ಮಂಗಳವಾರ, ಜನವರಿ 31, 2023
27 °C
ಬಿಹಾರ, ಮೇಘಾಲಯದ ಒಂದೊಂದು ಹಳ್ಳಿಗಳನ್ನು ದತ್ತು ಪಡೆ ಸಂಸದ ರಾಕೇಶ್ ಸಿನ್ಹಾ

ಪ್ರಧಾನಿ ಮೋದಿ ಭಾಷಣ ಸ್ಫೂರ್ತಿ: ಹಳ್ಳಿಗಳಿಗೆ ಸ್ಯಾನಿಟರಿ ಪ್ಯಾಡ್, ಸೋಪ್‌ ಪೂರೈಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬಡ ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಎಲ್ಲೆಡೆ ಸ್ಯಾನಿಟರಿ ಪ್ಯಾಡ್ ದೊರೆಯುವಂತೆ ಮಾಡಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ' ಎಂಬ ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವದ ಭಾಷಣದಿಂದ ಸ್ಪೂರ್ತಿಪಡೆದ ಬಿಜೆಪಿಯ ಸಂಸದ ರಾಕೇಶ್ ಸಿನ್ಹಾ, ಬಿಹಾರ ಮತ್ತು ಮೇಘಾಲಯ ರಾಜ್ಯದ ತಲಾ ಒಂದೊಂದು ಹಳ್ಳಿಗಳನ್ನು ದತ್ತು ಪಡೆದು, ಸಾವಿರಾರು ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸೋಪ್‌ಗಳನ್ನು ಕಳುಸಿದ್ದಾರೆ.

ಬಿಹಾರದಿಂದ ರಾಜ್ಯಸಭಾ ಸದಸ್ಯರಾಗಿರುವ ರಾಕೇಶ್‌ ಸಿನ್ಹಾ ಈ ಬಗ್ಗೆ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ‘ನಿಮ್ಮ ಮಾತುಗಳಿಂದ ಸ್ಪೂರ್ತಿ ಪಡೆದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರ ಹಿಂದುಳಿದಿರುವ ಮೇಘಾಲಯದ ಕೊಂಗ್‌ತಾಂಗ್ ಮತ್ತು ಬಿಹಾರದ ಬೆಗಸುರಾಯ್‌ ಸಮೀಪದ ಬೈರಾಪುರ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ‘ ಎಂದು ವಿವರಿಸಿದ್ದಾರೆ.

‘ಈ ಎರಡು ಹಳ್ಳಿಗಳ ಮಹಿಳೆಯರಿಗೆ ಸೋಪ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಪೂರೈಸುತ್ತಿದ್ದೇನೆ. ಕೊಂಗ್‌ತಾಂಗ್‌ನಲ್ಲಿ  97 ಕುಟುಂಬಗಳಿಗೆ, 3 ಸಾವಿರ ಸೋಪ್ ಮತ್ತು 3600 ಸ್ಯಾನಿಟರಿ ಪ್ಯಾಡ್‌ಗಳನ್ನು ಕಳುಹಿಸುತ್ತಿದ್ದೇನೆ. ಬೈರಾಪುರದಲ್ಲಿ 300 ಕುಟುಂಬಗಳಿಗೆ, 2 ಸಾವಿರ ಸೋಪ್‌ಗಳು ಮತ್ತು 4 ಸಾವಿರ ಸ್ಯಾನಿಟರಿ ಪ್ಯಾಡ್‌ಗಳನ್ನು ಕಳುಹಿಸುತ್ತಿರುವುದಾಗಿ’ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು