ಬುಧವಾರ, ಮೇ 12, 2021
18 °C

ಕಾಂಗ್ರೆಸ್‌ ಸಂಸದರಾದ ತರೂರ್‌, ಚೌಧರಿಗೆ ಕೋವಿಡ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದೆ.

‘ನನಗೆ, ನನ್ನ ತಾಯಿ ಹಾಗೂ ಸಹೋದರಿಗೂ ಕೋವಿಡ್‌–19 ದೃಢಪಟ್ಟಿದೆ’ ಎಂದು ಅವರು ಬುಧವಾರ ಟ್ವೀಟ್‌ ಮಾಡಿದ್ದಾರೆ.

‘ಕೋವಿಡ್‌ ವಿರುದ್ಧ ಹೋರಾಡಲು ಸಜ್ಜಾಗಿದ್ದೇನೆ. ವಿಶ್ರಾಂತಿ, ಸಾಕಷ್ಟು ದ್ರವ ಪದಾರ್ಥಗಳ ಸೇವನೆ, ಹಬೆ ತೆಗೆದುಕೊಳ್ಳುವಂತಹ ಕ್ರಮಗಳನ್ನು ಅನುಸರಿಸುತ್ತಿರುವೆ. 85 ವರ್ಷದ ತಾಯಿ, ಸಹೋದರಿಯರ ಸ್ಥಿತಿ ಭಿನ್ನವಾಗಿಲ್ಲ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಅಧಿರ್‌ ರಂಜನ್‌ ಚೌಧರಿ ಅವರಿಗೂ ಕೋವಿಡ್‌ ದೃಢಪಟ್ಟಿದೆ.

‘ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ವರ್ಚುವಲ್‌ ವ್ಯವಸ್ಥೆ ಮೂಲಕವೇ ಪ್ರಚಾರ ಕಾರ್ಯ ಕೈಗೊಳ್ಳುವೆ’ ಎಂದು ಚೌಧರಿ ಹೇಳಿದ್ದಾರೆ. ಗುರುವಾರ 6ನೇ ಹಂತದ ಮತದಾನ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು