ದಿನ ಭವಿಷ್ಯ: 22 ಆಗಸ್ಟ್ 2025 ಶುಕ್ರವಾರ- ಇನ್ನೊಬ್ಬರನ್ನು ಹೊಣೆ ಮಾಡಬೇಡಿ
Published 21 ಆಗಸ್ಟ್ 2025, 18:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಲವು ದಿನಗಳ ನಂತರ ತಾಯಿಯೊಂದಿಗೆ ಕಳೆದ ಸಮಯ ಮನಸ್ಸಿಗೆ ಮುದ ನೀಡಲಿದೆ. ಮನೆಯಲ್ಲಿನ ಸಣ್ಣ ಮಕ್ಕಳ ಆರೋಗ್ಯದಲ್ಲಿನ ಏರುಪೇರು ಕಳವಳ ತಂದೊಡ್ಡಬಹುದು. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ.
ವೃಷಭ
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಎದುರಾಗುವ ಏರಿಳಿತದ ನಡುವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಪರಿಸ್ಥಿತಿಯು ಕ್ಷಣಿಕ ಆದ್ದರಿಂದ ಯಾವುದೇ ವಿಚಾರಗಳಿಗೂ ಬೇಸರಪಡುವ ಅವಶ್ಯಕತೆ ಇಲ್ಲ.
ಮಿಥುನ
ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ಈಡೇರಲಿವೆ. ಔದ್ಯೋಗಿಕ ಕ್ಷೇತ್ರದಲ್ಲಿ ತಲೆದೋರುವ ಸಮಸ್ಯೆಗಳು ಕಾರ್ಯ ಕ್ಷಮತೆಯನ್ನು ಬಯಸುವುದು. ಹಣದ ಜೊತೆ ಜನಬಲವೂ ಅವಶ್ಯ .
ಕರ್ಕಾಟಕ
ಹೆಚ್ಚಿನ ಎಲ್ಲಾ ಕೆಲಸಗಳು ಸಿಬ್ಬಂದಿ ವರ್ಗದವರ ಸಹಕಾರದಿಂದ ವ್ಯವಸ್ಥಿತವಾಗಿ ಕೈಗೂಡಲಿದೆ. ಹೋಟೆಲ್ ನಿರ್ವಾಹಕರಿಗೆ ಉತ್ತಮ ದಿನವಾಗಿರುತ್ತದೆ.
ಸಿಂಹ
ಅನಾರೋಗ್ಯದ ಸ್ಥಿತಿಗೆ ವೈದ್ಯಕೀಯ ಮತ್ತು ಧಾರ್ಮಿಕ ಎರಡೂ ಸೇರಿದರೆ ಅನುಕೂಲವಿರುವುದು. ಹೆಚ್ಚಿನ ಪ್ರಯೋಜನವಿರುವುದಿಲ್ಲ. ಹೊಸಬರ ಪರಿಚಯ ವ್ಯವಹಾರಕ್ಕೆ ಅನುಕೂಲವೆನಿಸಲಿದೆ.
ಕನ್ಯಾ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಬೇಜವಾಬ್ದಾರಿತನದಿಂದ ಉದ್ಯೋಗಕ್ಕೆ ಸಂಬಂಧಿಸಿದಂಥ ಯಂತ್ರಗಳ ಹಾನಿ ಉಂಟಾಗಬಹುದು.
ತುಲಾ
ಜೀವನ ಸುಲಭವಾಗಿ ಸಾಗುವಂಥ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಿರಿ. ಆಫೀಸಿನ ಕೆಲಸದ ಮೇರೆಗೆ ವಿದೇಶ ಪ್ರಯಾಣ ಮಾಡಬೇಕಾಗಬಹುದು. ಟಿಂಬರ್ ವ್ಯಾಪಾರಿಗಳಿಗೆ ವರಮಾನ ಇರುವುದು.
ವೃಶ್ಚಿಕ
ಮೇಲಧಿಕಾರಿಗಳು ನಿಮ್ಮನ್ನು ಪರೀಕ್ಷಿಸುವ ಕಾರಣವಾಗಿ ಜವಾಬ್ದಾರಿ ನಿಮಗೊಪ್ಪಿಸಲಿದ್ದಾರೆ. ಉತ್ತೀರ್ಣರಾಗುವುದು ಪ್ರಯತ್ನದ ಫಲವಾಗಿರುತ್ತದೆ. ಬಿಳಿ ಬಣ್ಣ ಶುಭ ತರಲಿದೆ.
ಧನು
ವಸ್ತುವನ್ನು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರಾಟ ಮಾಡುವುದು ಲಾಭದ ಜೊತೆ ಸಂತೋಷ ತರುವುದು. ಸ್ನೇಹ ಸಂಬಂಧಗಳಿಗೆ ಪ್ರಾಮುಖ್ಯತೆ ಸಿಕ್ಕಿ, ಜೀವನ ಭದ್ರವಾಗಿರುತ್ತದೆ.
ಮಕರ
ಸುಖಗಳ ಮೇಲಿನ ಮೋಹವನ್ನು ಬಿಟ್ಟು ಆಂತರಿಕ ಸಂತೋಷ ಹುಡುಕಿ. ಇಷ್ಟು ದಿನದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹತ್ತಿ ವ್ಯಾಪಾರಿಗಳು ಉತ್ತಮ ಗಳಿಕೆಯನ್ನು ನಿರೀಕ್ಷಿಸಬಹುದು.
ಕುಂಭ
ಕಚೇರಿಯಲ್ಲಿನ ಕೆಲಸದ ಒತ್ತಡಗಳಿಗೆ ಇನ್ನೊಬ್ಬರನ್ನು ಹೊಣೆ ಮಾಡಬೇಡಿ. ಕಾರ್ಯಸಾಧನೆಗೆ ಕಳೆದುಕೊಂಡ ಸ್ನೇಹಿತನ ಸಹಾಯ ಅಗತ್ಯವೆನ್ನಿಸುವುದು. ಕೃಷಿ ಪದಾರ್ಥದ ದಲ್ಲಾಳಿಗೆ ನಷ್ಟವಾಗಬಹುದು.
ಮೀನ
ಸಾಹಿತ್ಯಾಸಕ್ತರ ವಲಯದಲ್ಲಿ ಗಂಭೀರ ಚರ್ಚೆ ನಡೆಸಿ ಪಾಂಡಿತ್ಯ ಪ್ರದರ್ಶನ ಆಗಲಿದೆ. ಆರ್ಥಿಕ ಶಕ್ತಿಯನ್ನು ಅರಿತುಕೊಂಡು ಕನಸಿನ ಯೋಜನೆಗಳಿಗೆ ಸ್ಪಷ್ಟ ರೂಪ ನೀಡುವುದು ಸರಿಯಾದ ಮಾರ್ಗ.