ಶನಿವಾರ, ಮಾರ್ಚ್ 25, 2023
22 °C
‘ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ ತಡೆಗೆ ಪರಿಣಾಮಕಾರಿ ಅನುಷ್ಠಾನ ಅತ್ಯಗತ್ಯ’ 

ಎಫ್‌ಎಟಿಎಫ್‌ ಪ್ರಯತ್ನಕ್ಕೆ ಮೋದಿ ಸೇರಿ ಜಿ 20 ಶೃಂಗಸಭೆ ನಾಯಕರ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಮ್‌, ಇಟಲಿ: ಭ್ರಷ್ಟಾಚಾರದ ತಡೆಯುವ ಹಣಕಾಸು ಕ್ರಿಯಾ ಕಾರ್ಯ‍ಪಡೆ (ಎಫ್‌ಎಟಿಎಫ್‌) ಪ್ರಯತ್ನಕ್ಕೆ ಪ್ರಧಾನಿ ಮೋದಿ ಸೇರಿ ಜಿ 20 ಶೃಂಗಸಭೆಯ ನಾಯಕರು ತಮ್ಮ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ಹಣಕಾಸು ಮಾರುಕಟ್ಟೆಗಳಲ್ಲಿ ವಿಶ್ವಾಸವನ್ನು ಬೆಳೆಸಲು,  ಹಣ ಅಕ್ರಮ ವರ್ಗಾವಣೆ, ಭಯೋತ್ಪಾದನೆಗೆ ಹಣ ಪ್ರಸರಣವನ್ನು ತಡೆಯಲು ಜಾರಿಗೆ ತಂದಿರುವ ಕ್ರಮಗಳ ಪರಿಣಾಮಕಾರಿ ಅನುಷ್ಠಾನ ಅತ್ಯಗತ್ಯ. ಸುಸ್ಥಿರ ಚೇತರಿಕೆ ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ನಾಯಕರು ಹೇಳಿದ್ದಾರೆ. 

ಈ ಬಗ್ಗೆ ರೋಮ್‌ ಭಾನುವಾರ ಘೋಷಣೆ ಹೊರಡಿಸಿದೆ. ‘ನಾವು ಹಣಕಾಸು ಕ್ರಿಯಾ ಕಾರ್ಯಪಡೆ ಮತ್ತು ಜಾಗತಿಕ ಜಾಲಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ಇವು  ಹಣ ಅಕ್ರಮ ವರ್ಗಾವಣೆ, ಭಯೋತ್ಪಾದನೆಗೆ ಹಣದ ಹರಿವು ತಡೆಯುವ ಕ್ರಮಗಳ  ಪರಿಣಾಮಕಾರಿ ಅನುಷ್ಠಾನವು ವಿಶ್ವಾಸವನ್ನು ಬೆಳೆಸಲು ಅಗತ್ಯವಾಗಿದೆ’ ಎಂದು ಘೋಷಣೆ ತಿಳಿಸಿದೆ. 

ಅಕ್ರಮ ಹಣದ ವರ್ಗಾವಣೆ, ಭಯೋತ್ಪಾದನೆಗೆ ಹಣದ ಹರಿವು ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ತನಿಖೆ ಮಾಡಲು ಎಫ್‌ಎಟಿಎಫ್‌ ಎಂಬ ಆಂತರಿಕ ಸರ್ಕಾರಿ ಸಂಸ್ಥೆಯನ್ನು 1989ರಲ್ಲಿ ಸ್ಥಾಪಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು