ವಾರ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳನ್ನು ಮಟ್ಟಹಾಕುವ ಕಲೆ ಸಿದ್ಧಿಸುತ್ತದೆ
Published 1 ಸೆಪ್ಟೆಂಬರ್ 2024, 1:38 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಬಹಳ ಚುರುಕಾಗಿ ಕೆಲಸ ಮಾಡುವಿರಿ. ಆದಾಯ ಉತ್ತಮವಾಗಿರುತ್ತದೆ. ಬಂಧುಗಳ ಸಹಕಾರ ನಿಮ್ಮ ಕೆಲಸ ಕಾರ್ಯಗಳಿಗೆ ದೊರೆ ಯುತ್ತದೆ. ಭೂಮಿಯ ವ್ಯವಹಾರ ಮಾಡುವವ ರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಲಾಭ. ಸರ್ಕಾರಿ ನೌಕರರಿಗೆ ಆದಾಯ ಹೆಚ್ಚುತ್ತದೆ. ಗುಹ್ಯ ರೋಗಗಳಿರುವವರು ಹೆಚ್ಚು ಎಚ್ಚರಿಕೆ ವಹಿಸಿರಿ. ಸಂಗಾತಿಯಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.ಹಿರಿಯರು ನಿಮ್ಮ ವ್ಯವಹಾರದಲ್ಲಿ ಹಣಹೂಡಿಕೆ ಮಾಡುವುದ ರಿಂದ ನಿಮಗೆ ಲಾಭ ಬರುತ್ತದೆ. ಉದ್ದಿಮೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುಅನುಕೂಲತೆಗಳು ದೊರೆಯುತ್ತದೆ.ಇನ್ನೂ ಹೆಚ್ಚಿನ ಒಳಿತಿಗಾಗಿ ದುರ್ಗಾ ಮತ್ತು ಗಣೇಶರನ್ನು ಆರಾಧಿಸಿರಿ.
( ಅಶ್ವಿನಿ ಭರಣಿ ಕೃತಿಕ 1)
01 ಸೆಪ್ಟೆಂಬರ್ 2024, 01:38 IST
ವೃಷಭ
ಬಹಳ ಗೌರವಯುತವಾಗಿ ನಡೆದು ಕೊಳ್ಳುವಿರಿ. ಸಮಾಜದಿಂದಲೂ ಈಗ ಗೌರವ ದೊರೆಯುತ್ತದೆ. ಆದಾಯವು ಕಡಿಮೆಇರುತ್ತದೆ. ಚುರುಕಾದ ನಡುವಳಿಕೆಯಿಂದ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ದಿನಸಿ ವ್ಯಾಪಾರಿಗಳಿಗೆ ಬಹಳ ಲಾಭವಿದೆ. ಜಮೀನಿನ ಮೇಲಿದ್ದ ಸರ್ಕಾರಿ ತೊಡಕುಗಳು ಈಗ ನಿವಾ ರಣೆ ಯಾಗುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬ ಹುದು. ಸಂಗಾತಿಯಿಂದ ಸ್ವಲ್ಪ ಆದಾಯ ಸಹ ಬರುತ್ತದೆ. ಕೃಷಿಯಿಂದ ಆದಾಯ ವಿರುತ್ತದೆ. ಅನಿರೀಕ್ಷಿತವಾಗಿ ಧನಸಹಾಯ ಒದಗುವ ಸಾಧ್ಯತೆ ಇದೆ.ಇನ್ನೂ ಹೆಚ್ಚಿನ ಒಳಿತಿಗಾಗಿ ಲಕ್ಷ್ಮಿ ಮತ್ತು ಗಣೇಶರನ್ನು ಆರಾಧಿಸಿರಿ.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
01 ಸೆಪ್ಟೆಂಬರ್ 2024, 01:38 IST
ಮಿಥುನ
ಶೌರ್ಯವು ನಿಮ್ಮಲ್ಲಿ ಮೈತುಂಬಿರುತ್ತದೆ.ದೃಢ ನಿರ್ಧಾರಗಳಿಂದ ಮುನ್ನುಗ್ಗುವಿರಿ. ಹಿರಿಯರ ಸಹಕಾರಗಳು ನಿಮಗೆ ದೊರೆಯುತ್ತವೆ.ಸಂಸಾರ ದಲ್ಲಿ ಸ್ವಲ್ಪ ಗೋಜುಲುಗಳು ಬರಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರು ತ್ತದೆ. ಕೃಷಿಯಿಂದ ನಿರೀಕ್ಷಿತ ಆದಾಯ ಈಗ ಬರ ದಿರಬಹುದು. ಸಂಗಾತಿ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ.ವೃತ್ತಿಯಲ್ಲಿ ಶ್ರಮಕ್ಕೆ ತಕ್ಕ ಫಲವಿ ರುತ್ತದೆ. ಕೃಷಿಯಿಂದ ಲಾಭವಿರುತ್ತದೆ. ಹಿರಿಯ ರೊಡನೆ ಈಗ ಮನಸ್ತಾಪ ಮಾಡಿಕೊಳ್ಳುವುದು ಬೇಡ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಹೆಚ್ಚಿನ ಒಳಿತಿ ಗಾಗಿ ಪರಮೇಶ್ವರನನ್ನು ಧ್ಯಾನ ಮಾಡಿರಿ.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
01 ಸೆಪ್ಟೆಂಬರ್ 2024, 01:38 IST
ಕರ್ಕಾಟಕ
ಮನಸ್ಸು ಸ್ವಲ್ಪ ಆನಂದದಾಯಕವಾಗಿರುತ್ತದೆ. ಆದಾಯವು ಉತ್ತಮವಾಗಿರುತ್ತದೆ. ವ್ಯವಹಾ ರಕ್ಕೆ ಸಂಬಂಧಿಸಿದಂತೆ ಉತ್ತಮ ವಾರ್ತೆಗಳು ಕೇಳಿ ಬರುತ್ತವೆ. ದಿನಸಿ ವ್ಯಾಪಾರಗಳಿಗೆ ಹೆಚ್ಚು ಲಾಭ. ಸರ್ಕಾರಿ ಅಧಿಕಾರಿಗಳಿಗೆ ಹೊಸ ಆದಾ ಯದ ಮೂಲ ಒದಗಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಸೋದರಿಯರಿಂದ ಅಡ್ಡಿ ಬರುವ ಸಾಧ್ಯತೆ ಇದೆ, ಇವರಿಂದಾಗಿ ನಿಮ್ಮ ಸಂಸಾರ ದಲ್ಲಿ ಗೊಂದಲಗಳು ಬರಬಹುದು. ವಿದ್ಯಾರ್ಥಿಗ ಳಿಗೆ ಕಡಿಮೆ ಮಟ್ಟದ ಫಲಿತಾಂಶವಿರುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಸಾಧನೆ ತೋರಲು ಆಗುವುದಿಲ್ಲ. ಆರೋಗ್ಯದಲ್ಲಿಸುಧಾರಣೆಯನ್ನು ಕಾಣಬಹುದು. ಹೆಚ್ಚಿನ ಒಳಿತಿಗಾಗಿ ಶನೇಶ್ಚರನ ಧ್ಯಾನವನ್ನು ಮಾಡಿರಿ.
( ಪುನರ್ವಸು 4 ಪುಷ್ಯ ಆಶ್ಲೇಷ)
01 ಸೆಪ್ಟೆಂಬರ್ 2024, 01:38 IST
ಸಿಂಹ
ಆತ್ಮ ಗೌರವ ಬಹಳ ಹೆಚ್ಚಾಗಿಯೇ ಇರುತ್ತದೆ. ಆದಾಯವು ನಿರೀಕ್ಷೆಗಿಂತ ಕಡಿಮೆ ಇರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಸೋದರಿ ಸಹಾಯ ಮಾಡಿದರು ಸಹ ಅವರ ಅಪೇಕ್ಷೆ ಬೇರೆಯದೇ ಇರುತ್ತದೆ. ಕೃಷಿಯಿಂದ ಆದಾಯ ಹೆಚ್ಚಿಗೆ ಬರುತ್ತದೆ. ಭೂಮಿ ವ್ಯವಹಾರ ಮಾಡು ವವರಿಗೆ ಮತ್ತು ಕಟ್ಟಡ ನಿರ್ಮಾಣ ಮಾಡುವ ವರಿಗೆ ಹೆಚ್ಚಿನ ಆದಾಯವಿರುತ್ತದೆ. ವಿದ್ಯಾರ್ಥಿ ಗಳಿಗೆ ಉತ್ತಮಫಲಿತಾಂಶ ಪಡೆಯುವ ಯೋಗ ವಿದೆ. ಸ್ನಾಯುಗಳ ಸೆಳೆತ ಕೆಲವರನ್ನು ಕಾಡಬ ಹುದು. ಸಂಗಾತಿಯ ಪ್ರಶ್ನೆಗಳಿಗೆ ಈಗ ಉತ್ತರ ಕೊಡಲು ಕಷ್ಟವಾದೀತು.ವೃತ್ತಿಯಲ್ಲಿ ಗುರುತಿನ ವರ ಮೂಲಕ ಅನುಕೂಲವಾಗುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಹಾಗೂ ಗೌರಿ ಧ್ಯಾನ ಮಾಡಿರಿ.
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
01 ಸೆಪ್ಟೆಂಬರ್ 2024, 01:38 IST
ಕನ್ಯಾ
ನಿಮ್ಮ ನಿರ್ಧಾರಗಳು ಹಾಗೂ ನಡೆಗಳ ಬಗ್ಗೆ ನಿಮಗೆ ಗೊಂದಲವಿರುತ್ತದೆ. ಆದಾಯವು ಕಡಿಮೆಯಾಗಿದ್ದು ಹಣ ನಿರ್ವಹಣೆ ಸರಿಯಾಗಿ ಮಾಡಬೇಕಾಗಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಬಂಧುಗಳಿಂದ ಸಹಾಯ ದೊರೆತರೂ ನಿಮ್ಮದೇ ಆದ ತಪ್ಪುಗಳಿಂದ ಕೆಲಸ ಕಾರ್ಯಗಳು ಅಲ್ಲೇ ನಿಲ್ಲುತ್ತವೆ. ಹಿರಿಯರ ಆಸ್ತಿ ಅಥವಾ ಹಣ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಹಳೆಯ ಕಾಯಿಲೆಗಳು ಮರುಕಳಿಸುವ ಸಾಧ್ಯತೆ ಗಳಿವೆ. ಸಂಗಾತಿಯ ಧೋರಣೆ ಬೇಸರ ತರಿಸು ತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಯನ್ನು ಕಾಣಬಹುದು. ಹೆಚ್ಚಿನ ಒಳಿತಿಗಾಗಿ ಸುಬ್ರಹ್ಮಣ್ಯ ಮತ್ತು ಲಕ್ಷ್ಮಿ ಯರನ್ನು ಧ್ಯಾನ ಮಾಡಿರಿ.
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
01 ಸೆಪ್ಟೆಂಬರ್ 2024, 01:38 IST
ತುಲಾ
ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಭೂಮಿ ವ್ಯವಹಾರಗಳಿಂದ ಹಣ ವನ್ನು ಮಾಡಬಹುದು. ಆದಾಯ ಸಾಮಾನ್ಯ ಮಟ್ಟದಲ್ಲಿರುತ್ತದೆ. ಕೆಲವೊಂದು ಬರಬೇಕಾದ ಹಣಗಳು ಬರುವುದು ನಿಧಾನವಾಗಬಹುದು. ಕೆಲಸ ಕಾರ್ಯಗಳನ್ನು ಪ್ರಮುಖರು ವಿರೋಧಿಸ ಬಹುದು. ಕುಟುಂಬದಲ್ಲಿ ಶಾಂತಿಯೊಂದಿಗೆ ಸಂಘರ್ಷವೂ ಇರುತ್ತದೆ. ಮಕ್ಕಳ ಏಳಿಗೆಗಾಗಿ ಸಾಕಷ್ಟು ಶ್ರಮಪಡುವಿರಿ. ಕೀಲು ನೋವುಗಳು ಮೂತ್ರಕೋಶದ ತೊಂದರೆಗಳು ಸ್ವಲ್ಪ ಕಾಣಿಸ ಬಹುದು. ಸಂಗಾತಿಯ ಕಠಿಣನುಡಿಗಳು ಅಚ್ಚರಿ ಮೂಡಿಸುತ್ತದೆ.ಪಾಲುದಾರರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು.ಗಣಿಗಾರಿಕೆ ಮಾಡುವವ ರಿಗೆ ಲಾಭವಿರುತ್ತದೆ. ಹೆಚ್ಚಿನ ಒಳಿತಿಗಾಗಿ ಲಕ್ಷ್ಮಿ ಧ್ಯಾನ ಮಾಡಿರಿ.
( ಚಿತ್ತಾ 3 4 ಸ್ವಾತಿ ವಿಶಾಖ 1 2 3)
01 ಸೆಪ್ಟೆಂಬರ್ 2024, 01:38 IST
ವೃಶ್ಚಿಕ
ಬಹಳ ಗೌರವಯುತವಾದ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ಕಡಿಮೆ ಅನಿಸಿದರೂ ತೊಂದರೆ ಇರುವುದಿಲ್ಲ. ಶತ್ರುಗಳು ನಿಮ್ಮ ತಂಟೆಗೆ ಬರಲು ಸಾಕಷ್ಟು ಯೋಚನೆ ಮಾಡುವರು. ಸಾಂಪ್ರದಾಯಿಕ ಕೃಷಿ ಬಹಳ ಅನುಕೂಲ ಮಾಡಿಕೊಡುತ್ತದೆ. ವಿದೇಶದಲ್ಲಿ ಓದಲು ಇಚ್ಚಿಸಿದ್ದವರಿಗೆ ಈಗ ಅವಕಾಶಗಳು ದೊರೆಯುತ್ತವೆ. ಮಾಂಸ ತಂಡಗಳಲ್ಲಿ ಸ್ವಲ್ಪ ತೊಂದರೆ ಇದ್ದವರಿಗೆ ಈಗ ಸುಧಾರಣೆಯನ್ನು ಕಾಣಬಹುದಾಗಿದೆ. ಸಂಗಾತಿಯಿಂದ ಎಲ್ಲ ರೀತಿಯ ಸಹಕಾರಗಳು ನಿಮಗೆದೊರೆಯುತ್ತವೆ. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ಸುಬ್ರಹ್ಮಣ್ಯರನ್ನು ಧ್ಯಾನ ಮಾಡಿರಿ.
( ವಿಶಾಖಾ 4 ಅನುರಾಧ ಜೇಷ್ಠ)
01 ಸೆಪ್ಟೆಂಬರ್ 2024, 01:38 IST
ಧನು
ಸ್ವಲ್ಪ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ. ಆದಾಯ ಕಡಿಮೆ ಇದ್ದರೂ ತೀರಾ ತೊಂದರೆ ಇರುವುದಿಲ್ಲ. ಪತ್ತೆದಾರಿ ಕೆಲಸ ಮಾಡುವವರಿಗೆ ಸಾಕಷ್ಟು ಜಯವಿರುತ್ತದೆ. ಶತ್ರುಗಳನ್ನು ಮಟ್ಟಹಾಕುವ ಕಲೆ ನಿಮಗೆ ಸಿದ್ಧಿಸುತ್ತದೆ. ಆಸ್ತಿ ವಿವಾದಗಳಲ್ಲಿ ಹೊಸ ತಕರಾರುಗಳು ಬರ ಬಹುದು. ವಿದೇಶದಲ್ಲಿರುವವರು ಸ್ಥಿರಾಸ್ತಿ ಮಾಡಿಕೊಳ್ಳಬಹುದು. ಕ್ರೀಡಾಪಟುಗಳಿಗೆ ಸಾಧನೆ ಮಾಡುವ ಕಾಲವಿದು. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಯಶಸ್ಸು ಇರುತ್ತದೆ. ಹೊಟ್ಟೆಯಲ್ಲಿ ವಾಯುಪ್ರಕೋಪ ಕಾಡಬಹುದು. ಸಂಗಾತಿಕಡೆಯವರಿಂದ ನಿಮಗೆ ಅನುಕೂಲವಾಗಲಿದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ದುರ್ಗೆಯರನ್ನು ಆರಾಧಿಸಿರಿ.
( ಮೂಲ ಪೂರ್ವಾಷಾಢ ಉತ್ತರಾಷಾಢ 1 )
01 ಸೆಪ್ಟೆಂಬರ್ 2024, 01:38 IST
ಮಕರ
ಮನಸ್ಸು ಒಂದು ರೀತಿ ಗೊಂದಲ ಮಯವಾಗಿರುತ್ತದೆ. ಆದಾಯ ಕಡಿಮೆ ಇದ್ದರೂ ನಿರ್ವಹಣಾ ಶಕ್ತಿ ನಿಮಗಿರುತ್ತದೆ. ವಿದೇಶದಲ್ಲಿ ಇವೆಂಟ್ ಕಾರ್ಯಕ್ರಮಮಾಡುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಗೊಂದಲ ಮೂಡಬಹುದು. ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಯಶಸ್ಸು ಈಗ ದೊರೆಯುತ್ತದೆ. ತಲೆನೋವು ಈಗ ಕೆಲವರನ್ನು ಕಾಡಬಹುದು. ಸಂಗಾತಿಯಿಂದ ನಿಮಗೆ ಸಾಕಷ್ಟು ಸಹಕಾರ ಮತ್ತು ಸಹಾಯಗಳು ದೊರೆಯುತ್ತವೆ. ನವೀನ ರೀತಿಯ ಅಡುಗೆಯನ್ನು ಮಾಡುವ ಭಟ್ಟರುಗ ಳಿಗೆ ಬೇಡಿಕೆ ಬಂದು ಆದಾಯ ಹೆಚ್ಚುತ್ತದೆ.
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
01 ಸೆಪ್ಟೆಂಬರ್ 2024, 01:38 IST
ಕುಂಭ
ದೃಢ ನಿರ್ಧಾರದಿಂದ ಮುಂದೆ ನಡೆಯುವಿರಿ. ಮಾಡುವಾಗ ಎಚ್ಚರಿಕೆ ಇರಲಿ, ಅದರಲ್ಲೂ ಯುವಕರು ಮಾತನಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿರಿ. ವಿದೇಶಿ ವ್ಯವಹಾರ ಮಾಡು ವವರ ಆದಾಯ ಹೆಚ್ಚುತ್ತದೆ. ಬಂಧುಗಳಿಂದ ಹಿರಿಯರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸಂಸಾರದಲ್ಲಿ ಆನಂದವಿರುತ್ತದೆ. ಸಾಹಸ ಕ್ರೀಡೆ ಗಳನ್ನು ಪ್ರದರ್ಶನ ಮಾಡುವವರಿಗೆ ಬೇಡಿಕೆ ಬಹಳಷ್ಟು ಬರುತ್ತದೆ. ಶೀತ ಸಂಬಂಧಿ ಕಾಯಿಲೆ ಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಪಾಲು ದಾರಿಕೆಯ ವ್ಯವಹಾರಗಳಲ್ಲಿ ಎಚ್ಚರವಹಿಸಿರಿ.
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
01 ಸೆಪ್ಟೆಂಬರ್ 2024, 01:38 IST
ಮೀನ
ಕೆಲವೊಮ್ಮೆ ನಿಮ್ಮ ನಡವಳಿಕೆಗಳೇ ನಿಮಗೆ ಸಮಸ್ಯೆಯಾಗುತ್ತದೆ. ಆದಾಯ ಮಂದ ಗತಿಯಲ್ಲಿ ಇರುತ್ತದೆ. ಹಿರಿಯರ ಸಹಕಾರ ನಿಮಗಿದ್ದರೂ ನೀವು ಅದನ್ನು ಸದುಪಯೋಗ ಮಾಡಿಕೊಳ್ಳುವುದಿಲ್ಲ. ಹೊಸ ಆಸ್ತಿಯನ್ನು ಮಾಡಿಕೊಳ್ಳಬೇಕೆಂಬ ಹಂಬಲವಿದ್ದು ಅದರ ಕಡೆಗೆ ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಕಾಲವಿದು. ಕಣ್ಣಿನ ತೊಂದರೆ ಅಥವಾ ಮೆದುಳಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯಿಂದ ಕಡಿಮೆ ಪ್ರಮಾಣದ ಆರ್ಥಿಕ ಸಹಕಾರ ದೊರೆಯುತ್ತದೆ. ಉದ್ಯೋಗ ದಲ್ಲಿ ಹಿರಿಯರ ಮಾತಿನಿಂದ ಆಗಬೇಕಾಗಿದ್ದ ತೊಂದರೆ ತಪ್ಪುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಮತ್ತು ಲಕ್ಷ್ಮಿ ಯರನ್ನು ಆರಾಧನೆ ಮಾಡಿರಿ.
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
01 ಸೆಪ್ಟೆಂಬರ್ 2024, 01:38 IST