ಸೋಮವಾರ, ಡಿಸೆಂಬರ್ 5, 2022
19 °C

ಡಾ. ಬಿ.ಆರ್‌.ಅಂಬೇಡ್ಕರ್‌ ಭಾರತದ ಮೊದಲ ಸ್ತ್ರೀವಾದಿ: ಶಶಿ ತರೂರ್‌

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಭಾರತದ ಮೊದಲ ಸ್ತ್ರೀವಾದಿ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅಭಿಪ್ರಾಯ ಪಟ್ಟರು. ಇಂದಿನ ರಾಜಕೀಯದಲ್ಲಿರುವ ಪ್ರಗತಿಪರ ಚಿಂತನೆಗಳನ್ನು ದಶಕಗಳ ಹಿಂದೆಯೇ ಪ್ರತಿಪಾದಿಸಿದ್ದರು ಎಂದರು.

ಗೋವಾದಲ್ಲಿ ನಡೆಯುತ್ತಿರುವ 'ಗೋವಾ ಪರಂಪರೆಯ ಉತ್ಸವ'ದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ತರೂರ್‌ ಪಾಲ್ಗೊಂಡಿದ್ದರು. ತಮ್ಮ ಇತ್ತೀಚಿನ 'ಅಂಬೇಡ್ಕರ್‌: ಅ ಲೈಫ್‌' ಪುಸ್ತಕದ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

1920, 30, 40ರಲ್ಲೇ ಅಂಬೇಡ್ಕರ್‌ ಮಹಿಳಾವಾದಿ ಭಾಷಣಗಳನ್ನು ಮಾಡಿದ್ದರು. ಇಂದು ಪ್ರಗತಿಪರ ಚಿಂತನೆಗಳು ಎನ್ನಲಾಗುತ್ತಿರುವ ವಿಚಾರಗಳನ್ನು ಅವರು ಅಂದೇ ಪ್ರಸ್ತುತ ಪಡಿಸಿದ್ದರು ಎಂದರು.

ಅಂಬೇಡ್ಕರ್‌ ಅವರು ಮಹಿಳೆಯರಿಗೆ ಬಲವಂತದ ವಿವಾಹವಾಗದಂತೆ ಒತ್ತಾಯಿಸಿದ್ದರು. ಸಣ್ಣ ವಯಸ್ಸಿಗೆ ಮದುವೆಯಾಗದಂತೆ, ಸಣ್ಣ ವಯಸ್ಸಿನಲ್ಲೇ ಮಗು ಮಾಡಿಕೊಳ್ಳದಂತೆ ಒತ್ತಾಯಿಸಿದ್ದರು. ತಮ್ಮ ಪತಿಗೆ ಸರಿಸಮನಾಗಿ ನಿಲ್ಲುವಂತೆ ಸಲಹೆ ನೀಡಿದ್ದರು ಎಂದು ತರೂರ್‌ ಹೇಳಿದರು.

ಅಂಬೇಡ್ಕರ್‌ ಮಹಿಳಾ ಸಿಬ್ಬಂದಿ ಮತ್ತು ನೌಕರರ ಪರ ಹೋರಾಟ ನಡೆಸಿದ್ದರು. ಮಹಿಳೆಯರ ಪರ ಚಿಂತನೆಯನ್ನು ಪುರುಷನೊಬ್ಬ 80-90 ವರ್ಷಗಳ ಹಿಂದೆಯೇ ಬೆಳೆಸಿಕೊಂಡಿದ್ದುದು ಅವಿಸ್ಮರಣೀಯ ಎಂದರು.

ಅಂಬೇಡ್ಕರ್‌ ಅವರನ್ನು ದಲಿತ ನಾಯಕನನ್ನಾಗಿ ನೋಡಬೇಕು ಎಂಬ ಒಲವಿದೆ. ಅವರು ರಾಷ್ಟ್ರದ ಪ್ರಧಾನ ದಲಿತ ನಾಯಕ. ಅವರು 20ನೇ ವಯಸ್ಸಿನಲ್ಲಿರುವಾಗಲೇ ಪ್ರಭಾವಶಾಲಿಯಾಗಿದ್ದರು. ನಂತರ ಹೆಚ್ಚೆಚ್ಚು ಪ್ರಭಾವಶಾಲಿಗಳಾಗಿ ಬೆಳೆದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು