ಎರಡೇ ವರ್ಷ ಮಂತ್ರಿ: ಪುಟ್ಟರಂಗಶೆಟ್ಟಿ

7

ಎರಡೇ ವರ್ಷ ಮಂತ್ರಿ: ಪುಟ್ಟರಂಗಶೆಟ್ಟಿ

Published:
Updated:

ಚಾಮರಾಜನಗರ: ‘ಎರಡು ವರ್ಷ ಮಂತ್ರಿಯಾದ ಬಳಿಕ ಸಚಿವ ಸ್ಥಾನವನ್ನು ಹನೂರು ಶಾಸಕ ನರೇಂದ್ರ ಅವರಿಗೆ ಬಿಟ್ಟುಕೊಡಬೇಕು ಎಂದು ಸಿದ್ದರಾಮಯ್ಯ ನನಗೆ ಹೇಳಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಇಲ್ಲಿ ಮಂಗಳವಾರ ಹೇಳಿದರು.

ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ ಎಂದು ಹೇಳಿದ್ದೇನೆ’ ಎಂದರು.

ಪುಟ್ಟರಂಗಶೆಟ್ಟಿ ಅವರು ಎರಡು ವರ್ಷ ಸಚಿವರಾಗಿರುತ್ತಾರೆ. ನಂತರ ಆರ್‌.ನರೇಂದ್ರ ಮಂತ್ರಿಯಾಗಲಿದ್ದಾರೆ ಎಂದು ಸಂಸದ ಆರ್‌.ಧ್ರುವನಾರಾಯಣ ಅವರು ಹನೂರಿನಲ್ಲಿ ಹೇಳಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ, ‘ಅವರನ್ನು ಸಚಿವರನ್ನಾಗಿ ಮಾಡಲಿ. ಅದನ್ನು ನಾನು ವಿರೋಧಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೈತ್ರಿ ಸರ್ಕಾರದಲ್ಲಿ ಕೆಲವು ಸಮಸ್ಯೆಗಳಿವೆ. ಅದನ್ನೆಲ್ಲ ಬಗೆಹರಿಸಿದರೆ, ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸುವುದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !