ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹೇತರ ಸಂಬಂಧ ಆರೋಪ: ಛತ್ತೀಸ್‌ಗಡದಲ್ಲಿ ಪುರುಷ, ಮಹಿಳೆಯ ನಗ್ನ ಮೆರವಣಿಗೆ

Last Updated 14 ಜೂನ್ 2022, 14:21 IST
ಅಕ್ಷರ ಗಾತ್ರ

ರಾಯ್‌ಪುರ:ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ವಿವಾಹಿತ ಪುರುಷ ಮತ್ತು ಮಹಿಳೆಯೊಬ್ಬರನ್ನು ನಗ್ನ ಮೆರವಣಿಗೆ ನಡೆಸಿದ ಘಟನೆ ಛತ್ತೀಸ್‌ಗಡದ ಕೊಂಡಗಾಂವ್ ಜಿಲ್ಲೆಯ ಉರಿಂದಬೆಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂತ್ರಸ್ತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಜೂನ್ 11ರಂದು ಘಟನೆ ನಡೆದಿತ್ತು. ಘಟನೆ ಬೆನ್ನಲ್ಲೇ ತನಿಖೆಗಾಗಿ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿಯು ಬೇರೊಬ್ಬ ಮಹಿಳೆ ಜತೆಗಿರುವುದನ್ನು ನೋಡಿದ ಪತ್ನಿ ತಕ್ಷಣವೇ ತಮ್ಮ ಸಂಬಂಧಿಕರೂ ಸೇರಿದಂತೆ ಹಲವರನ್ನು ಕರೆಸಿಕೊಂಡಿದ್ದರು. ಅವರೆಲ್ಲ ಸೇರಿ ಇಬ್ಬರನ್ನೂ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT