ಅಬುಧಾಬಿ ಪುಸ್ತಕ ಮೇಳಕ್ಕೆ ಭಾರತ ಗೌರವ ಅತಿಥಿ

ಶುಕ್ರವಾರ, ಏಪ್ರಿಲ್ 26, 2019
24 °C

ಅಬುಧಾಬಿ ಪುಸ್ತಕ ಮೇಳಕ್ಕೆ ಭಾರತ ಗೌರವ ಅತಿಥಿ

Published:
Updated:

ಅಬು ಧಾಬಿ: ಮುಂದಿನ ವಾರ ಇಲ್ಲಿ ನಡೆಯಲಿರುವ 29ನೇ ಅಬುಧಾಬಿ ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾರತ ಭಾಗಿಯಾಗಲಿದೆ. ಈ ಪುಸ್ತಕ ಮೇಳದಲ್ಲಿ 50 ರಾಷ್ಟ್ರಗಳ 1000ಕ್ಕೂ ಅಧಿಕ ಪ್ರಕಾಶಕರು ಪಾಲ್ಗೊಳ್ಳಲಿದ್ದಾರೆ.

ಏ.24ರಿಂದ 30ರವರೆಗೆ ನಡೆಯಲಿರುವ ಮೇಳದಲ್ಲಿ ಲೇಖಕರು, ಪ್ರಕಾಶಕರು, ಸಾಹಿತಿಗಳು, ಕಲಾವಿದರನ್ನು ಒಳಗೊಂಡ 100 ಸದಸ್ಯರ ನಿಯೋಗವನ್ನು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಮುನ್ನಡೆಸಲಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ಸ್ಮಿತ್‌ ಪಂತ್ ತಿಳಿಸಿದರು.

ಸಾಹಿತಿಗಳಾದ ಪ್ರೀತಿ ಶೆಣೈ, ದೀಪಕ್ ಉನ್ನಿಕೃಷ್ಣನ್, ಉರ್ದು ಬರಹಗಾರ ರತನ್ ಸಿಂಗ್ ಮತ್ತು ಹಿಂದಿ ಲೇಖಕ ದೇವಿಕ್ ರಮೇಶ್ ಭಾರತ ಪ್ರತಿನಿಧಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !