ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರನ್ನು ಸಂಪರ್ಕಿಸುವ ಅದ್ಭುತ ಮಾಧ್ಯಮ ರೇಡಿಯೊ–ಮೋದಿ ಬಣ್ಣನೆ

Last Updated 13 ಫೆಬ್ರುವರಿ 2022, 13:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವ ರೇಡಿಯೊ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರೇಡಿಯೊ ಕೇಳುಗರಿಗೆ ಶುಭಾಶಯ ಕೋರಿದ್ದಾರೆ. ರೇಡಿಯೊ ಈಗಲೂ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು ಜನರನ್ನು ಸಂಪರ್ಕಿಸಲು ಇರುವ ಒಂದು ಅದ್ಭುತ ಮಾಧ್ಯಮವಾಗಿದೆ ಎಂದು ಬಣ್ಣಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2012ರಲ್ಲಿ ರೇಡಿಯೊ ದಿನವನ್ನು ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಿತು. ಫೆಬ್ರುವರಿ 13 ರಂದು ವಿಶ್ವ ರೇಡಿಯೊ ದಿನ ಆಚರಿಸಲಾಗುತ್ತದೆ.

‘ಎಲ್ಲಾ ರೇಡಿಯೊ ಕೇಳುಗರು ಮತ್ತು ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಅಭಿವ್ಯಕ್ತಿಗೆ ಈ ಮಾಧ್ಯಮವನ್ನು ಬಳಸಿಕೊಳ್ಳುತ್ತಿರುವ ಎಲ್ಲರಿಗೂ ವಿಶ್ವ ರೇಡಿಯೊ ದಿನದ ಶುಭಾಶಯಗಳು. ಜನರ ಮನೆ, ಪ್ರಯಾಣ ಮತ್ತು ದೈನಂದಿನ ಕಾರ್ಯಗಳಲ್ಲಿ ರೇಡಿಯೊ ಒಂದು ಅವಿಭಾಜ್ಯ ಅಂಗವಾಗಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT