ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 6 ಶುಕ್ರವಾರ 2024– ಸಮಸ್ಯೆಗಳೆಲ್ಲಾ ಬಗೆಹರಿಯಲಿವೆ
Published 5 ಸೆಪ್ಟೆಂಬರ್ 2024, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದರಲ್ಲಾದರೂ ಗೆಲುವು ಬಯಸುತ್ತಿದ್ದರೆ, ಆಲಸ್ಯವನ್ನು ಬಿಟ್ಟು ಗುರಿ ತಲುಪಲು ಶ್ರಮಿಸಬೇಕು. ಕೆಲಸದ ಗುಣಮಟ್ಟ ಹೆಚ್ಚಿಸಿಕೊಳ್ಳುವ ಸಲುವಾಗಿ ಕಾರ್ಯಾಗಾರಗಳಲ್ಲಿ ಭಾಗವಹಿಸುವಿರಿ.
ವೃಷಭ
ಪತ್ತೇದಾರಿ ಕೆಲಸ ಮಾಡುವವರು ಕಾನೂನುಬಾಹಿರ ಮಾರ್ಗಗಳನ್ನು ಅನುಸರಿಸದಂತೆ ಕೆಲಸ ಮಾಡಿ. ಪ್ರೀತಿಯ ಜೀವನದಲ್ಲಿ ಅನೇಕ ದೀರ್ಘ ಕಾಲೀನ ಬದಲಾವಣೆಗಳಾಗಬಹುದು. ವೃಥಾ ಅಲೆದಾಟದಿಂದ ಆಯಾಸ ಆಗುವುದು.
ಮಿಥುನ
ಸಂಗೀತಾಭ್ಯಾಸಿಗರಿಗೆ ದೊಡ್ಡ ವೇದಿಕೆಯಲ್ಲಿ ಗಾಯನ ಪ್ರದರ್ಶಿಸುವ ಅವಕಾಶ ದೊರೆಯುತ್ತದೆ. ಸಹೋದರ ಸಹೋದರಿಯರನ್ನು ಹೊಗಳಿದ ಕಾರಣ ನೀವು ಮುನಿಸಿಕೊಳ್ಳುವ ಸಾಧ್ಯತೆ ಇದೆ.
ಕರ್ಕಾಟಕ
ಜಾಹೀರಾತುಗಳಲ್ಲಿ ತೋರಿಸಿದ್ದನ್ನು ಪರಿಶೀಲಿಸದೇ ನಂಬಿ ಹಣವ್ಯಯ ಮಾಡಿದಲ್ಲಿ ಮೋಸ ಹೋಗುವುದು ಕಟ್ಟಿಟ್ಟ ಬುತ್ತಿ. ಖಾದ್ಯಗಳ ತಯಾರಕರಿಗೆ ಬೇಡಿಕೆ ಬರುವುದು. ಸಮಸ್ಯೆಗಳೆಲ್ಲಾ ಬಗೆಹರಿಯಲಿವೆ.
ಸಿಂಹ
ಗೃಹಿಣಿಯರು ದೇವರಿಗೆ ವಿಶೇಷವಾಗಿ ಪೂಜೆ ಪುನಸ್ಕಾರವನ್ನು ನಡೆಸುವ ಮೂಲಕ ಪುಣ್ಯ ಸಂಪಾದನೆಯನ್ನು ಮಾಡುವಿರಿ. ಹಿರಿಯರೊಂದಿಗೆ ವಿನಯವನ್ನು ಬಿಟ್ಟು ಮಾತನಾಡಿದಲ್ಲಿ ಗೌರವವನ್ನು ನೀವೇ ಕಳೆದುಕೊಳ್ಳುವಿರಿ.
ಕನ್ಯಾ
ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವ ವ್ಯಕ್ತಿತ್ವ ಎಲ್ಲರ ದೂಷಣೆಗೆ ಒಳಗಾಗುವುದು. ಆರ್ಥಿಕವಾಗಿ ಲೇವಾದೇವಿ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಯಾರೊಂದಿಗೂ ವಾಗ್ವಾದ ಬೇಡ. ಧನಾಗಮವಿದೆ.
ತುಲಾ
ಉದಯೋನ್ಮುಖ ಸಾಹಿತಿಗಳಿಗೆ ಚಿಂತನಾಶೀಲತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬ ಹಿತ ಸಲಹೆಗಳು ಅಭಿಮಾನಿಗಳ ಕಡೆಯಿಂದ ಬರಬಹುದು. ಧಾರ್ಮಿಕ ಕಾರ್ಯಕ್ರಮವನ್ನು ಸ್ವತಃ ಮಾಡುವಿರಿ.
ವೃಶ್ಚಿಕ
ಇತರರ ಸಹಾಯವನ್ನು ಅಪೇಕ್ಷಿಸುವುದಕ್ಕಿಂತ ಕೆಲಸವನ್ನು ಆದಷ್ಟು ನೀವೇ ಮಾಡಿಕೊಳ್ಳುವುದು ಉತ್ತಮ. ನೇರ ನಡೆ-ನುಡಿಯು ವ್ಯವಹಾರವನ್ನು ಕುಂಠಿತಗೊಳಿಸಬಹುದು. ವನಸ್ಪತಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
ಧನು
ಕುಟುಂಬದಲ್ಲಾಗಲಿ ಅಥವಾ ಕಾರ್ಯಕ್ಷೇತ್ರದಲ್ಲಾಗಲಿ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸಲು ಸಂಕೋಚ ಮಾಡಿದರೆ ನಷ್ಟವಾಗುತ್ತದೆ. ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರವು ನಿಮಗೆ ಸಿಗಲಿದೆ.
ಮಕರ
ಕಾರ್ಯವು ಮಧ್ಯದಲ್ಲಿ ನಿಲ್ಲುವ ಸಾಧ್ಯತೆ ಇರುವುದರಿಂದ ದೃಢವಾದ ನಿರ್ಧಾರ ಮಾಡಿದ ನಂತರವಷ್ಟೇ ಹೊಸ ಕಾರ್ಯಾರಂಭ ಮಾಡುವುದು ಒಳ್ಳೆಯದು. ಸಮಸ್ಯೆಗಳಿದ್ದರೂ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿರಿ.
ಕುಂಭ
ಹಣ ಬೆಳವಣಿಗೆಗಾಗಿ ಹೂಡಿಕೆ ಮಾಡುವುದಿದ್ದರೆ ನಂಬಿಕಸ್ಥರಿಂದ ಕೇಳಿ ತಿಳಿದು ನಂತರವಷ್ಟೇ ಮಾಡಿ. ರಾಜಕೀಯ ವ್ಯಕ್ತಿಗಳು ಜನಾನುರಾಗ ಹೆಚ್ಚಿಸಿಕೊಳ್ಳುವುದು ಅನಿವಾರ್ಯ.
ಮೀನ
ಜೀವನವು ಮೇಲ್ನೋಟಕ್ಕೆ ಎಲ್ಲರ ಕಣ್ಣಿಗೂ ಉತ್ತಮವಾಗಿ ಕಂಡು ಬಂದರೂ ಒಳಗಿನ ಸತ್ಯಾಂಶ ನಿಮಗೆ ಮಾತ್ರ ತೋರುವುದು. ಚರ ಆಸ್ತಿಯನ್ನು ಸಂಪಾದನೆ ಮಾಡುವ ಕನಸು ಈಡೇರುವ ಅವಕಾಶಗಳು ಇರುತ್ತವೆ.