ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
14/04/2024 - 20/04/2024
ವಾರ ಭವಿಷ್ಯ | 2024ರ ಏಪ್ರಿಲ್ 21–27: ಈ ರಾಶಿಯವರ ಮನದಲ್ಲಿ ವ್ಯಗ್ರತೆ ಇರುತ್ತದೆ
Published 20 ಏಪ್ರಿಲ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಸವಲತ್ತುಗಳು ಸಿಗುವ ಸಾಧ್ಯತೆಗಳಿವೆ. ಧನದಾಯವು ತೃಪ್ತಿಕರವಾಗಿ ರುವುದಿಲ್ಲ. ನಿಮ್ಮ ಕೆಲಸಕಾರ್ಯ ಗಳಿಗೆ ಆತಂಕಗಳು ಬರಬಹುದು. ಸ್ಥಿರಾಸ್ತಿಗಾಗಿ ಕೂಡಿಸಿ ಇಟ್ಟಿದ್ದಹಣ ಬೇರೊಂದುಕಾರ್ಯಕ್ಕಾಗಿ ಖರ್ಚಾಗುವ ಸಾಧ್ಯತೆಗ ಳಿವೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಯಶಸ್ಸು ದೊರೆ ಯುತ್ತದೆ. ಆಹಾರ ಸಂಸ್ಕರಣ ವಿದ್ಯೆಯನ್ನು ಕಲಿಯುತ್ತಿರುವವರಿಗೆ ನಿರೀಕ್ಷಿಸಿದ ಯಶಸ್ಸುಖಂಡಿತ ಇರುತ್ತದೆ. ಹೊಟ್ಟೆ ಯೊಳಗೆ ಪಿತ್ತವಿಕಾರಗಳಾಗುವಸಾಧ್ಯತೆಗಳಿವೆ. ಸಂಗಾತಿಯ ಸಲಕರಣೆಗಳಿಗಾಗಿ ಹೆಚ್ಚು ಹಣ ಖರ್ಚಾಗುವ ಸಾಧ್ಯತೆಗಳಿವೆ. ವಿದ್ಯುತ್ ಉಪ ಕರಣಗಳನ್ನು ತಯಾರಿಸುವವರಿಗೆ ವ್ಯವಹಾರ ದಲ್ಲಿ ಸ್ವಲ್ಪಮಟ್ಟಿನಹಿನ್ನಡೆ ಆಗಬಹುದು.ಭೂಮಿ ವ್ಯಾಪಾರ ಮಾಡುವವರಿಗೆ ನಿರೀಕ್ಷಿತ ಆದಾಯ ಇರುವುದಿಲ್ಲ. ತಳಿ ಅಭಿವೃದ್ಧಿ ಮಾಡುವವರಿಗೆ ಹೆಚ್ಚು ಮಾರುಕಟ್ಟೆ ದೊರೆಯುತ್ತದೆ.
ವೃಷಭ
ನಿಮ್ಮ ವ್ಯಕ್ತಿತ್ವದಲ್ಲಿ ಧೀಮಂತಿಕೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಬಹಳ ಚುರುಕಾಗಿ ಕೆಲಸಮಾಡಿ ಎಲ್ಲರಗಮನ ಸೆಳೆಯುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಅಥವಾ ಸೋದರಿಯ ರಿಂದ ಸಾಕಷ್ಟು ಸಹಕಾ ರಗಳು ಸಿಗುತ್ತವೆ. ಕೃಷಿಭೂಮಿಯನ್ನುಕೊಳ್ಳುವ ಪ್ರಯತ್ನದಲ್ಲಿಸಫಲರಾಗುವಿರಿ. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಹೆಚ್ಚಿನಯಶಸ್ಸು ದೊರೆ ಯುತ್ತದೆ. ಉಷ್ಣಾಂಶ ವ್ಯತ್ಯಾಸದಿಂದ ಕೆಲವರಿಗೆ ಬಾಯಿ ಹುಣ್ಣು ಕಾಣಿಸಬಹುದು. ಸಂಗಾತಿ ಯಿಂದ ನಿಮ್ಮ ವ್ಯವಹಾರಗಳಿಗೆ ಪೂರಕ ಸಹ ಕಾರ ಗಳು ದೊರೆಯುತ್ತವೆ.ವಿಶೇಷ ಅಲಂಕಾರ ಗಳಿಗೆ ಹೆಚ್ಚು ಗಮನ ಕೊಡುವಿರಿ. . ಕೆಲವು ಮಹಿಳೆಯರಿಂದ ಕೆಲಸ ಕಾರ್ಯಗಳಿಗೆ ಅಡ್ಡಿ ಬರಬಹುದು. ಸ್ಥಿರಾಸ್ತಿಗಾಗಿ ಇಟ್ಟ ಹಣ ಕರಗ ಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿ ತಾಂಶವಿರುತ್ತದೆ. ಮೂತ್ರ ಸಂಬಂಧಿ ಖಾಯಿಲೆಗಳು ಕೆಲವರನ್ನು ಭಾದಿಸಬಹುದು.
ಮಿಥುನ
ಧೀಮಂತರಂತೆ ಕಾಣಿಸಿಕೊಳ್ಳಲು ಪ್ರಯತ್ನ ಪಡುವಿರಿ. ಧನಾದಾಯವು ಅವಶ್ಯಕತೆಯನ್ನು ಪೂರೈ ಸುವಷ್ಟಿರುತ್ತದೆ. ನಿಮ್ಮ ನಡವಳಿಕೆಗ ಳಿಂದ ಹಿರಿಯರ ಬಳಿ ಗೌರವ ಸಂಪಾದಿಸುವಿರಿ. ಸಂಸಾರದಲ್ಲಿ ಸ್ವಲ್ಪಸಂತೋಷ ಸ್ವಲ್ಪ ಕಾವು ಇರುತ್ತದೆ. ಮಕ್ಕಳ ಬಗ್ಗೆ ಒಳ್ಳೆಯಮಾತುಗಳನ್ನು ಕೇಳಬಹುದು. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರವಾಗಿರಿ ಸ್ವಲ್ಪ ಮೋಸವಾಗುವ ಸಾಧ್ಯತೆ ಗಳಿವೆ. ಸಂಗಾತಿಯಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುತ್ತದೆ.ಪುಸ್ತಕ ವ್ಯಾಪಾರಿಗ ಳಿಗೆ ಈಗ ಹೆಚ್ಚಿನ ವ್ಯಾಪಾರ ವಾಗಿ ಲಾಭ ಬರು ತ್ತದೆ. ಹೊಸ ಪುಸ್ತಕ ಪ್ರಕಾಶಕರಿಗೆ ಅಮೂಲ್ಯ ಪುಸ್ತಕವನ್ನು ಪ್ರಕಟಿ ಸುವ ಯೋಗವಿದೆ. ಶಿಕ್ಷಣ ಸಂಸ್ಥೆಯನ್ನು ವಿಸ್ತರಿಸಬೇಕೆಂದಿರುವವರಿಗೆ ಈಗ ಅವಕಾಶಗಳು ದೊರೆಯುತ್ತವೆ.ಕೆಲವು ರಾಜಕಾ ರಣಿಗಳಿಗೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗುವ ಸಂದರ್ಭವಿದೆ.
ಕರ್ಕಾಟಕ
ನೀವು ತೀರಾ ಸ್ವಂತಕ್ಕೆ ಆಲೋಚನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ಅವಶ್ಯಕತೆ ಯನ್ನು ಪೂರೈಸುತ್ತದೆ. ಸ್ವಲ್ಪ ಆಲಸಿ ನಡವಳಿಕೆ ಗಳಿದ್ದರೂ ಸಹ ಪುನಃ ಎಚ್ಚೆತ್ತು ಕೆಲಸ ಮಾಡು ವಿರಿ. ಆಸ್ತಿ ವಿಚಾರದಲ್ಲಿ ಹಿರಿಯರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಮಕ್ಕಳ ಏಳಿಗೆಯ ಬಗ್ಗೆ ಚಿಂತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯ ಯನದಲ್ಲಿ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಕಣ್ಣಿನತೊಂದರೆಗಳುಕೆಲವರಿಗೆಕಾಣಿಸಬಹುದು. ಸಂಗಾತಿಯ ಜೊತೆ ಕಾವೇರಿದ ಮಾತುಗಳಾಗ ಬಹುದು.ಸರ್ಕಾರಿ ಕೆಲಸ ಕಾರ್ಯ ನಿಧಾನ ಗತಿ ಯನ್ನು ಕಾಣಬಹುದು. ಹಿರಿಯ ಉದ್ಯಮದಾ ರರು ತಮ್ಮ ವ್ಯವಹಾರ ವಿಸ್ತರಣೆಗಾಗಿ ವಿದೇಶಕ್ಕೆ ಹೋಗಿ ಬರಬಹುದು. ಹಿರಿಯರು ಕುಟುಂಬ ಸದಸ್ಯರನ್ನುನೋಡಲು ದೂರದಊರುಅಥವಾ ವಿದೇಶಕ್ಕೆ ಹೋಗಿ ಬರಬಹುದು. ವೃತ್ತಿಯಲ್ಲಿ ಗೌರವ ಹೆಚ್ಚುವ ಸಾಧ್ಯತೆ ಇದೆ.
ಸಿಂಹ
ನಿಮ್ಮ ಹಿರಿಯರ ನಡವಳಿಕೆಗಳನ್ನು ಅನುಸರಿಸಲು ಪ್ರಯತ್ನ ಪಡುವಿರಿ. ಹಣದಒಳ ಹರಿವು ನಿಮ್ಮಅವಶ್ಯಕತೆಯನ್ನು ಪೂರೈಸುತ್ತದೆ. ಸ್ತ್ರೀಯರಿಂದ ಅಥವಾ ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು. ಕೃಷಿ ಭೂಮಿಯನ್ನು ಕೊಳ್ಳಬಹುದು. ನಿವೇಶನ ಅಥವಾ ಕಟ್ಟಡಗಳನ್ನು ಕೊಳ್ಳುವಾಗ ಹೆಚ್ಚು ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಅಧ್ಯಯನ ದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳ ಬಗ್ಗೆ ಒಳ್ಳೆಯಮಾತುಗಳನ್ನು ಕೇಳುವ ಸಾಧ್ಯತೆಗಳಿವೆ. ಸಂಸಾರದಲ್ಲಿ ಕಾವೇರಿದ ವಾತಾವರಣ ಇರು ತ್ತದೆ.ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗ ಳನ್ನು ಕಾಣಬಹುದು. ಮೂಳೆ ತೊಂದರೆ ಇರು ವವರು ಹೆಚ್ಚು ಎಚ್ಚರ ವಹಿಸಿರಿ. ಹಿರಿಯರಿಂದ ಧನಸಹಾಯ ನಿಮಗೆ ದೊರೆಯುತ್ತದೆ. ವೃತ್ತಿ ಯಲ್ಲಿ ಬುದ್ಧಿವಂತಿಕೆಯಿಂದ ನಿಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿಲ್ಲದಿದ್ದರೂ ನಷ್ಟ ಖಂಡಿತ ಇರುವುದಿಲ್ಲ.
ಕನ್ಯಾ
ವಾರದ ಆರಂಭದಲ್ಲಿ ಬಹಳ ದ್ವಂದ್ವ ಮನಸಿರುತ್ತದೆ. ಧನದಾಯವು ಅಗತ್ಯವನ್ನು ಪೂರೈಸುತ್ತದೆ. ಬಂಧುಗಳು ನಿಮ್ಮ ನಡವಳಿಕೆ ಯನ್ನು ಕಂಡು ನಿಮ್ಮ ವಿರುದ್ಧ ಕೆಲಸ ಮಾಡು ವರು.ಆಸ್ತಿವಿಚಾರಗಳಲ್ಲಿಸರ್ಕಾರಿತಕರಾರುಗಳು ಬರುವ ಸಾಧ್ಯತೆಇದೆ. ಮಕ್ಕಳು ನಿಮ್ಮ ಮಾತನ್ನು ಕೇಳದಿರಬಹುದು ಅಥವಾ ಆಗೌರವತೋರುವ ಸಾಧ್ಯತೆ ಇದೆ. ಸಂಗಾತಿಯ ಅಧಿಕ ವೆಚ್ಚಗಳು ಸ್ವಲ್ಪ ತಲೆ ಬಿಸಿ ಮಾಡಬಹುದು.ಉಪಾಧ್ಯಾಯ ರುಗಳಿಗೆ ನಿರೀಕ್ಷಿತ ವರಮಾನ ಬರದಿರಬಹುದು ಹಾಗೂ ಪೋಷಕರು ನಿಮ್ಮನ್ನು ತರಾಟೆ ತೆಗೆದು ಕೊಳ್ಳುವ ಸಂದರ್ಭವಿದೆ. ನೀವು ಹಿರಿಯರನ್ನು ಓಲೈಕೆ ಮಾಡಿಕೊಂಡು ಧನಸಹಾಯ ಪಡೆಯು ವಿರಿ. ವೃತ್ತಿಯಲ್ಲಿ ನಿಮ್ಮಬುದ್ಧಿವಂತಿಕೆ ಉಪ ಯೋಗಿಸಿ ಉಳಿದುಕೊಳ್ಳುವಿರಿ. ಹೈನುಗಾರಿಕೆ ಯವರಿಗೆ ಲಾಭ ಇಲ್ಲದಿದ್ದರೂ ನಷ್ಟವಿಲ್ಲ. ಈಗ ಸರ್ಕಾರಿಕೆಲಸಕಾರ್ಯಗಳಲ್ಲಿನಿಧಾನಗತಿಯನ್ನು ಕಾಣಬಹುದು.
ತುಲಾ
ವಾರದ ಆರಂಭದಲ್ಲಿ ಹಣ ಗಳಿಕೆಯ ಬಗ್ಗೆ ಸಾಕಷ್ಟು ಆಲೋಚನೆ ಮಾಡುವಿರಿ. ಆದರೆ ನಿಮ್ಮ ನಿರೀಕ್ಷೆ ಎಷ್ಟು ಹಣ ಬರುವುದಿಲ್ಲ. ನಿಮ್ಮ ನಡವಳಿಕೆಗಳಿಂದ ಹಿರಿಯರನ್ನು ಓಲೈಸಲು ಪ್ರಯತ್ನ ಪಡುವಿರಿ. ಸ್ಥಿರಾಸ್ತಿಗಳಲ್ಲಿ ಸಾಕಷ್ಟು ಸಮಸ್ಯೆಗಳು ಬರುವ ಸಾಧ್ಯತೆಗಳಿವೆ.ವಿದ್ಯಾರ್ಥಿ ಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಕೀಲು ನೋವುಗಳು ಇರುವವರು ಹೆಚ್ಚು ಎಚ್ಚರವನ್ನು ವಹಿಸಿರಿ. ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ಗರ್ಭಿಣಿಯರು ಹೆಚ್ಚು ಎಚ್ಚರ ದಿಂದಿರುವುದು ಒಳ್ಳೆಯದು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಧಾರ್ಮಿಕ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ನಿರೀಕ್ಷಿತ ಸಹಾಯ ದೊರೆಯುತ್ತದೆ. ವ್ಯವಹಾರ ಗಳಲ್ಲಿ ಸ್ವಲ್ಪ ಕಾನೂನಿನ ತೊಡಕುಗಳು ಬರಬ ಹುದು ,ಲಾಭಾಂಶ ಕಡಿಮೆಯಾಗಬಹುದು.ಗಣಿ ಗಾರಿಕೆಮಾಡುವವರಿಗೆಸರ್ಕಾರದಿಂದಕಾನೂನು ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ತಂದೆಯಿಂದ ಹೆಚ್ಚಿನ ಅನುಕೂಲತೆಗಳು ದೊರೆ ಯುತ್ತವೆ. ವೃತ್ತಿಯಲ್ಲಿ ಸ್ವಲ್ಪ ಕಸಿವಿಸಿಗಳು ಇರು ತ್ತವೆ.ಧರ್ಮ ಕಾರ್ಯಗಳನ್ನು ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರಗಳು ದೊರೆಯುತ್ತವೆ.
ವೃಶ್ಚಿಕ
ಮನಸ್ಸಿನಲ್ಲಿ ದೃಢ ನಿರ್ಧಾರಗಳನ್ನು ತೆಗೆದು ಕೊಳ್ಳುವ ಬಗ್ಗೆ ಬಹಳ ಗೊಂದಲಗಳಿರುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಶತ್ರುಗಳನ್ನು ಸಂಹರಿಸಲು ಬಳಸುವ ತಂತ್ರಗಳು ಕೈಕೊಡಬಹುದು. ಸ್ಥಿರಾಸ್ತಿ ವ್ಯವಹಾರಗಳನ್ನು ಮಾಡುವವರಿಗೆ ಅಷ್ಟು ಯಶಸ್ಸು ಇರುವುದಿಲ್ಲ ಸಾಕಷ್ಟು ಸಮಸ್ಯೆಗಳು ಬರಬಹುದು.ವಿದ್ಯಾರ್ಥಿ ಗಳಿಗೆ ನಿರೀಕ್ಷಿತಯಶಸ್ಸು ಇರುತ್ತದೆ. ಕಣ್ಣುಮತ್ತು ಹೊಟ್ಟೆಯ ಬಗ್ಗೆ ಹೆಚ್ಚುಎಚ್ಚರ ವಹಿಸಿರಿ.ಸರ್ಕಾರಿ ಸಾಲಗಳುದುಬಾರಿಯಾಗಿಪರಿಣಮಿಸಬಹುದು. ಸಂಗಾತಿಯಿಂದ ನಿರೀಕ್ಷಿತ ಸಹಕಾರ ದೊರೆಯು ತ್ತದೆ. ತೀರ್ಥಯಾತ್ರೆಯನ್ನು ಮಾಡುವ ಯೋಗ ಇದೆ.ರೈತರಿಗೆ ಸರ್ಕಾರದಿಂದ ಸಹಾಯಧನಗಳು ಸಿಗುತ್ತವೆ. ವಿದ್ಯುತ್ ಉಪಕರಣಗಳನ್ನು ತಯಾ ರಿಸಿ ಮಾರುವವರಿಗೆ ಹೆಚ್ಚಿನ ಲಾಭ ಇರುತ್ತದೆ. ದೇವರ ಕಾರ್ಯಗಳಿಗಾಗಿ ಹಣ ಖರ್ಚು ಮಾಡು ವಿರಿ. ಗಣಿಗಾರಿಕೆಯನ್ನು ಮಾಡುವವರಿಗೆ ಸ್ವಲ್ಪ ಕಾನೂನಿನ ತೊಡಕುಗಳು ಹೆಚ್ಚಾಗಬಹುದು.
ಧನು
ವಾರದ ಆರಂಭ ಸ್ವಲ್ಪ ಜಿಜ್ಞಾಸೆಗಳಿಂದ ಕೂಡಿರುತ್ತದೆ. ಹಣದಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ.ನಿಮ್ಮಕೆಲಸಗಳಿಗೆ ಬಂಧುಗ ಳಿಂದ ಅಡ್ಡಿಬರುವ ಸಾಧ್ಯತೆಗಳಿವೆ.ಪರ ದೇಶದ ಲ್ಲಿರುವವರು ತಮ್ಮ ಸ್ವದೇಶದಲ್ಲಿ ಆಸ್ತಿಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಈಗ ಅಧ್ಯಯನ ದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳಿಂದ ಗೌರವ ಪಡೆಯುವ ಯೋಗವಿದೆ. ಮೂತ್ರ ಸಂಬಂಧಿ ಕಾಯಿಲೆಗಳು ಕೆಲವರನ್ನು ಭಾದಿಸಬ ಹುದು. ಪ್ರೀತಿ ಪ್ರೇಮಗಳಲ್ಲಿರುವವರಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ.ಸಂಸಾರದಲ್ಲಿಸಾಕಷ್ಟು ಸಂತೋಷವಿರುತ್ತದೆ. ವೈಯಕ್ತಿಕ ಪರಿಹಾರ ಕ್ಕಾಗಿ ಕೆಲವು ಧಾರ್ಮಿಕ ಕಾರ್ಯಗಳನ್ನು ಮಾಡು ವಿರಿ.ತಂದೆಯಿಂದ ಸಿಗುತ್ತಿದ್ದ ಸಹಾಯಧನಗಳು ನಿಲ್ಲುವ ಸಂದರ್ಭವಿದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗ ಬೇಕಾಗಬ ಹುದು. ನಿಮ್ಮ ವ್ಯವಹಾರಗಳ ಲಾಭವನ್ನು ಕೆಲವು ಸ್ತ್ರೀಯರು ಅಪಹರಿಸುವ ಸಾಧ್ಯತೆಗಳಿವೆ ಎಚ್ಚರ.
ಮಕರ
ನಿಮ್ಮ ಕೆಲಸ ಕಾರ್ಯಗಳನ್ನು ಯೋಜನಾ ಬದ್ಧವಾಗಿ ಮಾಡಿಕೊಳ್ಳುವುದು ಒಳ್ಳೆಯದು. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇರು ವುದಿಲ್ಲ. ನಿಮ್ಮ ಕೆಲಸಕಾರ್ಯಗಳಿಗೆ ಬಂಧುಗಳ ಸಹಕಾರ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ತ್ವರಿತವಾಗಿ ಮುಂದುವರೆಯಬಹುದು. ಈಗ ವಿದ್ಯಾರ್ಥಿಗಳು ತಮ್ಮ ಶ್ರಮದಿಂದ ಹೆಚ್ಚಿನ ಪಲಿ ತಾಂಶವನ್ನು ಪಡೆಯಬಹುದು. ವ್ಯಾಪಾರ ವ್ಯವ ಹಾರದಲ್ಲಿ ಹೆಚ್ಚು ಎಚ್ಚರವಿರಲಿ. ಇಲ್ಲವಾದಲ್ಲಿ ಧನನಷ್ಟ ಆಗಬಹುದು. ರಕ್ತ ಸಂಬಂಧಿಕಾಯಿಲೆ ಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿ ಯಿಂದ ಹಿರಿಯರಿಗೆಸಹಾಯಗಳಾಗುತ್ತವೆ.ಇದು ವರೆಗೆ ಆಗದಿದ್ದ ಸರ್ಕಾರಿ ದಾಖಲೆಗಳು ಈಗ ಆಗುವಸಾಧ್ಯತೆಗಳಿವೆ. ತಂದೆಯಿಂದ ಕುಲಾಚಾ ರದ ವಿಧಿವಿಧಾನಗಳನ್ನು ತಿಳಿಯಬಹುದು. ಈಗ ಉದ್ಯೋಗದಲ್ಲಿ ಸಾಕಷ್ಟುಪ್ರಗತಿ ಇರುತ್ತದೆ. ಕೆಲ ವರಿಗೆ ಅನಿರೀಕ್ಷಿತವಾಗಿ ಧರ್ಮ ಜಿಜ್ಞಾಸೆಗಳು ಕಾಡತೊಡಗುತ್ತವೆ. ಸರ್ಕಾರಿಕೆಲಸಕಾರ್ಯಗಳು ನಿಧಾನವೆನಿಸಿದರೂ ನಿಲ್ಲುವುದಿಲ್ಲ.
