ಬುಧವಾರ, ಮಾರ್ಚ್ 29, 2023
27 °C

ಪರೀಕ್ಷಾ ಅಕ್ರಮ ಪತ್ತೆ: ಸಿಬಿಎಸ್‌ಇಯಿಂದ ಅತ್ಯಾಧುನಿಕ ದತ್ತಾಂಶ ವಿಶ್ಲೇಷಣೆ ಬಳಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯಾವುದೇ ಗೊಂದಲ, ಅಕ್ರಮಗಳಿಲ್ಲದೇ ನ್ಯಾಯಸಮ್ಮತವಾಗಿ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಅತ್ಯಾಧುನಿಕ ದತ್ತಾಂಶ ವಿಶ್ಲೇಷಣೆ ವಿಧಾನವನ್ನು ಅಳವಡಿಸಿಕೊಳ್ಳಲು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಂದಾಗಿದೆ.

ಗೊಂದಲ, ಪರೀಕ್ಷಾ ಅಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಸಾಧ್ಯತೆ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಈ ನೂತನ ವಿಶ್ಲೇಷಣಾ ವಿಧಾನ ಬಳಸಲು ಮಂಡಳಿ ನಿರ್ಧರಿಸಿದೆ.

‘ಪರೀಕ್ಷೆಗಳನ್ನು ಪ್ರಮಾಣೀಕೃತ ಪದ್ಧತಿಯಂತೆ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು. ಅಕ್ರಮಗಳನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. ಇದಕ್ಕಾಗಿ ಬಾಹ್ಯ ವೀಕ್ಷಕರು, ಫ್ಲೈಯಿಂಗ್‌ ಸ್ಕ್ಯಾಡ್ಸ್‌ ನೇಮಕ ಮಾಡಲಾಗುವುದು. ಸಿ.ಸಿ.ಟಿವಿ ಗಳನ್ನು ಬಳಸಲಾಗುವುದು’ ಎಂದು ಸಿಬಿಎಸ್‌ಇ ಐಟಿ ವಿಭಾಗದ ನಿರ್ದೇಶಕ ಅಂತರಿಕ್ಷ್ ಜೊಹ್ರಿ ಹೇಳಿದ್ದಾರೆ.

‘ಕಳೆದ ಜನವರಿಯಲ್ಲಿ ನಡೆದ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯ (ಸಿಟಿಇಟಿ) ದತ್ತಾಂಶಗಳನ್ನು ಬಳಸಿ ಪ್ರಾಯೋಗಿಕವಾಗಿ ವಿಶ್ಲೇಷಣೆ ನಡೆಸಲಾಗಿತ್ತು. ಸೆಂಟ್ರಲ್‌ ಸ್ಕ್ವೇರ್‌ ಫೌಂಡೇಷನ್‌ ಹಾಗೂ ಪ್ಲೇಪವರ್ ಲ್ಯಾಬ್ಸ್‌ ಈ ವಿಶ್ಲೇಷಣೆಗೆ ಬೇಕಾದ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದವು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು