ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಚಿದ ವಿಷಯ: ಯೂಟ್ಯೂಬ್‌ನಿಂದ 45 ವಿಡಿಯೊಗಳು ಬ್ಲಾಕ್‌

Last Updated 26 ಸೆಪ್ಟೆಂಬರ್ 2022, 13:32 IST
ಅಕ್ಷರ ಗಾತ್ರ

ನವದೆಹಲಿ: ‘ಸುಳ್ಳು ಸುದ್ದಿ ಹಾಗೂ ತಿರುಚಿದ ವಿಷಯಗಳನ್ನು ಒಳಗೊಂಡಿದ್ದ ಒಟ್ಟು 45 ವಿಡಿಯೊಗಳನ್ನು 10 ಯೂಟ್ಯೂಬ್‌ ಚಾನೆಲ್‌ಗಳಿಂದ ಬ್ಲಾಕ್‌ ಮಾಡಲು ಸರ್ಕಾರ ಆದೇಶಿಸಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಸೋಮವಾರ ಹೇಳಿದ್ದಾರೆ.

‘ಸಮುದಾಯಗಳ ನಡುವೆ ಭೀತಿ ಹುಟ್ಟಿಸುವ ಹಾಗೂ ತಪ್ಪು ಕಲ್ಪನೆ ಮೂಡಿಸುವ ವಿಷಯಗಳನ್ನು ಈ ವಿಡಿಯೊಗಳು ಹೊಂದಿದ್ದವು’ ಎಂದು ಅವರು ತಿಳಿಸಿದ್ದಾರೆ.

‘ಈ ವಿಡಿಯೊಗಳನ್ನು ಒಟ್ಟಾರೆ 1.30 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದರು. ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಗೌರವಿಸುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ’ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

‘ಬ್ಲಾಕ್‌ ಮಾಡಲಾಗಿರುವ ವಿಡಿಯೊಗಳ ಪೈಕಿ ಕೆಲವು ವಿಡಿಯೊಗಳು ಅಗ್ನಿಪಥ್ ಯೋಜನೆ, ಭಾರತೀಯ ಸೇನೆ ಹಾಗೂ ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಪ್ಪು ಮಾಹಿತಿಗಳನ್ನು ಒದಗಿಸುವ ವಿಷಯಗಳನ್ನು ಹೊಂದಿದ್ದವು. ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ನೋಡಿದಾಗ ಈ ವಿಷಯಗಳು ಅತಿಸೂಕ್ಷ್ಮ ಹಾಗೂ ಸುಳ್ಳು ಎಂಬುದು ಗೊತ್ತಾಗಿತ್ತು’ ಎಂದು ವಿವರಿಸಿದೆ.

‘ಮಾಹಿತಿ ತಂತ್ರಜ್ಞಾನ ನಿಯಮ–2021ರ ಅಡಿಯಲ್ಲಿ ಈ ವಿಡಿಯೊಗಳನ್ನು ಬ್ಲಾಕ್‌ ಮಾಡಲು ಸೆಪ್ಟೆಂಬರ್‌ 23ರಂದು ಆದೇಶ ಹೊರಡಿಸಲಾಗಿತ್ತು’ ಎಂದೂ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT