ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 8ಕ್ಕೇರಿದ ಮಂಕಿಪಾಕ್ಸ್‌ ಪ್ರಕರಣ: ದೆಹಲಿಯಲ್ಲಿ 3ನೇ ವರದಿ

Last Updated 2 ಆಗಸ್ಟ್ 2022, 11:41 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ವೈರಾಣು ಸೋಂಕು ಇರುವುದು ದೃಢಪಟ್ಟಿದೆ.

ಈ ವ್ಯಕ್ತಿಗೂ ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆ ಇರಲಿಲ್ಲ. ದೇಶದ ರಾಜಧಾನಿಯಲ್ಲಿ ಇದು ಮೂರನೇ ಪ್ರಕರಣ ಹಾಗೂ ದೇಶದಲ್ಲಿ ಈವರೆಗಿನ ಪ್ರಕರಣಗಳ ಸಂಖ್ಯೆ 8ಕ್ಕೇರಿದೆ.

35 ವರ್ಷದಸೋಂಕಿತ ವ್ಯಕ್ತಿಯನ್ನು ಮಂಗಳವಾರ ದೆಹಲಿ ಸರ್ಕಾರಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಧಾನಿಯಲ್ಲಿ ಮೊದಲ ಪ್ರಕರಣವಾಗಿ ವರದಿಯಾಗಿದ್ದ ಮಂಕಿಪಾಕ್ಸ್‌ ಸೋಂಕಿತ ಸಂಪೂರ್ಣ ಗುಣಮುಖವಾಗಿದ್ದು, ಭಾನುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT