ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
30/07/2023 - 05/08/2023
ವಾರ ಭವಿಷ್ಯ; ಆಗಸ್ಟ್‌ 06 ರಿಂದ 13: ಸಿಂಹ ರಾಶಿಯವರಿಗೆ ಶತ್ರುಗಳು ಬಲಹೀನರಾಗುವರು
Published 5 ಆಗಸ್ಟ್ 2023, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಅತಿಯಾದ ಭಾವಕತೆ ಇರುತ್ತದೆ ಹಾಗೂ ಇದರಿಂದ ಸಂಸಾರದಲ್ಲಿ ಗೊಂದಲಗಳಾಗಬಹುದು. ಹಣಕಾಸು ತಜ್ಞರ ಸಲಹೆ ಪಡೆದು ದೀರ್ಘಾವಧಿ ಯೋಜನೆಗಳ ಹಣ ಹೂಡಿಕೆಗಳನ್ನು ಮಾಡುವುದು ಒಳ್ಳೆಯದು. ವೈಯಕ್ತಿಕ  ವ್ಯವಹಾರಗಳ ಬಗ್ಗೆ ಹಾಗೂ ಬಾಕಿ ಇರುವ ಕೆಲಸಗಳ ಬಗ್ಗೆ ಹೆಚ್ಚು ಗಮನಹರಿಸಿರಿ. ಸಂಗೀತಗಾರರಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವ ಕಾಶ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಸಾಕಷ್ಟು ಹೆಸರುಕೊಡುವ ಸ್ಪರ್ಧೆಗೆ ಆಯ್ಕೆಯಾಗುವ ಸಂದರ್ಭ ವಿದೆ. ವೃತ್ತಿಯಲ್ಲಿ ಉನ್ನತ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಬರುತ್ತದೆ. ಲೇವಾದೇವಿಯ ವ್ಯವಹಾರಗಳು ಖಂಡಿತ ಬೇಡ. ಇದು ನಷ್ಟಕ್ಕೆ ಕಾರಣವಾಗಬಹುದು. ಸರ್ಕಾರಿ ಭೂಮಿ ಅಥವಾ ನಿವೇಶನವನ್ನು ಪಡೆಯುವ ಯೋಗವಿದೆ.
ವೃಷಭ
ಭವಿಷ್ಯದ ಬಗ್ಗೆ ಅನಗತ್ಯ ಚಿಂತನೆಗಳನ್ನು ಬಿಟ್ಟು ಈಗಿನ ಅಗತ್ಯಗಳನ್ನು ಪೂರೈಸಿಕೊಳ್ಳುವ ಕಡೆಗೆ ಹೆಚ್ಚು ಗಮನಹರಿಸಿರಿ. ಪೋಲಿಸ್ ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಂದರ್ಭವಿದೆ.ಪತ್ರಿಕೋದ್ಯಮ ಕಲಿಯುತ್ತಿರುವವರಿಗೆ ಹೆಚ್ಚು ಅವಕಾಶಗಳು ದೊರೆತು ಕಲಿಕೆ ಸಲೀಸಾಗುತ್ತದೆ.ಮನೆಯ ಬದಲಾವಣೆಯಬಗ್ಗೆ ಮನೆಯವರ  ಅಭಿಪ್ರಾಯಗಳನ್ನು  ತೆಗೆದುಕೊಳ್ಳು ವುದು ಅತಿಮುಖ್ಯ. ನಿಮ್ಮಮುಂದಾಳತ್ವವನ್ನು ಜನರು ಹೆಚ್ಚು ಇಷ್ಟಪಡುವರು. ಸಹೋದ್ಯೋಗಿಗಳ ಸಹಕಾರ ದಿಂದ ಅನಿರೀಕ್ಷಿತವಾಗಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಈಗ ಮುಂದುವರೆ ಯಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ಧಾರ್ಮಿಕ ಕೆಲಸಗಳಿಗಾಗಿ ಹಣ ಕೊಡುವಿರಿ.
ಮಿಥುನ
 ನಿಮ್ಮ  ಕಾರ್ಯವೈಖರಿಗೆ ಕಚೇರಿಯಲ್ಲಿ  ಶ್ಲಾಘನೆ ದೊರೆಯುವುದು. ಸರ್ಕಾರದ ಕಡೆಯಿಂದ ಬರಬೇಕಾ ಗಿದ್ದ ಬಾಕಿಹಣಗಳು ಈಗ ಬರುತ್ತದೆಹಾಗೂಸರ್ಕಾರದ ಜೊತೆವ್ಯವಹಾರಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಧನದಾಯವು ನಿರೀಕ್ಷಿತ ಮಟ್ಟದಲ್ಲಿ ಇದ್ದೇ ಇರುತ್ತದೆ. ಹಿರಿಯರಿಂದ ನಿಮ್ಮ ಕಾರ್ಯ ಯೋಜನೆ ಗಳಿಗೆ ಸೂಕ್ತ ಸಲಹೆ ಮತ್ತು ಧನಸಹಾಯ ದೊರೆಯು ತ್ತದೆ. ಕುಟುಂಬದ ಸದಸ್ಯರಲ್ಲಿ ಸಣ್ಣಮಾತುಗಳು ಕೇಳಿ ಬರಬಹುದು. ಧನಾದಾಯವು  ನಿಮ್ಮನಿರೀಕ್ಷೆಗೆ ಹತ್ತಿರ ಬರುತ್ತದೆ. ಧಾರ್ಮಿಕ ಕಾರ್ಯಗಳನ್ನು ಈಗ ಮಾಡುವ ಮನಸ್ಸು ಹೆಚ್ಚುತ್ತದೆ. ವೃತ್ತಿಯಲ್ಲಿ ನೀವು ಎಲ್ಲರೊಂದಿಗೆ   ಹೊಂದಿಕೊಳ್ಳುವುದರಿಂದ ನಿಮ್ಮ ಸ್ಥಾನಮಾನ ಹೆಚ್ಚ ಬಹುದು. ನಾಟಕ ಕಲಾವಿದರಿಗೆ ಹೆಚ್ಚಿನಅವಕಾಶಗಳು ದೊರೆಯುತ್ತವೆ. ಉಪಾ ಧ್ಯಾಯರುಗಳಿಗೆ ಗೌರವ ಹೆಚ್ಚುತ್ತದೆ.
ಕರ್ಕಾಟಕ
ನಿಮ್ಮ ನಿರೀಕ್ಷೆಗಳು ಹಿತಮಿತವಾಗಿದ್ದರೆ ಬಹಳ ಒಳ್ಳೆಯದು. ಅತಿಯಾದ ಅಭಿಮಾನ ನಿಮಗೆ ಎಂದೂ  ಒಳ್ಳೆಯದಲ್ಲ. ಕೌಟುಂಬಿಕ ವಿಚಾರಗಳತ್ತ ಹೆಚ್ಚಿನ ಗಮನವನ್ನು ಕೊಡುವುದು ಒಳ್ಳೆಯದು. ಮನೆಯನ್ನು ಕಟ್ಟಿಸುವ ಸಲುವಾಗಿ ಸಾಮಗ್ರಿಗಳಿಗಾಗಿ ಹಣ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಹೊಸ ಸ್ಥಾನ ಸಿಗುವ  ಸಾಧ್ಯತೆ ಇದೆ. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿಗ ಳಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ.ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ ಬಾಕಿ ಉಳಿದಿರುವ  ಕೆಲಸಗಳನ್ನು ಪೂರೈಸಬಹುದು. ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಮಧ್ಯಮ ಫಲಿತಾಂಶ ಇರುತ್ತದೆ. ಧನದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಕೃಷಿಕರಿಗೆ ಕೃಷಿ ಉತ್ಪನ್ನಗಳಿಂದ ಲಾಭವಿದೆ. ಎಲೆಕ್ಟ್ರಾನಿಕ್ಸ್ ಉದ್ದಿಮೆ ದಾರರಿಗೆ ಅಭಿವೃದ್ಧಿ ಇರುತ್ತದೆ. ವಾಯು ಪ್ರಕೋಪ ನಿಮ್ಮನ್ನು ಕಾಡಬಹುದು.
ಸಿಂಹ
ವಾಣಿಜ್ಯ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಹಿರಿಯರ ಸಹಾಯ ಪಡೆಯುವಿರಿ. ಕೆಲಸವನ್ನು ಸಾಧಿ ಸುವ ಹುಮ್ಮಸ್ಸು ನಿಮ್ಮಲ್ಲಿರುತ್ತದೆ ಹಾಗಾಗಿಕೆಲಸಗಳು ಬೇಗ ಮುಗಿಯುತ್ತವೆ. ವ್ಯವಹಾರಗಳಲ್ಲಿದ್ದ ಶತ್ರುಗಳು ಸ್ವಲ್ಪ ಬಲಹೀನರಾಗುವರು. ನಿಮ್ಮ ಧನಾದಾಯವು   ಸುಸ್ಥಿತಿಯಲ್ಲಿದ್ದಂತೆ ಕಂಡರೂ ಮಧ್ಯಮ ಗತಿಯಲ್ಲಿರು ತ್ತದೆ. ಹಿತಶತ್ರುಗಳುನಿಮ್ಮನ್ನುವಂಚಿಸುವ ಸಲುವಾಗಿ ನಿಮ್ಮ ಸ್ನೇಹ  ಬೆಳೆಸುವರು ಅಂತವರ ಬಗ್ಗೆ ಸಾಕಷ್ಟು ಎಚ್ಚರದಿಂದಿರಿ. ವಿದ್ಯಾರ್ಥಿಗಳಿಗೆ ಮಧ್ಯಮಫಲಿತಾಂಶ ವಿರುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ಕೃಷಿಕರಿಗೆ ಬೇಕಾದ ಸಲಕರಣೆಗಳು ದೊರೆ ಯುತ್ತವೆ. ಹಣಕಾಸಿನ ವಿಚಾರದಲ್ಲಿ ಪಾಲುದಾರರ ನಡುವೆ ಗೊಂದಲಗಳು ಏರ್ಪಡಬಹುದು.  ಕುಟುಂಬ ದಲ್ಲಿ ಸ್ವಲ್ಪಮಟ್ಟಿನ ಮಾತುಗಳಾಗಬಹುದು. ವಿದೇಶಿ ವ್ಯವಹಾರಗಳಿಗೆ ಹಿರಿಯರ ಮಾರ್ಗದರ್ಶನ ದೊರೆಯುತ್ತದೆ.
ಕನ್ಯಾ
 ನಿಮ್ಮ ಆಲೋಚನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ಅದಕ್ಕೊಂದು ಖಂಡಿತವಾದ ಉತ್ತರ ದೊರೆಯುತ್ತದೆ. ನಿಮ್ಮಯೋಜನೆಗಳಿಗೆ  ಕುಟುಂಬದ ವರ ಮತ್ತು ಸ್ನೇಹಿತರ ಸಹಕಾರ ಬಹಳ ಮುಖ್ಯ.ಹೊಸ ಜನರ ಪರಿಚಯವಾಗಿ ಅವರಿಂದ ಸಹಾಯಸಿಗುತ್ತದೆ. ಹಣದ ಒಳಹರಿವು ಕಡಿಮೆ ಇದ್ದರೂ ಜಾಣತನದಿಂದ  ನಿಭಾಯಿಸುವುದು ಬಹಳ ಮುಖ್ಯ. ಹಣ ಹೂಡಿಕೆ ಮಾಡುವಾಗ ಎಚ್ಚರವಿರಲಿ, ಮೋಸ ಮಾಡುವವರು ಬರುವರು. ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ಗಮನ  ಅಗತ್ಯ. ಸಂಗಾತಿಯ ಕಡೆಯವರು ನಿಮ್ಮನ್ನು ನಿರ್ಲಕ್ಷಿ ಸುವ ಸಂದರ್ಭವಿದೆ. ಸಿರಾಸ್ತಿ  ವಿಚಾರದಲ್ಲಿ ಹೆಚ್ಚಿನ ಮನಸ್ತಾಪಗಳುಬೇಡ. ಅವಿವಾಹಿತರುಪ್ರೇಮಪ್ರಸಂಗ ಗಳಲ್ಲಿ ಬೀಳುವ  ಸಂದರ್ಭವಿದೆ. ವಿದೇಶದಿಂದ ಬರುತ್ತಿರುವ ಹಣದ ಪ್ರಮಾಣಕಡಿಮೆಯಾಗಬಹುದು ಅಥವಾ ನಿಲ್ಲಬಹುದು.