ಕುಂಭ
ಕಿರಿಯರಿಗೆ ಮನಸ್ಸಿನಲ್ಲಿ ಹೆಚ್ಚು ವ್ಯಗ್ರತೆ ಇರುತ್ತದೆ. ಹಿರಿಯರಲ್ಲಿ ಹೆಚ್ಚು ಸಮಾಧಾನವಿರು ತ್ತದೆ. ಹಣದ ಒಳಹರಿವು ಅಗತ್ಯವನ್ನುಪೂರೈಸು ವಷ್ಟು ಇರುತ್ತದೆ. ಹಿರಿಯರ ಸಹಕಾರಗಳು ಈಗ ದೊರೆಯುತ್ತವೆ. ಆಸ್ತಿ ವ್ಯವಹಾರ ಮಾಡು ವವರಿಗೆ ಹೆಚ್ಚು ಸಂಪಾದನೆ ಆಗುತ್ತದೆ. ನೀವು ಸಹ ಸ್ಥಿರಾಸ್ತಿಯನ್ನು ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸುಇರು ತ್ತದೆ. ಕೆಲವರಿಗೆ ಮಕ್ಕಳಿಂದ ಧನಸಹಾಯ ವಿರು ತ್ತದೆ. ಶೀತಬಾಧೆ ಇರುವವರು ಹೆಚ್ಚು ಎಚ್ಚರವಾ ಗಿರಿ.ತಾಯಿಯುನಿಮ್ಮನ್ನುನಿಷ್ಠೂರಮಾಡುವರು.ಸಂಗಾತಿಯು ನಿಮ್ಮಕೆಲಸಕಾರ್ಯಗಳಿಗೆ ಹೆಚ್ಚು ಸಹಾಯ ಮಾಡುವರು. ಧಾರ್ಮಿಕ ವಿದ್ಯೆಗಳಲ್ಲಿ ಆಸಕ್ತಿಹೆಚ್ಚುತ್ತದೆ. ಪಿತ್ರಾರ್ಜಿತಆಸ್ತಿಗಳಲ್ಲಿ ಪಾಲು ದೊರೆಯುತ್ತದೆ. ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಧರ್ಮಬೋಧನೆ ಮಾಡುವವರಿಗೆ ಸಮಾಜದ ಸಹಕಾರಗಳು ಖಂಡಿತದೊರೆಯುತ್ತದೆ. ಅನುವಂಶಿಕವ್ಯಾಪಾರ ಗಳಲ್ಲಿ ನಿಮಗೆ ಸ್ಥಾನ ದೊರೆಯುತ್ತದೆ.
ಮೀನ
ಬಹಳ ಅಲಂಕಾರಕವಾಗಿ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ.ನಿಮ್ಮಕೆಲಸಕಾರ್ಯ ಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ರಿಯಲ್ ಎಸ್ಟೇಟ್ ಉದ್ಯಮ ಮಾಡುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶಗಳು ದೊರೆಯುತ್ತವೆ. ಸ್ವಂತ ಆರೋ ಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ಪ್ರೀತಿ ಪ್ರೇಮಗಳ ಲ್ಲಿರುವವರಿಗೆ ಸಫಲತೆಇರುತ್ತದೆ.ಸಂಗಾತಿಯು ನಿಮ್ಮ ಕಡೆ ಗಮನ ಕೊಡುವುದಿಲ್ಲ.ನಿಮ್ಮ ವ್ಯವ ಹಾರದಿಂದ ಲಾಭಗಳು ಬರುವುದು ನಿಧಾನವಾ ಗುತ್ತದೆ. ಪಾದದಲ್ಲಿನನೋವು ಕೆಲವರನ್ನು ಕಾಡ ಬಹುದು. ವೃತ್ತಿಯಲ್ಲಿ ಆದಾಯದ ಏರಿಕೆಯ ಸೂಚನೆ ಇದೆ. ಅದಿರು ಉತ್ಪಾದಕರಿಗೆ ಲಾಭವಿ ರುತ್ತದೆ. ಕೃಷಿ ಪಂಡಿತರಿಗೆ ಲಾಭವಿರುತ್ತದೆ. ಅನಿ ರೀಕ್ಷಿತವಾಗಿ ಧನಾಗಮನವಾಗುವ ಸೂಚನೆ ಇದೆ. ತಂದೆಗಾಗಿ ಹಣ ಕೊಡಬೇಕಾದ ಪರಿಸ್ಥಿತಿ ಇರುತ್ತದೆ. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆ ಇದೆ.