ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್ಐಎ ಮಾಜಿ ಅಧಿಕಾರಿ ಜಲರಾಜ್ ಶ್ರೀವಾತ್ಸವ ವಿರುದ್ಧ ಸಿಬಿಐ ಮೊಕದ್ದಮೆ

Last Updated 28 ಆಗಸ್ಟ್ 2020, 15:41 IST
ಅಕ್ಷರ ಗಾತ್ರ

ನವದೆಹಲಿ: ನಿಯಮಬಾಹಿರವಾಗಿ ವೊಡಾಫೋನ್ ಸಂಸ್ಥೆಯಿಂದ ಕರೆ ದಾಖಲೆ ವಿವರಗಳನ್ನು (ಸಿಡಿಆರ್) ಪಡೆದಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮಾಜಿ ಎ.ಎಸ್.ಪಿ ಜಲರಾಜ್ ಶ್ರೀವಾತ್ಸವ ವಿರುದ್ದ ಸಿಬಿಐ ಪ್ರಕರಣ ದಾಖಲಿಸಿದೆ.

ಎನ್.ಐ.ಎ ನೀಡಿದ ದೂರು ಆಧರಿಸಿ ಸಿಬಿಐ ಕ್ರಮ ಜರುಗಿಸಿದೆ. ಪ್ರಕರಣದ ಹಿಂದೆಯೇ ಅಧಿಕಾರಿಯನ್ನು ಅವರ ಮಾತೃ ಇಲಾಖೆ ಬಿ.ಎಸ್.ಎಫ್.ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವಾಲಯದ ಅನುಮೋದನೆ ದೊರೆತ ನಂತರ ಪ್ರಕರಣ ದಾಖಲಿಸಲಾಗಿದೆ. 2017 ಮತ್ತು 2018ರಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎ.ಎಸ್.ಪಿ) ಆಗಿದ್ದ ಶ್ರೀವಾತ್ಸವ ಎರಡು ಫೋನ್ ಸಂಖ್ಯೆಗಳಿಗೆ ಸಂಬಂಧಿಸಿ ಕರೆ ದಾಖಲೆ ವಿವರಗಳನ್ನು ಎರಡು ಸಂದರ್ಭದಲ್ಲಿ ಪಡೆದುಕೊಂಡಿದ್ದರು. ಮೂರನೇ ಬಾರಿ ವಿಫಲರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT