ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ 2 ಬಾರಿ ಭೂಕಂಪ

Published 21 ಮಾರ್ಚ್ 2024, 2:29 IST
Last Updated 21 ಮಾರ್ಚ್ 2024, 2:40 IST
ಅಕ್ಷರ ಗಾತ್ರ

ಪಶ್ಚಿಮ ಕಮೆಂಗ್: ಅರುಣಾಚಲ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಎರಡು ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. 

ಬೆಳಗಿನ ಜಾವ 1.49ರ ಹೊತ್ತಿಗೆ ಪಶ್ಚಿಮ ಕಮೆಂಗ್‌ ಭಾಗದಲ್ಲಿ 3.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ಅಕ್ಷಾಂಶ 27.38 ಮತ್ತು ರೇಖಾಂಶ 92.77 ರಲ್ಲಿ 10 ಕಿಲೋಮೀಟರ್ ಆಳದಲ್ಲಿದೆ.

ಇದಾಗಿ ಎರಡೇ ಗಂಟೆಗಳ ಬಳಿಕ ಬೆಳಗಿನ ಜಾವ 3.40ರ ಹೊತ್ತಿಗೆ ಪೂರ್ವ ಕಮೆಂಗ್‌ ಪ್ರದೇಶದಲ್ಲಿ 3.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು  ಅಕ್ಷಾಂಶ 27.46 ಮತ್ತು ರೇಖಾಂಶ 92.82ರಲ್ಲಿ 5 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ಭೂಕಂಪನಶಾಸ್ತ್ರ ಕೇಂದ್ರವು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಎರಡು ಬಾರಿ ಭೂಮಿ ಕಂಪಿಸಿದರೂ ತಕ್ಷಣಕ್ಕೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಮಹಾರಾಷ್ಟ್ರದಲ್ಲೂ ಎರಡು ಬಾರಿ ಕಂಪಿಸಿದ ಭೂಮಿ

ಮುಂಬೈ: ಮಹಾರಾಷ್ಟ್ರದ ಹಿಂಗೋಲಿ ಪ್ರದೇಶದಲ್ಲಿ 10 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ.

ಗುರುವಾರ ಬೆಳಿಗ್ಗೆ 6.08ರ ಹೊತ್ತಿಗೆ ಮೊದಲ ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್‌ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದೆ.

10 ನಿಮಿಷಗಳ ಬಳಿಕ 6.19ರ ಹೊತ್ತಿಗೆ ಮತ್ತೆ ಭೂಮಿ ಕಂಪಿಸಿದ್ದು, 3.6ರಷ್ಟು ತೀವ್ರತೆ ದಾಖಲಾಗಿದೆ. ತಕ್ಷಣಕ್ಕೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT