ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಸ್‌ವ್ಯಾಲಿ ಹಗರಣ: ₹ 304 ಕೋಟಿ ಮೊತ್ತದ ಆಸ್ತಿ ಸ್ವಾಧೀನಪಡಿಸಿಕೊಂಡ ಇ.ಡಿ

Last Updated 30 ಏಪ್ರಿಲ್ 2021, 7:58 IST
ಅಕ್ಷರ ಗಾತ್ರ

ನವದೆಹಲಿ: ಬಹುಕೋಟಿ ರೋಸ್‌ ವ್ಯಾಲಿ ಪೊಂಜಿ ಹಗರಣದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಒಡಿಶಾದಲ್ಲಿರುವ ಕಂಪನಿಗಳ ಸಮೂಹಕ್ಕೆ ಸೇರಿದ್ದ ₹304 ಮೌಲ್ಯದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.

‘ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಒಡಿಶಾದಲ್ಲಿರುವ ರೋಸ್‌ವ್ಯಾಲಿ ಕಂಪನಿಗಳ ಸಮೂಹಕ್ಕೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಕೇಂದ್ರೀಯ ತನಿಖಾ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

’ವಶಪಡಿಸಿಕೊಂಡ ಆಸ್ತಿಯಲ್ಲಿ ₹47 ಕೋಟಿಯಷ್ಟು ಮೌಲ್ಯದ 412 ಚರ ಆಸ್ತಿಗಳು ಮತ್ತು ₹257 ಕೋಟಿ ಮೊತ್ತದ 426 ಸ್ಥಿರ ಆಸ್ತಿಗಳಿವೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಹಲವು ನಕಲಿ ಮತ್ತು ಕಲ್ಪಿತ ಯೋಜನೆಗಳಿಗಾಗಿ ಮೋಸದಿಂದ ಸಾರ್ವಜನಿಕರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿ, ಅವರಿಗೆ ಮರು ಪಾವತಿ ಮಾಡದಿರುವ‘ ಆರೋಪವನ್ನು ರೋಸ್ ವ್ಯಾಲಿ ಕಂಪನಿಗಳ ಸಮೂಹ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT