ಗುರುವಾರ, 8 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 8 ಗುರುವಾರ 2026– ಈ ದಿನ ಅತಿಥಿ ಸತ್ಕಾರ ಮಾಡುವಿರಿ
Published 7 ಜನವರಿ 2026, 18:36 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತಂದೆ ತಾಯಿಯರ ಹಿತಕ್ಕಾಗಿ ವಿದೇಶಕ್ಕೆ ಹೋಗುವುದನ್ನು ನಿಲ್ಲಿಸುವಂತಾಗುವುದು. ವಿವಾಹ ಸಂಬಂಧದ ಮಾತುಕತೆಗಳುಫಲಕಾರಿಯಾಗುವವು. ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು.
ವೃಷಭ
ಯಾರೊಂದಿಗೆ ನಿಮಗೆ ಸಮಸ್ಯೆಗಳಿದ್ದರೂ ಸಹ ಅದನ್ನು ಸ್ವತಃ ನೀವೇ ಪರಿಹರಿಸಿಕೊಳ್ಳುವುದು ಉತ್ತಮ ಮಾರ್ಗ. ಆರೋಗ್ಯದಲ್ಲಿ ವಾಯು ಸಂಬಂಧವಾಗಿ ತೊಂದರೆ ಕಾಣಿಸಿಕೊಳ್ಳಬಹುದು. ಅತಿಥಿ ಸತ್ಕಾರ ಮಾಡುವಿರಿ.
ಮಿಥುನ
ನಿಮ್ಮ ಪಾಲಿನ ನಂದಾದೀಪವಾದ ಮಗಳನ್ನು ಮತ್ತೊಂದು ಮನೆಯ ನಂದಾದೀಪವಾಗಿ ಕಳುಹಿಸಿಕೊಡುವ ಸನ್ನಿವೇಶ ಪದೇ ಪದೇ ನಿಮ್ಮ ಕಣ್ಣೆದುರು ಬರುವುದು. ತರಕಾರಿ ಮಾರಾಟಗಾರರಿಗೆ ಉತ್ತಮ ದಿನ.
ಕರ್ಕಾಟಕ
ವ್ಯಾಪಾರದಲ್ಲಿ ಸಹಚರರಿಂದಲೇ ಮೋಸವಾಗುತ್ತಿರುವ ವಿಚಾರವು ಅನುಭವಕ್ಕೆ ಬಂದು ದುಃಖವಾಗಬಹುದು. ನೀವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.
ಸಿಂಹ
ಹೊಸ ಕೆಲಸ ಪ್ರಾರಂಭ ಮಾಡಾಬೇಕಾದಾಗ ಸೂಕ್ತ ಮಾರ್ಗದರ್ಶನ ಉತ್ತಮ. ಅವಿವಾಹಿತರ ಮನೋಕಾಮನೆ ಪೂರ್ಣಗೊಳ್ಳುವ ದಿನ. ನಿಮ್ಮ ಮುಂದಿನ ಹಾದಿ ಏನೆಂಬುದು ನಿಮಗೆ ಈ ದಿನ ಸ್ಪಷ್ಟವಾಗಿರಲಿ.
ಕನ್ಯಾ
ಮಗಳ ಗಂಡನ ಮನೆಯಲ್ಲಿನ ಕಾರ್ಯಕ್ರಮಗಳಿಗೆ ನೀವು ಭೇಟಿ ನೀಡುವಂತಾಗಿ ಸಂತೋಷ ಹೊಂದುವಿರಿ. ನಿರುದ್ಯೋಗಿಗಳಿಗೆ ಸಾಧಾರಣ ಉದ್ಯೋಗ ದೊರಕಿದರೂ ಯಾವುದೇ ಕಾರಣಕ್ಕೂ ತಿರಸ್ಕರಿಸಬೇಡಿ.
ತುಲಾ
ಕೃತಕ ಅಂಗಾಂಗಗಳ ಅಳವಡಿಕೆ ಮಾಡಿಸಿಕೊಂಡವರು ಆರೋಗ್ಯದಲ್ಲಿ ಉಂಟಾಗುವ ಯಾವುದೇ ಬದಲಾವಣೆಗಳನ್ನು ಸಹ ಸಸಾರ ಮಾಡದಿರಿ. ರಾಜಕೀಯ ವ್ಯಕ್ತಿಗಳು ಜನರಲ್ಲಿ ತಾಳ್ಮೆಯಿಂದ ವರ್ತಿಸುವುದು ಸೂಕ್ತ.
ವೃಶ್ಚಿಕ
ಮನೆಯ ಜನರ ಅಕಾಂಕ್ಷೆಗಳನ್ನು ನೀವೇ ಪೂರೈಸಬೇಕಾದರೂ ಸಹ ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು.
ಧನು
ಇಂದಿನ ಹಲವಾರು ದುಃಖಗಳು ಮಧುರವಾದ ಸಂಗೀತವನ್ನು ಕೇಳುವ ಮೂಲಕ ಪರಿಹರಿಸಿಕೊಳ್ಳುವಿರಿ. ನಿಮ್ಮ ಕೆಲಸಗಳ ಬಗ್ಗೆ ಪುನಃಪುನಃ ಅವಲೋಕನೆಯನ್ನು ಮಾಡುವಂತಹ ಪದ್ಧತಿಯನ್ನು ರೂಢಿಸಿಕೊಳ್ಳುವಿರಿ.
ಮಕರ
ಒಂದು ಸಣ್ಣ ಕಾರಣವನ್ನೇ ಹಿಡಿದು ನಿಮ್ಮನ್ನು ಒಂದು ಕೆಲಸದಿಂದ ಅಮಾನತ್ತುಗೊಳಿಸುವಂತಹ ಸಾಧ್ಯತೆಗಳು ಬರಬಹುದು. ಶ್ರೀ ವಿಷ್ಣುಸಹಸ್ರನಾಮದ ಪಠನೆಯು ಹೆಚ್ಚಿನ ಏಳಿಗೆ ಹಾಗೂ ನೆಮ್ಮದಿಯನ್ನು ತರುವುದು.
ಕುಂಭ
ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಸಿಗಬಹುದು ಅಥವಾ ಕಾರ್ಮಿಕರಾಗುವ ಅವಕಾಶ ಸಿಗಬಹುದು. ಮಾರಣಾಂತಿಕ ಕಾಯಿಲೆಗಳಿಂದ ಪಾರು ಮಾಡುವ ಪಾರಂಪರಿಕ ಔಷಧಗಳ ಕಲೆಯನ್ನು ಕಲಿಯುವ ಸದವಕಾಶಗಳು ಸಿಗಬಹುದು.
ಮೀನ
ಪರಿಸ್ಥಿತಿಯನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆಯು ಪ್ರಾಪ್ತಿ. ಕೆಲಸದ ಒತ್ತಡ, ಜವಾಬ್ದಾರಿಗಳು ಹೆಚ್ಚಲಿವೆ. ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ.
ADVERTISEMENT
ADVERTISEMENT