ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಸ್‌ಪೋರ್ಟ್‌ ಪರಿಶೀಲನೆಗೆ ಬಂದಿದ್ದ ಮಹಿಳೆಗೆ ಗುಂಡೇಟು; ಹರಿದಾಡಿದ CCTV ದೃಶ್ಯ

Published 9 ಡಿಸೆಂಬರ್ 2023, 3:08 IST
Last Updated 9 ಡಿಸೆಂಬರ್ 2023, 3:08 IST
ಅಕ್ಷರ ಗಾತ್ರ

ಲಖನೌ(ಉತ್ತರ ಪ್ರದೇಶ): ಪಾಸ್‌ಪೋರ್ಟ್‌ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರ ತಲೆಗೆ ಆಕಸ್ಮಿಕವಾಗಿ ಗುಂಡು ತಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಶ್ರತ್ ಜಹಾನ್‌ ಎಂಬ ಮಹಿಳೆ ತಮ್ಮ ಮಗನೊಂದಿಗೆ ಅಲಿಗಢ ಜಿಲ್ಲೆಯ ಉಪರ್ಕೋಟ್ ಕೊತ್ವಾಲಿ ಪೊಲೀಸ್‌ ಠಾಣೆಗೆ ಬಂದಿದ್ದು, ಪಾಸ್‌ಪೋರ್ಟ್‌ ಪರಿಶೀಲನೆಗಾಗಿ ಸಂಬಂಧಪಟ್ಟ ಅಧಿಕಾರಿಗೆ ಕಾಯುತ್ತಾ ಸರದಿಯಲ್ಲಿ ನಿಂತಿದ್ದರು. ಈ ವೇಳೆ ಅಲ್ಲೇ ನಿಂತಿದ್ದ ಮನೋಜ್‌ ಶರ್ಮಾ ಎಂಬ ಪೊಲೀಸ್‌ ಅಧಿಕಾರಿ ಕಾನ್‌ಸ್ಟೆಬಲ್‌ ಒಬ್ಬರಿಂದ ಪಿಸ್ತೂಲ್‌ ಅನ್ನು ತೆಗೆದುಕೊಂಡು ಅದಕ್ಕೆ ಲೋಡ್‌ ಮಾಡಿ ಟ್ರಿಗರ್‌ ‌‌ಎಳೆದಿದ್ದಾರೆ. ಈ ವೇಳೆ ಗುಂಡು ನೇರವಾಗಿ ಮಹಿಳೆಗೆ ತಾಕಿದೆ.

ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪೊಲೀಸ್‌ ಅಧಿಕಾರಿ ಮನೋಜ್ ಕುಮಾರ್ ಪರಾರಿಯಾಗಿದ್ದು, ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್‌ ಅನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT