ವಾರ ಭವಿಷ್ಯ | 2025 ನ.30ರಿಂದ ಡಿ.6ರವರೆಗೆ: ಅವಿವಾಹಿತರಿಗೆ ಕಂಕಣ ಭಾಗ್ಯ
Published 29 ನವೆಂಬರ್ 2025, 22:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಮುನ್ನುಗ್ಗುವ ಉತ್ಸಾಹವಿರುತ್ತದೆ. ಆದಾಯವು ಸ್ವಲ್ಪಮಟ್ಟಿಗೆ ಉತ್ತಮವಾಗುತ್ತದೆ. ಬಂಧುಗಳಿಂದ ನಿಮಗೆ ಸ್ವಲ್ಪ ಅನುಕೂಲವಾಗುತ್ತದೆ. ಆಸ್ತಿಯನ್ನು ಕೊಳ್ಳಲು ಬೇಕಾದ ಹಣಕಾಸಿನ ಮಾರ್ಗ ಗೋಚರಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುವುದಿಲ್ಲ. ಕೃಷಿಗಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುವಿರಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನು ಕೈಗೆತ್ತಿಕೊಳ್ಳುವಿರಿ.
29 ನವೆಂಬರ್ 2025, 22:30 IST
ವೃಷಭ
ವಾರದ ಆರಂಭದಲ್ಲಿ ಬಹಳ ಚುರುಕಾಗಿರುವಿರಿ. ಆದಾಯವು ಸಾಧಾರಣವಾಗಿರುತ್ತದೆ. ಗುರುಹಿರಿಯರಿಂದ ಅನುಕೂಲಗಳಾಗುತ್ತವೆ. ಆಸ್ತಿ ವಿಚಾರದಲ್ಲಿ ಬಹಳ ಆತುರ ಬೇಡ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಕಷ್ಟ. ನರಸಂಬಂಧಿ ದೋಷಗಳಿದ್ದವರು ಎಚ್ಚರ ವಹಿಸಿ. ಸಂಗಾತಿ ಕಡೆಯವರಿಂದ ಸಾಕಷ್ಟು ಅನುಕೂಲಗಳಾಗುತ್ತವೆ. ವ್ಯವಹಾರಕ್ಕೆ ತಾಯಿಯಿಂದ ಮಾರ್ಗದರ್ಶನದ ಜತೆಗೆ ಸ್ವಲ್ಪ ಹಣ ಸಹಾಯವೂ ಸಿಗುತ್ತದೆ.
29 ನವೆಂಬರ್ 2025, 22:30 IST
ಮಿಥುನ
ಬಹಳ ಬುದ್ಧಿವಂತಿಕೆಯಿಂದ ವ್ಯವಹಾರ ಮಾಡುವಿರಿ. ಆದಾಯವು ನಿರೀಕ್ಷೆಯ ಮಟ್ಟಕ್ಕೆ ಬರುತ್ತದೆ. ಬಂಧುಗಳಿಂದ ಸೂಕ್ತ ಸಹಕಾರ ಸಿಗುವುದಿಲ್ಲ. ಭೂಮಿಯ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನವನ್ನು ಕೊಡಿ. ಮೂಳೆಯ ನೋವು ಕಾಡಬಹುದು. ದಲ್ಲಾಳಿಗಳ ಆದಾಯದಲ್ಲಿ ಹೆಚ್ಚಳವಿರುತ್ತದೆ.
29 ನವೆಂಬರ್ 2025, 22:30 IST
ಕರ್ಕಾಟಕ
ಆದಾಯವು ಕಡಿಮೆ ಇರುತ್ತದೆ. ಮಹಿಳೆಯರ ಕೆಲವು ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿರುತ್ತದೆ. ಸಂಬಂಧಿಕರ ಮಧ್ಯಸ್ಥಿಕೆಯಿಂದ ಕುಟುಂಬದ ಕೆಲವು ಸಮಸ್ಯೆಗಳು ದೂರವಾಗುತ್ತವೆ. ಜನಸಾಮಾನ್ಯರಿಗೆ ಉಪಕಾರ ಮಾಡಿ ಸಂತೋಷಪಡುವಿರಿ. ಪ್ರಾಮಾಣಿಕ ಪ್ರಯತ್ನದಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸುವಿರಿ.
29 ನವೆಂಬರ್ 2025, 22:30 IST
ಸಿಂಹ
ಬಹಳ ಗಂಭೀರವಾದ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಸಮಾಜದಿಂದ ಗೌರವವನ್ನು ನಿರೀಕ್ಷೆ ಮಾಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಇತರೆ ಚಟುವಟಿಕೆಗಳಿಂದ ಆದಾಯ ವೃದ್ಧಿ ಮಾಡಿಕೊಳ್ಳಬಹುದು. ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ ಇರುತ್ತದೆ. ಕೆಲವು ಅರೆಕಾಲಿಕ ನೌಕರರಿಗೆ ಈಗ ನೌಕರಿ ಖಾಯಂ ಆಗುವ ಸಾಧ್ಯತೆ ಇದೆ. ವಿದೇಶದಲ್ಲಿ ಉದ್ಯೋಗವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.
29 ನವೆಂಬರ್ 2025, 22:30 IST
ಕನ್ಯಾ
ವಾರದ ಆರಂಭದಲ್ಲಿ ಬಹಳ ಆಲಸಿತನವಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ಬಂಧುಗಳಲ್ಲಿ ಕೆಲವರು ನಿಮ್ಮನ್ನು ಸಹಕರಿಸಿದರೂ, ಹಲವರು ವಿರೋಧಿಸುವರು. ಪುಸ್ತಕ ವ್ಯಾಪಾರಿಗಳಿಗೆ ಲಾಭ ಹೆಚ್ಚು. ಹಣಕಾಸಿನ ವ್ಯವಹಾರ ಮಾಡುವವರಿಗೆ ಹಳೆಯ ಬಾಕಿ ವಸೂಲಾಗುತ್ತದೆ. ಅಧ್ಯಯನದಲ್ಲಿ ಆಸಕ್ತಿಯು ಸ್ವಲ್ಪ ಕಡಿಮೆಯಾಗುವ ಸಂದರ್ಭವಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ತಕ್ಕಗೌರವ ದೊರೆಯುತ್ತದೆ. ಸಂಗಾತಿಯ ಸಹಕಾರ ಸಕಾಲದಲ್ಲಿ ದೊರೆಯುತ್ತದೆ.
29 ನವೆಂಬರ್ 2025, 22:30 IST
ತುಲಾ
ವ್ಯವಹಾರದ ಬುದ್ಧಿವಂತಿಕೆ ನಿಮ್ಮಲ್ಲಿರುತ್ತದೆ. ವೃತ್ತಿಯಲ್ಲಿ ಅನುಕೂಲತೆ ಹೆಚ್ಚುತ್ತದೆ. ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪ ಎದುರಾಗುವ ಸಂದರ್ಭವಿದೆ. ಜಮೀನಿನಲ್ಲಿ ಹೆಚ್ಚಿನ ಕೃಷಿ ಕೆಲಸಗಳನ್ನು ಆರಂಭಿಸುವಿರಿ. ಹಣಕಾಸು ಸಂಸ್ಥೆಗಳಿಂದ ಅಪೇಕ್ಷಿತ ಸಾಲ ದೊರೆಯುತ್ತದೆ. ವಿದೇಶಿ ಕಂಪನಿಯೊಂದು ನಿಮಗೆ ಪಾಲುದಾರಿಕೆಗೆ ಆಹ್ವಾನ ನೀಡಬಹುದು. ರಾಜಕೀಯ ವ್ಯಕ್ತಿಗಳಿಗೆ ನಿರೀಕ್ಷಿಸಿದ್ದ ಸ್ಥಾನಮಾನಗಳು ಸಿಗದಿರಬಹುದು.
29 ನವೆಂಬರ್ 2025, 22:30 IST
ವೃಶ್ಚಿಕ
ಯಾವುದೇ ಕೆಲಸಗಳಲ್ಲಿ ಅತಿಯಾದ ಆತುರ ಬೇಡ. ಆದಾಯವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಮಕ್ಕಳಿಂದ ನಿರೀಕ್ಷಿತ ಸಹಾಯ ದೊರೆಯುವುದಿಲ್ಲ. ಹಿರಿಯರಿಂದ ಹಣ ಸಹಾಯ ಸಿಗುತ್ತದೆ. ಹೂವುಗಳ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ, ಆದಾಯ ಹೆಚ್ಚುತ್ತದೆ. ಮಕ್ಕಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ರಾಜಕಾರಣಿಗಳಿಗೆ ಆಪಾದನೆಗಳಿಂದ ಮಾನಸಿಕ ಒತ್ತಡಗಳು ಹೆಚ್ಚಬಹುದು.
29 ನವೆಂಬರ್ 2025, 22:30 IST
ಧನು
ವಾರದ ಆರಂಭದಲ್ಲಿ ಹೆಚ್ಚಿನ ಉತ್ಸಾಹ ಇರುವುದಿಲ್ಲ. ಆದಾಯವು ಕಡಿಮೆ ಇರುತ್ತದೆ. ತಾಯಿಯ ಕಡೆಯ ಸಂಬಂಧಿಕರು ನಿಮಗೆ ಸಹಕಾರ ನೀಡುವವರು. ಕೃಷಿ ಜಮೀನು ವ್ಯಾಪಾರ ಮಾಡುವರಿಗೆ ಆದಾಯ ಹೆಚ್ಚುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿಯಾಗಿ, ಆರ್ಥಿಕವಾಗಿ ಚೇತರಿಸಿ ಕೊಳ್ಳುವಿರಿ. ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ರೀತಿಯ ಅಧಿಕಾರ ದೊರೆತು ಮೇಲ್ದರ್ಜೆಗೇರುವ ಸಂದರ್ಭವಿದೆ. ಕೃಷಿ ಕಾರ್ಯಗಳಿಗಾಗಿ ಹೆಚ್ಚು ಖರ್ಚು ಮಾಡಲೇಬೇಕಾಗುತ್ತದೆ.
29 ನವೆಂಬರ್ 2025, 22:30 IST
ಮಕರ
ವೃತ್ತಿ ಶ್ರದ್ಧೆ ನಿಮ್ಮಲ್ಲಿ ಇರುತ್ತದೆ. ಆದಾಯದಲ್ಲಿ ಚೇತರಿಕೆಯನ್ನು ಕಾಣಬಹುದು. ಯಾರ ವಿರೋಧವನ್ನು ಲೆಕ್ಕಿಸದೆ ನಿಮ್ಮ ಪಾಡಿಗೆ ನೀವು ಮುನ್ನುಗ್ಗುವಿರಿ. ಕೃಷಿಯಿಂದ ಲಾಭವಿರುತ್ತದೆ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಸಂಗಾತಿಯ ಸಹಕಾರದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿ ಬರುವ ಸಾಧ್ಯತೆಗಳಿವೆ. ಕೃಷಿ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ. ತೆರಿಗೆ ತಜ್ಞರಿಗೆ ಈಗ ಆದಾಯ ಹೆಚ್ಚುತ್ತದೆ.
29 ನವೆಂಬರ್ 2025, 22:30 IST
ಕುಂಭ
ಮನಸ್ಸಿನಲ್ಲಿ ಹೊಸ ಚೇತನವಿರುತ್ತದೆ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ಅಂತಹ ಪ್ರಗತಿ ಇರುವುದಿಲ್ಲ. ಮಕ್ಕಳಿಂದ ಹಿರಿಯರಿಗೆ ಬೇಸರ ಉಂಟಾಗಬಹುದು. ಪ್ರೀತಿ ಪ್ರೇಮಗಳ ವಿಚಾರದಲ್ಲಿ ಬಹಳ ಎಚ್ಚರದಿಂದ ಇರುವುದು ಒಳ್ಳೆಯದು. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ.
29 ನವೆಂಬರ್ 2025, 22:30 IST
ಮೀನ
ಧಾನ್ಯಗಳ ಸಗಟು ವ್ಯಾಪಾರವನ್ನು ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದ್ದೇ ಇರುತ್ತದೆ. ಕೈಗೆತ್ತಿಕೊಂಡ ಕೆಲಸಗಳನ್ನು ಶಕ್ತ್ಯಾನುಸಾರ ಮಾಡಿ ಪೂರೈಸುವಿರಿ. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಶೀತ ಬಾಧೆ ನಿಮ್ಮನ್ನು ಕಾಡಬಹುದು. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳ ಸಹಾಯದಿಂದ ವೃತ್ತಿಯಲ್ಲಿ ಮೇಲೇರುವ ಅವಕಾಶವಿದೆ.
29 ನವೆಂಬರ್ 2025, 22:30 IST