ತುಲಾ
ಲೆಕ್ಕಪತ್ರದಲ್ಲಿ ಕೆಲಸ ಮಾಡುತ್ತಿರುವವರು  ಕೆಲಸವನ್ನು ಮುತುವರ್ಜಿಯಿಂದ ಮಾಡಲೇಬೇಕು , ಇಲ್ಲವಾದಲ್ಲಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗು ವಿರಿ. ಕರ ಕುಶಲಕರ್ಮಿಗಳಿಗೆ ಹೆಚ್ಚಿನ ವ್ಯವಹಾರವಾಗಿ ಆದಾಯ ಹೆಚ್ಚುತ್ತದೆ.ಉತ್ತಮವಾದ ಪೂರ್ವ ತಯಾರಿ ಯೊಂದಿಗೆ ಆರಂಭಿಸಿದ ಕೆಲಸಗಳು ಪೂರ್ಣಗೊಳ್ಳು ತ್ತವೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುತ್ತದೆ. ಕೃಷಿಕರಿಗೆ ಸದ್ಯದಲ್ಲಿಆದಾಯ ಹೆಚ್ಚುವಸಂದರ್ಭವಿದೆ, ಅದರಲ್ಲೂ ವಾಣಿಜ್ಯ ಬೆಳಗಾರರಿಗೆ ಆದಾಯ ಹೆಚ್ಚು ತ್ತದೆ. ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು.ಯೋಗ್ಯ ವಯಸ್ಕರಿಗೆ ವಿವಾಹಸಂಬಂಧಗಳು ಕೂಡಿ ಬರುತ್ತವೆ.  ಲೆವಾದೇವಿ ವ್ಯವಹಾರಗಳು ಅಷ್ಟು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಓದಿಗಾಗಿ ಹೆಚ್ಚು ಶ್ರಮ ವಹಿಸಬೇಕು. ವೈದ್ಯರುಗಳಿಗೆ ತುರ್ತು ಕೆಲಸಗಳು  ಒದಗಿ ಬರುವ ಸಂದರ್ಭವಿದೆ.
ವೃಶ್ಚಿಕ
ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಸಿದ್ಧತೆ ಗಳನ್ನು ಮಾಡಿಕೊಡುವಿರಿ. ನಿಮ್ಮ ಹೊಸ ವ್ಯವಹಾರ ಗಳಿಗೆ ತಂದೆ ತಾಯಿಯ ಕೃಪಾಶೀರ್ವಾದ ಸಿಗುತ್ತದೆ. ಚರ್ಮದ ವಸ್ತುಗಳನ್ನು ಮಾರಾಟ ಮಾಡುವವರಿಗೆ ವಿದೇಶಗಳಿಂದ ಬೇಡಿಕೆಬರುತ್ತದೆ.ಆಮದು ಮತ್ತು ರಫ್ತು ವ್ಯವಹಾರ ಮಾಡುವವರಿಗೆ ನಿಧಾನ ಗತಿಯ ವ್ಯವಹಾರವಿರುತ್ತದೆ. ಹೊಸ ಜನರ ಸಂಪರ್ಕಗಳಿಂದ ಹೊಸ ಸ್ನೇಹ ಉಂಟಾಗುತ್ತದೆ. ಹೆಚ್ಚು ರಾಜಕೀಯ ಚಟುವಟಿಕೆಯಲ್ಲಿ ಇರುವವರಿಗೆ ಬಿರುಸಿನ ಕಾರ್ಯಗ ಳಿರುತ್ತವೆ.ನಿಧಾನಗತಿಯಲ್ಲಿ ಸಾಗುತ್ತಿದ್ದ ಕೆಲಸಕಾರ್ಯ ಗಳು ತುಸು ವೇಗವನ್ನು ಪಡೆಯುತ್ತವೆ. ದ್ವಿದಳ ಧಾನ್ಯ ಗಳ ವ್ಯಾಪಾರಿಗಳಿಗೆ ವ್ಯಾಪಾರ ಜೋರಾಗಿರುತ್ತದೆ.  ಹಣಕಾಸಿನ ವಹಿವಾಟುಗಳನ್ನು ನೀವು ಸರಿಯಾಗಿ ಗಮನಿಸಿರಿ, ಆದಾಯ ಮಧ್ಯಮ ಗತಿಯಲ್ಲಿರುತ್ತದೆ. ಸರ್ಕಾರದಿಂದ ಸಿಗಬೇಕಾಗಿದ್ದ ಸೌಕರ್ಯಗಳು ಈಗ ಸಿಗುತ್ತವೆ.
ಧನು
ಸಮಯವನ್ನು ವ್ಯವಸ್ಥಿತ ರೀತಿಯಲ್ಲಿ ವಿನಯೋಗಿಸಿಕೊಂಡಾಗ ಅದರಲಾಭ ನಿಮಗೆಖಂಡಿತ ಆಗುತ್ತದೆ. ಮಕ್ಕಳಿಗೆ ಉನ್ನತ ವಿದ್ಯೆಯಲ್ಲಿ ಅವಕಾಶ ದೊರೆತು ಮನಸ್ಸಿಗೆ ಸಂತೋಷವಾಗುತ್ತದೆ. ಹಣದ  ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿಯಿಂದ ಹೆಚ್ಚು ಲಾಭವಿರುತ್ತದೆ, ಹಾಗೂ ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ.  ಹಿತ ಶತ್ರುಗಳನ್ನು ನೀವು  ಸೌಮ್ಯವಾಗಿಯೇ ಇದ್ದು ಮಟ್ಟಹಾಕುವಿರಿ.ವಿದೇಶದಲ್ಲಿ ಇರುವ ಮಕ್ಕಳನ್ನು ನೋಡಲು ಹೋಗಿ ಬರಬಹುದು. ವಿದ್ಯಾರ್ಥಿಗಳಿಗೆ ಮುನ್ನಡೆ ಇರುತ್ತದೆ. ಕೆಲವೊಂದು ಹಣಕಾಸಿನಋಣಗಳನ್ನು ಈಗ,ಪರಿಹಾರಮಾಡಿಕೊಳ್ಳ ಬಹುದು. ಸರ್ಕಾರಿ ಕೆಲಸಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ವೃತ್ತಿಯಲ್ಲಿ ಏಳಿಗೆಯನ್ನು ಕಾಣುವ ಸಾಧ್ಯತೆ ಇದೆ.  ಬಂಧುಗಳ ನಡುವಿನ  ಅನುಬಂಧ ಕಡಿಮೆಯಾಗುವ ಸಾಧ್ಯತೆ ಇದೆ.
ಮಕರ
 ಧಾರ್ಮಿಕ ವಿಚಾರಗಳಲ್ಲಿ ಸಾಧನೆ ಮಾಡಬೇಕೆನ್ನುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ.  ಸೇವಕ ವರ್ಗದವರಿಂದ ಹೆಚ್ಚಿನ ಅನುಕೂಲ ನಿಮಗೆ ದೊರೆಯುತ್ತದೆ.ವಾಹನದಬಿಡಿಭಾಗಗಳನ್ನುಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚಾಗಿ ಹಣ ಬರುತ್ತದೆ.  ಕಬ್ಬಿಣದ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.  ಜನ ನಾಯಕರುಗಳಿಗೆ ಜನ ಬೆಂಬಲ ದೊರೆಯುತ್ತದೆ. ಕಲಾವಿದರು ಗಳಿಗೆ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಹೊಸ ಆಸ್ತಿಯನ್ನು ಕೊಳ್ಳುವ ಮುಂಚೆ ದಾಖಲೆ ಪರಿಶೀಲನೆ ಅತಿ ಅಗತ್ಯ. ಸಹೋದ್ಯೋಗಿಗಳೊಡನೆ ಸಂಭಾಷಿಸುವಾಗ ಎಚ್ಚರ ಇರಲಿ. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ  ಆಗುತ್ತದೆ. ಹತ್ತಿ ಬಟ್ಟೆ ತಯಾರಕರಿಗೆ ಬೇಡಿಕೆ ಹೆಚ್ಚಾಗು ತ್ತದೆ. ಕಳೆದು ಹೋಗಿದ್ದ ಒಂದುವಸ್ತು  ದೊರೆತು ಸಂತೋಷವಾಗುತ್ತದೆ. ಧನದಾಯವು ಸಾಮಾನ್ಯ ಗತಿಯಲ್ಲಿರುತ್ತದೆ.
ಕುಂಭ
ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಸಮಸ್ಯೆ ಬರುವ ಸಾಧ್ಯತೆ ಇದೆ. ಹಾಗಾಗಿ ಅವರೊಡನೆ ಸ್ವಲ್ಪ ಸೂಕ್ಷ್ಮವಾಗಿ ವರ್ತಿಸಿರಿ. ನೆರೆಹೊರೆಯವರ ಕಿರಿಕಿರಿ ನಿಲ್ಲುವ ಸಾಧ್ಯತೆ ಇದೆ. ಅನಿವಾರ್ಯ ಸಮಯಗಳಲ್ಲಿ ಬಂಧು ಮಿತ್ರರ ಸಹಾಯ ಬೇಕಾಗು ವುದು ಹಾಗಾಗಿ ಅವರೊಡನೆ ಕಲಹ ಬೇಡ. ತೆರಿಗೆ ಸಂಗ್ರಹ ಅಧಿಕಾರಿ ಗಳಿಗೆ ಮೇಲಿನವರಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತವೆ. ಧನಾದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಕಣ್ಣಿನತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ.ಸರ್ಕಾರಿ ಕೆಲಸಕಾರ್ಯಗಳಲ್ಲಿ ಮಂದ ಗತಿ ಇರುತ್ತದೆ. ಗೋವಿನಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಬಂಧು ಗಳಲ್ಲಿ ಮಾಡಿದ ಸಾಲವನ್ನು ಮರುಪಾವತಿ ಮಾಡ ಬಹುದು. ಹೊಸ ಮನೆಯ ನಿರ್ಮಾಣಕ್ಕಾಗಿ ನೀವು ಮಾಡುತ್ತಿರುವ ಪ್ರಯತ್ನಕ್ಕೆ ಯಶಸ್ಸು ದೊರೆಯುತ್ತದೆ.
ಮೀನ
  ರಾಜಕಾರಣಿಗಳಿಗೆ ಅವರ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕೆಲವರಿಗೆ ನಾಯಕತ್ವದ ಸ್ಥಾನ ಸಿಗಬಹುದು.ಸಂಘಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಬೇಕಾದ ಅನುಕೂಲಗಳು ದೊರೆ ಯುತ್ತವೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಆಮದು ರಫ್ತು ಮಾಡುವವ ರಿಗೆ ಇದ್ದ ತೊಡಕುಗಳು ನಿವಾರಣೆಯಾಗುತ್ತದೆ. ನೀವು ಮಾಡಿದ ಕೆಲವು ತಪ್ಪುಗಳು ನಿಮ್ಮನ್ನು ಕಾಡಬಹುದು. ದನದಾಯವು ಮಾಧ್ಯಮ ಗತಿಯಲ್ಲಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಸವಲತ್ತು ದೊರೆಯಬಹುದು. ಉದಯೋನ್ಮುಖ ತಾರೆಯರಿಗೆ ನಟಿಸಲು ಹೆಚ್ಚು ಅವಕಾಶಗಳು ದೊರೆಯುತ್ತದೆ. ಸಾಹಸ ಕಲಾವಿದರು ಸಾಹಸ ಕಾರ್ಯವನ್ನು ಮಾಡುವಾಗ ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇದ್ದೆ ಇರುತ್ತದೆ. ಸ್ವಂತ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ.