಿಷಯದಲ್ಲಿ ಏಳುಬೀಳುಗಳು ಬಹು ಸಹಜ ಎಂದು ನೀವು ಕಂಡುಕೊಂಡದ್ದನ್ನು ಕಿರಿಯರಿಗೂ ತಿಳಿಸುವಂತಹ ಕೆಲಸ ಮಾಡುವಿರಿ.
ಮೀನ
ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿಕೊಂಡು ನಿಮ್ಮ ಸಂಬಂಧಿಗಳಲ್ಲಿ ಇಲ್ಲಸಲ್ಲದ ವಿಚಾರಗಳಿಗೆ ಜಗಳನ್ನು ತೆಗೆಯದಿರಿ. ಸಹೋದರ ಅಥವಾ ಸಹೋದರಿಯರ ಆರೋಗ್ಯ ವಿಚಾರವಾಗಿ ಹಣ ಹಾಗೂ ಸಮಯ ಕೊಡುವಿರಿ.