ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ಫೆಬ್ರುವರಿ 2024– ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ತಿಂಗಳು
Published 31 ಜನವರಿ 2024, 18:31 IST
ಅರುಣ ಪಿ.ಭಟ್ಟ
ಮೇಷ
ವೃತ್ತಿಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಶೈಕ್ಷಣಿಕ ಅಭಿವೃದ್ಧಿ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ನಿರೀಕ್ಷಿತ ಫಲ ಸಿಗಲಿದೆ. ಆದಾಯದಲ್ಲಿ ಹೆಚ್ಚಳ, ವಿವಿಧ ಮೂಲಗಳಿಂದ ಹಣಕಾಸಿನ ಹರಿವು. ಖರ್ಚು ಹೆಚ್ಚಾಗಬಹುದು. ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸಿ. ಶುಭ: 12,18,27 ಅಶುಭ: 09,13,27.
ವೃಷಭ
ಕಲಾವಿದರಿಗೆ ಸಂಗೀತಗಾರರಿಗೆ ಉತ್ತಮ ಸಮಯ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಗೃಹ ನಿರ್ಮಾಣ ಅಥವಾ ನೂತನ ಮನೆ ಕೊಳ್ಳುವ ಯೋಗವಿದೆ. ಬರಬೇಕಾದ ಬಾಕಿ ಹಣ ಬರುವುದು. ಸೋದರ ಸೋದರಿಯರೊಂದಿಗಿನ ಮನಸ್ತಾಪಗಳು ದೂರವಾಗುವವು. ಅವಿವಾಹಿತರಿಗೆ ವಿವಾಹ ಯೋಗ. ಶುಭ: 14,22,26 ಅಶುಭ: 08,12,23.
ಮಿಥುನ
ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಸಮಯ. ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಒತ್ತಡ, ಅನಗತ್ಯ ಅಲೆದಾಟ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಧಾರ್ಮಿಕ ಕಾರ್ಯಗಳಿಂದ ಸಂತೋಷ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶುಭ: 11,15,21 ಅಶುಭ: 12,16,29.
ಕರ್ಕಾಟಕ
ನೆರೆ ಹೊರೆಯವರಿಂದ ಉತ್ತಮ ಸಹಕಾರ, ಸ್ನೇಹಮಯ ವಾತಾವರಣ ಇರುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಸುವಿರಿ. ಆರ್ಥಿಕವಾಗಿ ಉತ್ತಮ ತಿಂಗಳು. ರಾಜಕೀಯದಲ್ಲಿರುವವರಿಗೆ, ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭ. ವಾಣಿಜ್ಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭ. ಶುಭ: 14,18,26 ಅಶುಭ: 12,19,22.
ಸಿಂಹ
ಹತ್ತಿರದ ಬಂಧುಗಳು ಸಹಾಯ ಬಯಸುವರು. ಉದ್ಯೋಗದಲ್ಲಿ ಮೇಲಧಿಕಾರಿಗಳ ತೊಂದರೆ, ಅನವಶ್ಯಕ ಕಿರಿಕಿರಿ. ಕೃಷಿ ಮತ್ತು ಪಶುಪಾಲನೆ ವ್ಯವಹಾರದವರಿಗೆ ನಷ್ಟ. ಅವಿವಾಹಿತರಿಗೆ ವಿವಾಹ ಭಾಗ್ಯ. ವಾಹನ ಖರೀದಿಗೆ ಉತ್ತಮ ಅವಕಾಶ. ತಿಂಗಳ ಕೊನೆಯಲ್ಲಿ ಸಣ್ಣ ಪ್ರವಾಸ. ಶುಭ: 14,18,22 ಅಶುಭ: 16,23,28.
ಕನ್ಯಾ
ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಪ್ರಗತಿ. ಉತ್ಸಾಹ ಹಾಗೂ ಸಂತೋಷ ಹೆಚ್ಚುವುದು. ತಿಂಗಳ ಕೊನೆಗೆ ವ್ಯಾಪಾರ ವ್ಯವಹಾರ ಲಾಭದಾಯಕವಾಗಿರುತ್ತದೆ. ನಿಮ್ಮ ಜೀವನ ಶೈಲಿ ಸುಧಾರಿಸಿಕೊಳ್ಳಲು ಹೆಚ್ಚು ಶ್ರಮ ಹಾಕಲಿದ್ದೀರಿ. ಸಂಗಾತಿಗೆ ಉಡುಗೊರೆಗಳನ್ನು ನೀಡುವಿರಿ. ಶುಭ: 16,20,28 ಅಶುಭ: 13,23,26.
ತುಲಾ
ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿವಿಧ ಮಾರ್ಗಗಳಿಂದ ವ್ಯವಹಾರಕ್ಕೆ ಪ್ರಶಸ್ತ ಅವಕಾಶಗಳು ಒದಗಿ ಬರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯೋಗಸ್ಥರಿಗೆ ನೌಕರಿಯಲ್ಲಿ ನೆಮ್ಮದಿ, ಕುಟುಂಬ ಸೌಖ್ಯ. ಮನೆಗೆ ಹೊಸ ಪೀಠೋಪಕರಣ ಖರೀದಿ ಸಾಧ್ಯತೆ. ಶುಭ: 12,14,28. ಅಶುಭ: 13,19,27.
ವೃಶ್ಚಿಕ
ಮಾಡುವ ಕೆಲಸಗಳನ್ನು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೀರಿ. ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ–ಉದ್ಯಮ ವಿಸ್ತರಣೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಶುಭ: 10,14,22 ಅಶುಭ: 12,16,23.
ಧನು
ಗುರು ಹಿರಿಯರ ಆಶೀರ್ವಾದ ಪಡೆದು ಮಹತ್ವದ ನಿರ್ಣಯ ತೆಗೆದುಕೊಳ್ಳಿ. ಖನಿಜ, ತೈಲ ವ್ಯವಹಾರಸ್ಥರಿಗೆ ಉತ್ತಮ ಲಾಭ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ. ಅಗ್ನಿಯಿಂದ ಅವಘಡ ಸಾಧ್ಯತೆ, ಎಚ್ಚರಿಕೆಯಿಂದ ಇರಿ. ಕೋರ್ಟ್ ಪ್ರಕರಣಗಳ ಪರಿಹಾರ. ಶುಭ: 12,19,28 ಅಶುಭ: 10,16,24.
ಮಕರ
ಆರ್ಥಿಕವಾಗಿ ಸುಭದ್ರವಾಗುವಿರಿ. ಹಳೇಸಾಲ ತೀರಿಸುವಿರಿ. ವಿರೋಧಿಗಳ ಆಟ ನಿಮ್ಮ ಮುಂದೆ ನಡೆಯದು. ಕಲೆ, ಸಂಸ್ಕೃತಿ, ಹೋಟೆಲ್, ಸಿನಿಮಾ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉನ್ನತಿ. ಸರ್ಕಾರದ ಕೆಲಸಗಳು ಅಡೆತಡೆ ಇಲ್ಲದೆ ನಡೆಯುವವು. ಶುಭ: 16,23,26 ಅಶುಭ: 14,18,22.
ಕುಂಭ
ಅಸ್ತಿರವಾದ ಮನಸ್ಸಿಂದ ಗೊಂದಲವಾಗುವುದು. ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಇದೆ. ಸಜ್ಜನರ ಸಹವಾಸದಿಂದ ನೆಮ್ಮದಿ. ಕೋರ್ಟ್‌ ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು. ನಂಬಿದ ಜನರು ನಂಬಿಕೆ ಕಳೆದುಕೊಳ್ಳುವರು. ಸಂಗಾತಿಯೊಡನೆ ಸಮಾಧಾನದಿಂದ ನಡೆದುಕೊಳ್ಳಿ. ಶುಭ: 16,24,28 ಅಶುಭ: 17,18,27
ಮೀನ
ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಸೋದರ ಸೋದರಿಯರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗುವಿರಿ. ಪದೋನ್ನತಿ ಸಿಗುವ ಯೋಗವಿದೆ. ಶೈಕ್ಷಣಿಕ ರಂಗದಲ್ಲಿ ಉತ್ತಮ ಪ್ರಗತಿ ಇದೆ. ಶುಭ: 18,25,29 ಅಶುಭ: 12,16,26.