ಸೋಮವಾರ, ಮೇ 23, 2022
24 °C

ಡೊರ್ನಿಯರ್-228 ವಿಮಾನ ಸೇವೆಗೆ ನಾಳೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

 ನವದೆಹಲಿ(ಪಿಟಿಐ): ಭಾರತದಲ್ಲೇ ಅಭಿವೃದ್ಧಿಪಡಿಸಿದ ಅಲಯನ್ಸ್‌ನ ಡೊರ್ನಿಯರ್-228 ವಿಮಾನವು ದಿಬ್ರುಗಢ-ಪಾಸಿಘಾಟ್ ಮಾರ್ಗ ಮಧ್ಯೆ ಮಂಗಳವಾರದಿಂದ ಮೊಟ್ಟ ಮೊದಲ ಬಾರಿಗೆ ಸಂಚಾರ ಸೇವೆ ಆರಂಭಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. 

ಕೇಂದ್ರ ಸರ್ಕಾರ ನಿರ್ವಹಿಸುವ ಅಲಯನ್ಸ್ ವಿಮಾನ ಸಂಸ್ಥೆಯು, 17 ಸೀಟುಗಳನ್ನು ಒಳಗೊಂಡ 2 ಡೊರ್ನಿಯರ್-228 ವಿಮಾನಗಳನ್ನು ಭೋಗ್ಯಕ್ಕೆ ಪಡೆಯಲು ಎಚ್ಎಎಲ್ ಜೊತೆ ಫೆಬ್ರುವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಇದರ ಭಾಗವಾಗಿ ಏಪ್ರಿಲ್ 7ರಂದು ಮೊದಲ ಡೊರ್ನಿಯರ್-228 ವಿಮಾನವನ್ನು ಪಡೆದಿದೆ. 

ಈಶಾನ್ಯ ಭಾರತದ ಅಸ್ಸಾಂನ ದಿಬ್ರುಗಢ ಮತ್ತು ಅರುಣಾಚಲ ಪ್ರದೇಶದ ಪಾಸಿಘಾಟ್ ಮಧ್ಯೆ ಮಂಗಳವಾರ ಈ ವಿಮಾನದ ಮೊದಲ ಸಂಚಾರ ಆರಂಭವಾಗಲಿದೆ. ಈ ಮೂಲಕ ಈಶಾನ್ಯ ರಾಜ್ಯಗಳ ನಡುವಿನ ಸಂಪರ್ಕಕ್ಕೆ ಈ ವಿಮಾನ ಸೇವೆಯು ಒತ್ತು ನೀಡಲಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.