ಶುಕ್ರವಾರ, ಆಗಸ್ಟ್ 12, 2022
27 °C

ಪಶ್ಚಿಮಬಂಗಾಳ: 15 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಯಪುರ: ಪಶ್ಚಿಮ ಬಂಗಾಳದಲ್ಲಿ ಸುಮಾರು 15 ವರ್ಷಗಳ ಹಿಂದೆ ಕಾಣೆಯಾಗಿದ್ದ 55 ವರ್ಷದ ಬುದ್ದಿಮಾಂದ್ಯ ಮಹಿಳೆಯನ್ನು ಛತ್ತೀಸ್‌ಗಡ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು(ಸಿಜಿಎಸ್‌ಎಲ್‌ಎಸ್‌ಎ) ಭಾನುವಾರ ಅವರ ಕುಟುಂಬದ ವಶಕ್ಕೆ ನೀಡಿದೆ  ಎಂದು ಅಧಿಕಾರಿಗಳು ತಿಳಿಸಿದರು. 

ಪಶ್ಚಿಮ ಬಂಗಾಳದಲ್ಲಿ ಸುಮಾರು 15 ವರ್ಷಗಳ ಹಿಂದೆ ಲಕ್ಷ್ಮಿ  ಪಾರ್ವಿ ಅವರು ತಮ್ಮ ಕುಟುಂಬದವರಿಂದ ಬೇರ್ಪಟ್ಟಿದ್ದರು. ಆದರೆ ಅವರು ಹೇಗೋ ಛತ್ತೀಸ್‌ಗಡ ತಲುಪಿದ್ದಾರೆ ಎಂದು ಸಿಜಿಎಸ್‌ಎಲ್‌ಎಸ್‌ಎನ ಅಧಿಕಾರಿ ಸಿದ್ದಾರ್ಥ್‌ ಅರ್ಗವಾಲ್‌ ಅವರು ಹೇಳಿದರು.

‘2017ರಲ್ಲಿ ಛತ್ತೀಸ್‌ಗಡದ ಕೋರ್ಬಾ ಜಿಲ್ಲೆಯ ಕಾನ್‌ಸ್ಟೇಬಲ್ ಒಬ್ಬರು ‌ಪಾರ್ವತಿ ಬೇನ್‌ ಎಂಬ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಸೆಂದ್ರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರು ಮಾನಸಿಕ ಆರೋಗ್ಯ ಸಂಬಂಧಿತ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ವರ್ಷ ಜೂನ್‌ ತಿಂಗಳಲ್ಲಿ ಆಸ್ಪತ್ರೆಯು ಮಹಿಳೆಯ ಚಿಕಿತ್ಸೆಯ ಪೂರ್ಣಗೊಂಡಿದೆ ಎಂದು ಸಿಜಿಎಸ್‌ಎಲ್‌ಎಸ್‌ಎಗೆ ಪತ್ರ ಬರೆದಿತ್ತು. ಇದರಲ್ಲಿ ಚಿಕಿತ್ಸೆ ಪೂರ್ಣಗೊಂಡ ಬಳಿಕ  ಮಹಿಳೆ ತಾನು ದಕ್ಷಿಣ 24 ಪರಗಣದ ನಿವಾಸಿ ಎಂದು ಬಹಿರಂಗ ಪಡಿಸಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

‘ಪಶ್ಚಿಮ ಬಂಗಾಳದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಲಕ್ಷ್ಮಿ ಪಾರ್ವಿಯ ಮಾಹಿತಿ ಮತ್ತು ಛಾಯಚಿತ್ರವನ್ನು ಕಳುಹಿಸಲಾಯಿತು. ಛಾಯಾಚಿತ್ರದ ಸಹಾಯದೊಂದಿಗೆ ಎರಡು ಇಲಾಖೆಗಳು ಜಂಟಿಯಾಗಿ ಲಕ್ಷ್ಮಿ ಅವರನ್ನು ಮನೆಗೆ ಸೇರಿಸಿವೆ’ ಎಂದು ಅವರು ತಿಳಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು